ಹಿಟ್ಲರ್ ಕಲ್ಯಾಣ ಧಾರವಾಹಿ ಮುಂದೆ ಮಂಕಾದ ಟಾಪ್ ಧಾರಾವಾಹಿಗಳು, ಹಿಟ್ಲರ್ ಕಲ್ಯಾಣ ಬಾಚಿಕೊಂಡ ಪ್ರಶಸ್ತಿಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಜಿ ಕನ್ನಡದಲ್ಲಿ ಪ್ರತಿವರ್ಷವೂ ಜಿ ಕುಟುಂಬ ಅವಾರ್ಡ್ ನ್ನು ನಡೆಸಲಾಗುತ್ತದೆ. ಕಿರುತೆರೆಯ ಕಲಾವಿದರನ್ನು, ತಂತ್ರಜ್ಞರನ್ನು ಗೌರವಿಸುವ ಸಮಾರಂಭವಿದು. ಇನ್ನು ಈ ಬಾರಿಯೂ ಸಕ್ಕತ್ ರಂಗೇರಿದ್ದ ವೇದಿಕೆಯಲ್ಲಿ ಕಲಾವಿದರೂ ಸಂಭ್ರಮಿಸಿದ್ದೇ ಸಂಭ್ರಮಿಸಿದ್ದು!

ಇನ್ನು ಹಲವು ಕಲಾವಿದರಿಗೆ, ಈ ವೇದಿಕೆಯಲ್ಲಿ ಅವರ ಪಾತ್ರಗಳಿಗೆ ಅವಾರ್ಡ್ ಗಳನ್ನು ನೀಡಲಾಗಿದ್ದು, ಅವುಗಳಲ್ಲಿ ಹಿಟ್ಲರ್ ಕಲ್ಯಾಣ ಹೆಚ್ಚು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಕನ್ನಡ ಕಿರುತೆರೆಯಲ್ಲಿ ಪ್ರೋಮೊದಿಂದಲೇ ಹೆಚ್ಚು ಫೇಮಸ್ ಆಗಿತ್ತು ಹಿಟ್ಲರ್ ಕಲ್ಯಾಣ ಧಾರಾವಾಹಿ. ಈಗಲೂ ದಿನವೂ ಟ್ವಿಸ್ಟ್ ಗಳನ್ನು ಪಡೆಯುತ್ತಿರುವ ಈ ಧಾರಾವಾಹಿ ಸದ್ಯ ಕನ್ನಡಿಗರ ಇಷ್ಟದ ಧಾರಾವಾಹಿ ಎನಿಸಿಕೊಂಡಿದೆ. ಇನ್ನು ಹಿಟ್ಲರ್ ಕಲ್ಯಾಣ ಎಷ್ಟು ಪ್ರಖ್ಯಾತಿಯನ್ನು ಗಳಿಸಿದೆ ಎನ್ನುವುದು ಜಿ ಕುಟುಂಬ ಅವಾರ್ಡ್ ನಲ್ಲಿ ಗಳಿಸಿದ ಅವಾರ್ಡ್ ಗಳನ್ನು ನೋಡಿದರೇ ಅರ್ಥವಾಗುತ್ತೆ.

ಹಿಟ್ಲರ್ ಕಲ್ಯಾಣ ಜನರಿಗೆ ಇಷ್ಟವಾಗೋಕ್ಕೆ ಮುಖ್ಯ ಕಾರಣ ಅದರ ಮೇಕಿಂಗ್. ಹೌದು ಯಾವ ಹಿಂದಿ ಧಾರಾವಾಹಿಗೂ ಸಡ್ದು ಹೊಡೆಯುವ ರೀತಿಯಲ್ಲಿದೆ ಹಿಟ್ಲರ್ ಕಲ್ಯಾಣ. ಇದರಲ್ಲಿನ ಅದ್ದೂರಿ ಸ್ಎಟ್ ಜನರನ್ನು ಆಕರ್ಷಿಸುತ್ತೆ. ಹಾಗೆಯೇ ಕೆಲವು ವರ್ಷಗಳ ನಂತರ ಮತ್ತೆ ಕಿರುತೆರೆಗೆ ಕಮ್ಬ್ಯಾಕ್ ಮಾಡಿದ ನಟ ದಿಲೀಪ್ ರಾಜ್ ಅವರ ಮೆಚ್ಯೂರ್ಡ್ ಆಕ್ಟಿಂಗ್ ತುಂಬಾನೇ ಖುಷಿ ಕೊಡತ್ತೆ. ಇನ್ನು ಲೀಲಾ ಪಾತ್ರದಲ್ಲಿ ಮಲೈಕಾ ವಸುಪಾಲ್ ಕ್ಯೂಟ್ ಆಗಿ ಕಾಣಿಸುತ್ತಾರೆ. ಇನ್ನು ಈ ಧಾರಾವಾಹಿಯ ಹೈಲೈಟ್ ಮೂವರು ಸೊಸೆಯಂದಿರು ಹಾಗೂ ಅವರ ಗತ್ತು. ನಂದಿನಿ ಮೂರ್ತಿ, ನೇಹಾ ಪಾಟೀಲ್ ಹಾಗೂ ಪದ್ಮಿನಿ ದೇವನಹಳ್ಳಿ ಆ ಮೂರು ಸೊಸೆಯಂದಿರು. ವಿದ್ಯಾ ಮೂರ್ತಿ ಹಾಗೂ ಅಭಿನಯಾವರ ನಟನೆಯೋ ಮೆಚ್ಚಿಕೊಳ್ಳುವಂತದ್ದು. ಇನ್ನು ಶ್ರೀವಿದ್ಯಾ ದಿಲೀಪ್ ಅವರ ಅತ್ಯದ್ಭುತ ನಿರ್ಮಾಣ ಈ ಧಾರಾವಾಹಿ ಕಡೆಗೆ ಜನರನ್ನು ಇನ್ನಷ್ಟು ಆಕರ್ಷಿಸುತ್ತದೆ. ಐಷಾರಾಮಿ ಸೆಟ್, ಅದ್ಭುತ ನಿರ್ಮಾಣ ಹಿಟ್ಲರ್ ಕಲ್ಯಾಟವನ್ನು ಹಿಟ್ ಆಗಿಸಿದೆ.

Post Author: Ravi Yadav