ಜಗತ್ತಿನ ಅತಿ ದೊಡ್ಡ ನೀಲಿ ತಿಮಿಂಗಿಲಗಳು ಎಲ್ಲಿವೆ ಗೊತ್ತಾ? ಅವು ತಿನ್ನುವ ಆಹಾರದ ಪ್ರಮಾಣ ಹಾಗೂ ನೀವರಿಯದ ಮಾಹಿತಿ.

ಜಗತ್ತಿನ ಅತಿ ದೊಡ್ಡ ನೀಲಿ ತಿಮಿಂಗಿಲಗಳು ಎಲ್ಲಿವೆ ಗೊತ್ತಾ? ಅವು ತಿನ್ನುವ ಆಹಾರದ ಪ್ರಮಾಣ ಹಾಗೂ ನೀವರಿಯದ ಮಾಹಿತಿ.

ನಮಸ್ಕಾರ ಸ್ನೇಹಿತರೇ ಬ್ಲೂ ವೆಲ್ ಅಥವಾ ನೀಲಿ ತಿಮಿಂಗಿಲಗಳ ಬಗ್ಗೆ ನೀವು ಕೇಳಿರಬಹುದು ಇವು ತಿಮಿಂಗಿಲ ಜಾತಿಯಲ್ಲೇ ಅತ್ಯಂತ ದೊಡ್ಡ ತಿಮಿಂಗಿಲಗಳು. ಎರಡು ದೊಡ್ಡ ಡೈನೊಸಾರ್ಸ್ ಗಿಂತಲೂ ದೊಡ್ಡದಾಗಿರುತ್ತವೆ ನೀಲಿ ತಿಮಿಂಗಲಗಳು. ಇವುಗಳ ಬಗ್ಗೆ ವಾಷಿಂಗ್ಟನ್‌ನಲ್ಲಿರುವ ಸ್ಮಿತ್‌ಸೋನಿಯನ್ ಇನ್‌ಸ್ಟಿಟ್ಯೂಷನ್‌ನ ನ್ಯಾಷನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯಲ್ಲಿ ಪಳೆಯುಳಿಕೆ ಸಮುದ್ರ ಸಸ್ತನಿಗಳ ಅಧ್ಯಯನದ ಸಹ-ಲೇಖಕ ನಿಕ್ ಪಿಯೆನ್ಸನ್ ಒದು ಅಧ್ಯಯನದ ಮೂಲಕ ನೀಲಿ ತಿಮಿಂಗಿಲಗಳ ಬಗ್ಗೆ ವಿಶೇಷ ವಿಷಯವೊಂದನ್ನು ಹೊರಹಾಕಿದ್ದಾರೆ.

ಅವರ ಪ್ರಕಾರ 2010 – 2019ರವರೆಗೆ ಅಟ್ಲಾಂಟಿಕ್, ಪೆಸಿಫಿಕ್ ಮತ್ತು ದಕ್ಷಿಣ ಸಾಗರಗಳಲ್ಲಿ 321 ಪ್ರತ್ಯೇಕ ತಿಮಿಂಗಿಲಗಳನ್ನು ಪತ್ತೆಹಚ್ಚಲಾಗಿದೆ. ನೀಲಿ ತಿಮಿಂಗಿಲಗಳು 3 ಪಟ್ಟು ಹೆಚ್ಚು ಆಹಾರ ಸೇವಿಸುವುದು ಕಂಡುಬಂದಿದೆ. ಈ ಅಧ್ಯಯನದ ಪ್ರಕಾರ, ಹಂಪ್‌ಬ್ಯಾಕ್, ಫಿನ್, ಬೋಹೆಡ್, ರೈಟ್, ಅಂಟಾರ್ಕ್ಟಿಕ್ ಮಿಂಕೆ ಮತ್ತು ಬ್ರೈಡ್‌ನ ಪ್ರಬೇಧಗಳು ಕೂಡ ಹೆಚ್ಚು ಪ್ರಮಾಣದಲ್ಲಿ ಆಹಾರ ಸೇವಿಸುತ್ತವೆ. ಉತ್ತರ ಪೆಸಿಫಿಕ್ ಹಂಪ್‌ಬ್ಯಾಕ್ ತಿಮಿಂಗಿಲಗಳು ಪ್ರತಿದಿನ 9 ಟನ್ ಗಳಷ್ಟು ಸೇವಿಸಿದರೆ, ಫಿನ್ ತಿಮಿಂಗಿಲಗಳು 8 ಟನ್‌ಗಳಷ್ಟು ಆಹಾರ ಸೇವಿಸುತ್ತವೆ. ನೀಲಿ ತಿಮಿಂಗಿಲಗಳು 110 ಅಡಿ ಉದ್ದ ಮತ್ತು 200 ಟನ್‌ಗಳಷ್ಟು ತೂಕ ಹೊಂದಿರುತ್ತವೆ.

ನಿರಂತರ ಅವಲೋಕನದ ಮೂಲಕ ಪ್ರತಿ ತಿಮಿಂಗಿಲವು ಎಷ್ಟು ಬಾರಿ ಆಹಾರ ಸೇವಿಸುತ್ತವೆ, ಎಷ್ಟು ಪ್ರಮಾಣದಲ್ಲಿ ಸೇವಿಸುತ್ತವೆ ಎಂಬುದನ್ನು ಸಂಶೋಧಕರು ನಿರ್ಧರಿಸುತ್ತಾರೆ. ಇನ್ನು ಕ್ಯಾಮರಾ, ಡ್ರೋನ್ ಮೊದಲಾದವುಗಳನ್ನು ತಿಮಿಂಗಿಲಗಳಿಗೆ ಅಳವಡಿಸಿ ಅವುಗಳ ಬಗ್ಗೆ ಅಧ್ಯಯನ ಮಾಡಲಾಗುತ್ತದೆ. ಬಾಲೀನ್ ತಿಮಿಂಗಿಲಗಳು ವರ್ಷಪೂರ್ತಿ ಏನನ್ನೂ ತಿನ್ನುವುದಿಲ್ಲ ಅವುಗಳು ವರ್ಷದಲ್ಲಿ 100 ದಿನಗಳು ಮಾತ್ರ ಆಹಾರ ಸೇವಿಸುತ್ತವೆ. ನೀಲಿ ತಿಮಿಂಗಲವು ಒಂದು ದಿನದಲ್ಲಿ 16 ಟನ್ ಆಹಾರ ಸೇವಿಸುತ್ತದೆ. ಅಂದರೆ ವರ್ಷದಲ್ಲಿ 1,600 ಟನ್‌ಗಳಷ್ಟು ಆಹಾರ ಸೇವಿಸುತ್ತವೆ. 20ನೇ ಶತಮಾನದನ ನಂತರ ತಿಮಿಂಗಿಲಗಳ ಬೇಟೆಯಿಂದ ಬಲೀನ್ ತಿಮಿಂಗಿಲಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಅಧ್ಯಯನಗಳು ತಿಳಿಸುತ್ತವೆ.