ಭಾವುಕಾರಾಗಿ ನನಗಾಗಿ ಆತ ಮಾಡಿದ ತ್ಯಾಗ ದೊಡ್ಡದು ಎಂದು ಆತನಿಗೆ ಕ್ರೆಡಿಟ್ ನೀಡಿದ ಸೂರ್ಯ, ಯಾರಂತೆ ಗೊತ್ತೇ??

ಭಾವುಕಾರಾಗಿ ನನಗಾಗಿ ಆತ ಮಾಡಿದ ತ್ಯಾಗ ದೊಡ್ಡದು ಎಂದು ಆತನಿಗೆ ಕ್ರೆಡಿಟ್ ನೀಡಿದ ಸೂರ್ಯ, ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ದದ ಸರಣಿಯ ಮೊದಲನೇ ಪಂದ್ಯದಲ್ಲಿಯೇ ಭಾರತ ತಂಡ ಶುಭಾರಂಭ ಮಾಡಿದೆ. ಈ ಮೂಲಕ ಪೂರ್ಣಾವಧಿ ನಾಯಕರಾದ ಮೊದಲ ಪಂದ್ಯದಲ್ಲೇ ರೋಹಿತ್ ಶರ್ಮಾ ಗೆದ್ದು ಬೀಗಿದರೇ ಇನ್ನು ಕೋಚ್ ಆದ ಮೊದಲ ಪಂದ್ಯದಲ್ಲೇ ಗೆದ್ದದ್ದು ಕನ್ನಡಿಗ ರಾಹುಲ್ ದ್ರಾವಿಡ್ ಗೆ ಸಮಾಧಾನ ತಂದಿತು. ಸೋಲಿನ ಅಂಚಿನಲ್ಲಿದ್ದ ಭಾರತ ತಂಡಕ್ಕೆ ರಿಷಭ್ ಪಂತ್ ಬೌಂಡರಿ ಸಿಡಿಸಿದ ಮೇಲೆ, ಭಾರತೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ಆರಂಭದಲ್ಲಿ ನಿಧಾನಗತಿಯ ಆಟವಾಡಿದರೂ, ನಂತರ ಬಿರುಸಿನ ಆಟವಾಡಿ 165 ರನ್ ಗಳಿಸಿತು. ಮಾರ್ಟಿನ್ ಗಪ್ಟಿಲ್ ಅರ್ಧ ಶತಕಗಳಿಸಿದರು. ಭಾರತದ ಪರ ಆರ್.ಅಶ್ವಿನ್ ಉತ್ತಮ ಬೌಲಿಂಗ್ ಮಾಡಿ ಎರಡು ವಿಕೇಟ್ ಕಬಳಿಸಿದರು. ಉಳಿದ ಬೌಲರ್ ಗಳು ವಿಕೇಟ್ ಪಡೆದುಕೊಂಡರೂ, ದುಬಾರಿಯಾದರು. ನಂತರ ಬ್ಯಾಟಿಂಗ್ ಗೆ ಇಳಿದ ಭಾರತ ತಂಡ ಉತ್ತಮ ಆರಂಭ ಪಡೆಯಿತು. ರೋಹಿತ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ, ಕೊನೆಯವರೆಗೆ ಬ್ಯಾಟಿಂಗ್ ಮಾಡಲಿಲ್ಲ. ಇನ್ನು ಮೂರನೇ ಕ್ರಮಾಂಕದಲ್ಲಿ ಆಡಿದ ಸೂರ್ಯ ಕುಮಾರ್ ಯಾದವ್, ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಭಾರತಕ್ಕೆ ಗೆಲುವನ್ನ ಹತ್ತಿರವಾಗಿಸಿದರು.

40 ಎಸೆತಗಳಲ್ಲಿ 62 ರನ್ ಗಳಿಸಿದ ಸೂರ್ಯ ಮೈದಾನದ ಮೂಲೆಮೂಲೆಗೂ ಚೆಂಡನ್ನ ಅಟ್ಟಿದರು‌. ಆದರೇ ಔಟಾದ ನಂತರ, ಸೋಲಿನ ಭೀತಿಯಲ್ಲಿ ಇದ್ದ ಭಾರತ ತಂಡವನ್ನು ರಿಷಭ್ ಪಂತ್ ಗೆಲುವಿನ ದಡ ಮುಟ್ಟಿಸಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಸೂರ್ಯ ಕುಮಾರ್ ಯಾದವ್ ತಮ್ಮ ಈ ಪ್ರದರ್ಶನಕ್ಕೆ ಆತನೇ ಕಾರಣ ಎಂದು ವಿರಾಟ್ ಕೊಹ್ಲಿಯನ್ನ ಮನತುಂಬಿ ಹೊಗಳಿ ಭಾವುಕರಾದರು. ಆತ ನನಗಾಗಿ ಅವರ ಮೂರನೇ ಸ್ಥಾನವನ್ನು ತ್ಯಾಗ ಮಾಡಿದ ಮಹಾನುಭಾವ. ನನಗೆ ಹಲವಾರು ಅವಕಾಶ ನೀಡಿ, ನನ್ನಲ್ಲಿನ ಪ್ರತಿಭೆ ಹೊರ ಚೆಲ್ಲುವಂತೆ ಮಾಡಿದರು. ನಾನೀಗ ಮೂರನೇ ಕ್ರಮಾಂಕದಲ್ಲಿ ಪರಿಪಕ್ವ ಬ್ಯಾಟ್ಸಮನ್ ಆಗಲು ಅವರೇ ಕಾರಣ ಎಂದು ವಿರಾಟ್ ಕೊಹ್ಲಿಯವರನ್ನ ಕೊಂಡಾಡಿದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.