ಆರ್ಸಿಬಿ ಪ್ಲೇಯರ್ ಗಳ ಹವಾ, ನ್ಯೂಜಿಲೆಂಡ್ ವಿರುದ್ದ ಕಣಕ್ಕಿಳಿಯಲಿರುವ ಭಾರತೀಯ ಸಂಭವನೀಯ ತಂಡ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇದೀಗ ಭಾರತ ವಿಶ್ವಕಪ್ ಮುಗಿದ ಬೆನ್ನಲ್ಲೇ, ಇತ್ತ ಭಾರತ ತಂಡ ನ್ಯೂಜಿಲೆಂಡ್ ವಿರುದ್ದದ ಸರಣಿಗೆ ಸಿದ್ದವಾಗುತ್ತಿದೆ. ಕೆಲವೇ ದಿನಗಳ ಹಿಂದಷ್ಟೇ ಹದಿನಾರು ಆಟಗಾರರ ತಂಡವನ್ನ ಬಿಸಿಸಿಐ ಘೋಷಿಸಿತ್ತು. ರೋಹಿತ್ ಶರ್ಮಾ ಮೊದಲ ಭಾರಿ ಪೂರ್ಣ ಪ್ರಮಾಣದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಕನ್ನಡಿಗ ಕೆ.ಎಲ್.ರಾಹುಲ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಸರಣಿಗೆ ಭಾರತದ ನಾಯಕ ವಿರಾಟ್ ಕೊಹ್ಲಿ, ಆಲ್ ರೌಂಡರ್ ರವೀಂದ್ರ ಜಡೇಜಾ, ವೇಗದ ಬೌಲರ್ ಗಳಾದ ಮಹಮದ್ ಶಮಿ ಹಾಗೂ ಜಸಪ್ರಿತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ನ್ಯೂಜಿಲೆಂಡ್ ವಿರುದ್ದ ಮೊದಲ ಪಂದ್ಯಕ್ಕೆ ಆಡುವ ಹನ್ನೊಂದರ ಬಳಗ ಹೀಗಿದೆ.

ತಂಡದ ಆರಂಭಿಕರಾಗಿ ನಾಯಕ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಆಡುವುದು ಖಚಿತವಾಗಿದೆ. ಇನ್ನು ಮೂರನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡಲಿದ್ದಾರೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯ ಕುಮಾರ್ ಯಾದವ್ ಹಾಗೂ ಐದನೇ ಕ್ರಮಾಂಕದಲ್ಲಿ ವಿಕೇಟ್ ಕೀಪರ್ ಬ್ಯಾಟ್ಸಮನ್ ರಿಷಭ್ ಪಂತ್ ಆಡಲಿದ್ದಾರೆ. ಆರನೇ ಕ್ರಮಾಂಕದಲ್ಲಿ ಐಪಿಎಲ್ ಹೀರೋ ವೆಂಕಟೇಶ್ ಅಯ್ಯರ್ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಏಳನೇ ಕ್ರಮಾಂಕದಲ್ಲಿ ಆಲ್ ರೌಂಡರ್ ಅಕ್ಷರ್ ಪಟೇಲ್ ಆಡಿದರೇ, ಎಂಟನೇ ಕ್ರಮಾಂಕದಲ್ಲಿ ವೇಗಿ ದೀಪಕ್ ಚಾಹರ್ ಆಡಲಿದ್ದಾರೆ.

ಒಂಬತ್ತನೇ ಕ್ರಮಾಂಕದಲ್ಲಿ ಐಪಿಎಲ್ ನ ಪರ್ಪಲ್ ಪಟೇಲ್ ಹರ್ಷಲ್ ಪಟೇಲ್ ಆಡಲಿದ್ದು, ಹತ್ತನೇ ಕ್ರಮಾಂಕದಲ್ಲಿ ಮಹಮದ್ ಸಿರಾಜ್ ಹಾಗೂ ಹನ್ನೊಂದನೇ ಕ್ರಮಾಂಕದಲ್ಲಿ ಯುಜವೇಂದ್ರ ಚಾಹಲ್ ಆಡಲಿದ್ದಾರೆ. ತಂಡದಲ್ಲಿ ಐವರು ತಜ್ಞ ಬ್ಯಾಟ್ಸಮನ್, ಇಬ್ಬರು ಆಲ್ ರೌಂಡರ್ ಗಳು ಹಾಗೂ ನಾಲ್ವರು ಬೌಲರ್ ಗಳು ತಂಡದಲ್ಲಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ. ಒಟ್ಟಾರೆಯಾಗಿ ತಂಡ ಇಂತಿದೆ – ರೋಹಿತ್ ಶರ್ಮಾ,ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮಹಮದ್ ಸಿರಾಜ್, ಯುಜವೇಂದ್ರ ಚಾಹಲ್.

Post Author: Ravi Yadav