ಪುನೀತ್ ರವರ ಕುರಿತಂತೆ ಮತ್ತೊಂದು ವಿಚಾರ ಬೆಳಕಿಗೆ ಲೈವ್ ನಲ್ಲಿಯೇ ಪಬ್ಲಿಕ್ ಟಿವಿ ರಂಗಣ್ಣ ಹೇಳಿದ್ದೇನು ಗೊತ್ತೇ??

ಪುನೀತ್ ರವರ ಕುರಿತಂತೆ ಮತ್ತೊಂದು ವಿಚಾರ ಬೆಳಕಿಗೆ ಲೈವ್ ನಲ್ಲಿಯೇ ಪಬ್ಲಿಕ್ ಟಿವಿ ರಂಗಣ್ಣ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ತಾವು ಬದುಕಿದ್ದಷ್ಟು ದಿನ ಕೂಡ ಎಷ್ಟು ಪರೋಪಕಾರ ವಾಗಿ ಬದುಕಿದರು ಎಂಬುದು ಅವರ ಮರಣಾನಂತರ ಈಗ ನಮಗೆ ತಿಳಿದು ಬಂದಿದೆ. ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಾವು ಬದುಕಿದ್ದಷ್ಟು ದಿನ ಕೂಡ ಎಲ್ಲೂ ಕೂಡ ತಾವು ಮಾಡಿರುವ ಒಳ್ಳೆಯ ಕೆಲಸಗಳ ಕುರಿತಂತೆ ಹೇಳಿಕೊಂಡಿರಲಿಲ್ಲ.

ಇನ್ನು ಇತ್ತೀಚಿಗಷ್ಟೇ ಪಬ್ಲಿಕ್ ಟಿವಿಯ ಮುಖ್ಯಸ್ಥರಾಗಿರುವ ರಂಗಣ್ಣನವರ ಬಾಯಿಂದ ಪುನೀತ್ ರಾಜಕುಮಾರ್ ಅವರು ಮಾಡಿರುವ ಕೆಲಸದ ಕುರಿತಂತೆ ಎಲ್ಲರಿಗೂ ತಿಳಿದಿದೆ. ರಂಗಣ್ಣನವರ ಸ್ನೇಹಿತರಾಗಿರುವ ನಗರಪಾಲಿಕೆಯ ಸದಸ್ಯರೊಬ್ಬರು ಈ ವಿಚಾರದ ಕುರಿತಂತೆ ರಂಗಣ್ಣನವರಿಗೆ ಹೇಳಿದರಂತೆ. ಅದೇನೆಂದರೆ ಅವರ ಕಾರ್ಯಕ್ಷೇತ್ರದಲ್ಲಿ ಬರುವ ಸರ್ಕಾರಿ ಶಾಲೆಯೊಂದರಲ್ಲಿ ಬರುವ ಎಲ್ಲ ಮಕ್ಕಳಿಗೂ ಕೂಡ ಶಾಲೆಯ ಶುಲ್ಕವನ್ನು ಕಟ್ಟುವುದು ಸಾಕಷ್ಟು ಕಷ್ಟವಾಗಿತ್ತಂತೆ.

ಇನ್ನು ಇದನ್ನು ಪಾಲಿಕೆ ಸದಸ್ಯರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ತಿಳಿಸಿದ್ದರಂತೆ. ಇದನ್ನು ತಿಳಿದಂತಹ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೆಲ್ಮೆಟ್ ಹಾಕಿಕೊಂಡು ಬಂದು ಆ ಶಾಲೆಯ ಎಲ್ಲಾ ಮಕ್ಕಳ ಫೀಸನ್ನು ವಾರ್ಷಿಕವಾಗಿ 20 ಲಕ್ಷದಂತೆ ಕಟ್ಟಿಕೊಂಡು ಬರುತ್ತಿದ್ದರಂತೆ. ಆದರೆ ಇಂತಹ ಒಳ್ಳೆಯ ವಿಷಯಗಳನ್ನು ಎಲ್ಲೂ ಕೂಡ ಪ್ರಚಾರವಾಗದಂತೆ ಗೌಪ್ಯವಾಗಿ ಇಟ್ಟುಕೊಂಡು ಬಂದು ಎಲ್ಲರಿಗೂ ಸಹಾಯ ಮಾಡುತ್ತಿದ್ದರು. ಇದಕ್ಕೆ ಅವರನ್ನು ಕರ್ನಾಟಕದ ಯುವರತ್ನ ಎಂಬುದಾಗಿ ಕರೆಯುತ್ತಿದ್ದರು. ಎಲ್ಲರೂ ಪ್ರಚಾರಕ್ಕಾಗಿ ಸಹಾಯ ಮಾಡಿದರೆ ಪುನೀತ್ ರಾಜಕುಮಾರ್ ರವರು ಮಾತ್ರ ಕಷ್ಟದಲ್ಲಿರುವವರಿಗೆ ಸಹಾಯ ವಾಗಬೇಕೆಂಬ ದೃಷ್ಟಿಯಿಂದ ಸಹಾಯವನ್ನು ಮಾಡುತ್ತಿದ್ದರು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.