ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿಯ ಮುಂದಿನ ಪಾತ್ರವೇನು ಎಂಬುದರ ಕುರಿತಂತೆ ವಿವರಿಸಿದ ರೋಹಿತ್ ಶರ್ಮಾ. ಏನಂತೆ ಗೊತ್ತೇ??

ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿಯ ಮುಂದಿನ ಪಾತ್ರವೇನು ಎಂಬುದರ ಕುರಿತಂತೆ ವಿವರಿಸಿದ ರೋಹಿತ್ ಶರ್ಮಾ. ಏನಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ಟಿ-20ವಿಶ್ವಕಪ್ ಮುಗಿದು ಆಸ್ಟ್ರೇಲಿಯಾ ಚಾಂಪಿಯನ್ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. ಇನ್ನು ವಿಶ್ವಕಪ್ ವಿರಾಟ್ ಕೊಹ್ಲಿ ನಾಯಕತ್ವದ ಟಿ-ಟ್ವೆಂಟಿಯ ಕೊನೆಯ ಪಂದ್ಯ ಆಗಿತ್ತು. ಇನ್ನು ಈಗಾಗಲೇ ಪ್ರಾರಂಭವಾಗಿರುವ ಭಾರತ ಹಾಗೂ ನ್ಯೂಜಿಲೆಂಡ್ ಸರಣಿಯಲ್ಲಿ ಟಿ20 ನಾಯಕನಾಗಿ ರೋಹಿತ್ ಶರ್ಮಾ ರವರು ಆಯ್ಕೆಯಾಗಿದ್ದು ಈಗಾಗಲೇ ಮೊದಲ ಎರಡು ಪಂದ್ಯವನ್ನು ಗೆದ್ದು ಬಿಟ್ಟಿದ್ದಾರೆ.

ಇನ್ನು ಈ ಸರಣಿಗೆ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಿದ್ದು ಮುಂದಿನ ಸರಣಿಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಭಾರತ ಹಾಗೂ ನ್ಯೂಜಿಲೆಂಡ್ ಸರಣಿಗಳು ಪ್ರಾರಂಭವಾಗುವುದಕ್ಕಿಂತ ಮುಂಚೆ ನಡೆದಿರುವ ಪ್ರೆಸ್ ಮೀಟ್ ನಲ್ಲಿ ರೋಹಿತ್ ಶರ್ಮಾ ರವರು ನಾಯಕನಾದ ನಂತರ ಟಿ-ಟ್ವೆಂಟಿ ತಂಡದಲ್ಲಿ ವಿರಾಟ್ ಕೊಹ್ಲಿ ಅವರ ಪಾತ್ರವೇನು ಎಂಬುದರ ಬಗ್ಗೆ ರೋಹಿತ್ ಶರ್ಮಾ ಅವರು ವಿವರವಾಗಿ ಉತ್ತರಿಸಿದ್ದಾರೆ. ನಾನು ಟೀ ಟ್ವೆಂಟಿ ಕ್ರಿಕೆಟ್ ತಂಡದ ನಾಯಕನಾಗಿ ಇರಬಹುದು ಆದರೆ ವಿರಾಟ್ ಕೊಹ್ಲಿ ಅವರು ತಂಡದಲ್ಲಿನಿರ್ವಹಿಸಿದಸ ಪಾತ್ರವನ್ನೇ ಮತ್ತೆ ಮುಂದುವರಿಸಲಿದ್ದಾರೆ.

ಅವರು ನಮ್ಮ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಇನ್ನು ಪ್ರತಿಯೊಂದು ಆಟಕ್ಕೆ ಆಟಗಾರನ ಪಾತ್ರ ಕೂಡ ಬದಲಾವಣೆ ತಂಡದಲ್ಲಿ ನಿಶ್ಚಯವಾಗಿದ್ದು ಇದಕ್ಕೆ ಪ್ರತಿಯೊಬ್ಬ ಆಟಗಾರರು ಕೂಡ ಸಿದ್ಧರಾಗಿರುತ್ತಾರೆ. ಇದೇ ವೇಳೆ ಕೊಹ್ಲಿ ಅವರು ಮುಂದಿನ ಸರಣಿಗಳಿಗೆ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ ಅವರ ಅನುಭವ ತಂಡಕ್ಕೆ ಅತ್ಯಗತ್ಯವಾಗಿದೆ ಎಂಬುದನ್ನು ಹೇಳಿದ್ದಾರೆ. ಅವರ ಆಗಮನ ಭಾರತೀಯ ಟಿ20 ಕ್ರಿಕೆಟ್ ತಂಡದ ಬಲವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.