ಚಳಿಗಾಲಕ್ಕೆ ಬೇಕೇ ಬೇಕು ಈ ಸಾರು, ಥಟ್ ಅಂತ ಕೆಲವೇ ಕೆಲವು ನಿಮಿಷಗಳಲ್ಲಿ ಕಾಯಿ ಸಾರು ಮಾಡೋದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಚಳಿಗಾಲ ಶುರುವಾಗಿ ಬಿಡ್ತು. ಈ ಸಮಯಕ್ಕೆ ಹೊಂದುಕೊಳ್ಳುವಂಥ ಸಾರೊಂದು ಇಲ್ಲದಿದ್ರೆ ಹೇಗೆ? ಸುಲಭವಾಗಿ ಮಾಡಬಹುದಾದ ಸಾರಿನ ರೆಸಿಪಿಯನ್ನು ಹೇಳಿಕೊಡ್ತಿವಿ ನೋಡಿ. ಕಾಯಿಸಾರು ಮಾಡುವುದಕ್ಕೆ ಬೇಕಾಗುವ ಸಾಮಗ್ರಿಗಳು: ಒಣ ಕೊಬ್ಬರಿ ಅರ್ಧದಷ್ಟು, ಒಂದು ಚಮಚ ಕಾಳುಮೆಣಸು, ಒಂದು ಚಮಚ ಜೀರಿಗೆ, ೪-೫ ಬ್ಯಾಡಗಿ ಮೆಣಸು, ೪-೫- ಎಸಳು ಬೆಳ್ಳುಳ್ಳಿ, ಹುಣಸೆ ಹಣ್ಣು ಹಾಗೂ ಉಪ್ಪು ಸ್ವಲ್ಪ.

ಮಾಡುವ ವಿಧಾನ: ಒಣಕೊಬ್ಬರಿಯನ್ನು ದೊಡ್ಡ ದೊಡ್ಡ ಹೋಳುಗಳನ್ನಾಗಿ ಮಾಡಿಕೊಳ್ಳಿ. ಒಂದು ಪ್ಯಾನ್ ಗೆ ಎಣ್ಣೆಯನ್ನು ಹಾಕಿ. ಇದು ಬಿಸಿಯಾದ ನಂತರ ಒಂದು ಚಮಚ ಕಾಳುಮೆಣಸು, ಒಂದು ಚಮಚ ಜೀರಿಗೆ, ೪-೫ ಬ್ಯಾಡಗಿ ಮೆಣಸನ್ನು ಹಾಕಿ ಹುರಿಯಿರಿ. ಇದಕ್ಕೆ ೪-೫- ಎಸಳು ಬೆಳ್ಳುಳ್ಳಿಯನ್ನು ಸೇರಿಸಿ. ನಂತರ ಕೊಬ್ಬರಿ ಹೋಳುಗಳನ್ನು ಹಾಕಿ ಹುರಿದುಕೊಳ್ಳಿ. ಕೊಬ್ಬರಿಯ ಬದಲು ಹಸಿ ತೆಂಗಿನ ಕಾಯನ್ನೂ ಬಳಸಬಹುದು. ಆದರೆ ಕೊಬ್ಬರಿ ಹಾಕಿದರೆ ರುಚಿ ಜಾಸ್ತಿ.

ಹುರಿದ ಮಿಶ್ರಣವನ್ನು ಒಂದು ಮಿಕ್ಸರ್ ಜಾರ್ ಗೆ ಹಾಕಿ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಒಂದು ಪ್ಯಾನ್ ಗೆ ಸ್ವಲ್ಪ ಎಣ್ಣೆ, ಸಾಸಿವೆ, ಜಿರಿಗೆ ಅರ್ಧ ಚಮಚ, ಬೆಳ್ಳುಳ್ಳಿ ಎಸಳು ೪-೫, ಮುರಿದಿರುವ ಒಣ ಮೆಣಸು, ಕರಿಬೇವು ಹಾಕಿ ಹುರಿಯಿರಿ. ನಂತರ ಇದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ. ನಂತರೈದಕ್ಕೆ ಸ್ವಲ್ಪ ಹುಣಸೆ ಹಣ್ಣಿನ ರಸ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ಇದಕ್ಕೆ ಸ್ವಲ್ಪ ನೀರನ್ನು ಸೇರಿಸಿ ೩ ನಿಮಿಷ ಕುದಿಸಿಕೊಂಡರೆ ಸಾಕು. ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿದರೆ ರುಚಿಯಾದ ಹಾಗೂ ಅಷ್ಟೇ ಆರೋಗ್ಯಕರವಾದ ಕೊಬ್ಬರಿ ಸಾರು ಅನ್ನದ ಜೊತೆ ಸವಿಯಲು ಸಿದ್ಧ. ಈ ರೆಸಿಪಿಯನ್ನು ಕೆಳಗಿನ ವಿಡಿಯೋದಲ್ಲಿಯೂ ಕೂಡ ನೋಡಬಹುದು.

Post Author: Ravi Yadav