ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಇಷ್ಟು ದಿವಸ ಸುಮ್ಮನೆ ಇದ್ದ ಅಶ್ವಿನಿ ರವರು ಕೊನೆಗೂ ಎಲ್ಲಾ ನೋವನ್ನು ಹೊರಹಾಕಿ ಹೇಳಿದ್ದೇನು ಗೊತ್ತೇ??

3

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಬರೋಬ್ಬರಿ ಮೂರು ವಾರಗಳು ಕಳೆದಿವೆ. ಇನ್ನು ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಎಲ್ಲಿಯೂ ಕೂಡ ಅಳದೆ ಮನೆಯ ಸೊಸೆಯಾಗಿ ಸಾಕಷ್ಟು ಪ್ರಬುದ್ಧರಾಗಿ ಜವಾಬ್ದಾರಿಯುತ ನಡವಳಿಕೆಯನ್ನು ತೋರಿದ್ದಾರೆ. ಇಂತಹ ಸಂದರ್ಭದಲ್ಲಿ ಕುಟುಂಬವನ್ನು ಹೇಗೆ ಸಂತೈಸಬೇಕು ಎಂಬುದನ್ನು ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ಆ ಮಹಾತಾಯಿ ಸಮರ್ಥವಾಗಿ ನಿಭಾಯಿಸಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೀವನದಲ್ಲಿ ಅದೆಷ್ಟೋ ಒಳ್ಳೆಯ ಕೆಲಸಗಳನ್ನು ಹಾಗೂ ಒಳ್ಳೆಯ ಆಯ್ಕೆಗಳನ್ನು ಮಾಡಿರುತ್ತಾರೆ. ಇವೆಲ್ಲದಕ್ಕಿಂತ ಶ್ರೇಷ್ಠವಾದದ್ದು ಅಶ್ವಿನಿ ಅವರನ್ನು ಅವರ ಮಡದಿಯನ್ನಾಗಿ ಆಯ್ಕೆ ಮಾಡಿಕೊಂಡಿರುವುದು. ತನ್ನ ಎರಡು ಭುಜದ ಮೇಲೆ ಹೆಣ್ಣುಮಕ್ಕಳ ಕಣ್ಣೀರಿನ ಬಿಸಿ ಹಾಕುತ್ತಿದ್ದರು ಕೂಡ ಅವರಿಬ್ಬರಿಗೆ ಸಮಾಧಾನ ಮಾಡಿಕೊಂಡು ಎಲ್ಲವನ್ನು ನಿರ್ವಹಿಸಿದ್ದರು ದೊಡ್ಡಮನೆಯ ಅಶ್ವಿನಿ ಪುನೀತ್ ರಾಜಕುಮಾರ್.

ಗಂಡನನ್ನು ಕಳೆದು ಕೊಂಡಿರುವ ಎಲ್ಲಾ ದುಃಖವನ್ನು ಕೂಡ ತನ್ನ ಮನಸ್ಸಿನಲ್ಲಿ ಅದುಮಿಟ್ಟುಕೊಂಡು ಹೊರಗೆ ಶಾಂತಮೂರ್ತಿ ಆಗಿ ಕಾಣಿಸಿಕೊಂಡಿದ್ದರು ಅಶ್ವಿನಿಯವರು. ಇನ್ನು ಮೊನ್ನೆ ನಡೆದ ಪುನೀತ್ ನಮನ ಕಾರ್ಯಕ್ರಮದಲ್ಲಿ ಕೂಡ ರಾಘಣ್ಣ ನಿಂದ ಹಿಡಿದು ಶಿವಣ್ಣನವರೆಗೆ ಎಲ್ಲರೂ ಕೂಡ ಅತ್ತು ತಮ್ಮ ದುಃಖವನ್ನು ತೋಡಿಕೊಂಡಿದ್ದರು.

ಆದರೆ ಅಶ್ವಿನಿ ಅವರು ಮಾತ್ರ ತಮ್ಮ ದುಃಖವನ್ನು ಯಾರ ಬಳಿಯು ಕೂಡ ತೋರಿಸಿಕೊಳ್ಳದೆ ಮಗಳೊಂದಿಗೆ ಕಾರ್ಯಕ್ರಮದ ಅರ್ಧದಲ್ಲಿಯೇ ಎದ್ದು ಹೊರಟು ಹೋಗಿದ್ದರು. ಆದರೆ ಮನೆಗೆ ಹೋದ ಮರು ಕ್ಷಣದಲ್ಲೇ ಪುನೀತ್ ರಾಜಕುಮಾರ್ ಅವರ ಕುರಿತಂತೆ ಮೊದಲ ಬಾರಿಗೆ ಅಶ್ವಿನಿ ಅವರು ಬರೆಯುವುದರ ಮೂಲಕ ಜನರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಹೌದು ಗೆಳೆಯರೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಭಾವನಾತ್ಮಕ ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಶ್ರೀ ಪುನೀತ್ ರಾಜಕುಮಾರ್ ಅವರ ಅಗಲಿಕೆ ನಮ್ಮಷ್ಟೇ ನಿಮಗೂ ಕೂಡ ದುಃಖವನ್ನು ತಂದಿದೆ. ಅವರಿಗೆ ನಿಷ್ಕಲ್ಮಶ ಪ್ರೀತಿಯಿಂದ ನೀವು ಅವರನ್ನು ಪವರ್ ಸ್ಟಾರ್ ಆಗಿ ರೂಪಿಸಿದ್ದೀರಿ. ಇಂತಹ ದುಃಖದ ಸಮಯದಲ್ಲಿ ಕೂಡ ನೀವು ಸಂಯಮವನ್ನು ಕಳೆದುಕೊಳ್ಳದೆ ಪುನೀತ್ ರಾಜಕುಮಾರ್ ರವರಿಗೆ ಗೌರವಯುತವಾಗಿ ಬೀಳ್ಕೊಡುಗೆಯನ್ನು ನೀಡಿದ್ದೀರಿ. ಕೇವಲ ಸಿನಿಮಾ ಪ್ರೇಮಿಗಳಷ್ಟೇ ಮಾತ್ರವಲ್ಲದೆ ಇಡೀ ಭಾರತ ದೇಶದಲ್ಲಿ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುವುದನ್ನು ನೋಡಿ ಮನಸ್ಸು ಭಾರವಾಗಿದೆ.

ಅವರನ್ನು ಮಾದರಿಯಾಗಿ ರಿಸಿಕೊಂಡು ನೀವು ಮಾಡುವ ಒಳ್ಳೆಯ ಕೆಲಸದಲ್ಲಿ ಅವರನ್ನು ಜೀವಂತವಾಗಿರಿಸಿದ್ದೀರಿ. ವಿಶ್ವಾದ್ಯಂತ ಶೋಕವನ್ನು ಹಂಚಿಕೊಂಡು ನಮ್ಮ ಕುಟುಂಬದ ಬೆಂಬಲಕ್ಕೆ ನಿಂತ ಎಲ್ಲ ಅಭಿಮಾನಿ ದೇವರುಗಳಿಗೆ ಕೂಡ ಇಡೀ ಕುಟುಂಬದಿಂದ ಧನ್ಯವಾದಗಳು ಇಂತಿ ನಿಮ್ಮ ಅಶ್ವಿನಿ ಪುನೀತ್ ರಾಜಕುಮಾರ್ ಎಂಬುದಾಗಿ ಬರೆದಿದ್ದಾರೆ. ಅಶ್ವಿನಿ ಅವರು ಬರೆದಿರುವ ಪ್ರತಿಯೊಂದು ಅಕ್ಷರದಲ್ಲಿ ಕೂಡ ಅವರ ದುಃಖದ ತೀವ್ರತೆ ಎದ್ದು ಕಾಣುತ್ತಿದೆ. ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಕುರಿತಂತೆ ಕಂಡಿರುವ ಕನಸುಗಳು ಅವರ ಪತ್ನಿ ಅಶ್ವಿನಿಯವರ ಮೂಲಕ ನನಸಾಗಲಿ ಎಂಬುದು ಅಭಿಮಾನಿಗಳ ಹಾರೈಕೆ. ಪಿಆರ್ ಕೆ ಪ್ರೊಡಕ್ಷನ್ ಮೂಲಕ ಪುನೀತ್ ರಾಜಕುಮಾರ್ ಅವರ ಎಲ್ಲಾ ಕನಸುಗಳನ್ನು ಅಶ್ವಿನಿಯವರ ಈಡೇರಿಸಲಿ ಎಂಬುದು ನಮ್ಮ ಹಾರೈಕೆ.