ಶ್ರುಗರ್ ಅನ್ನು ಫುಲ್ ನಿಯಂತ್ರಣದಲ್ಲಿ ಇಡಬೇಕೆ?? ಬಿರಿಯಾನಿ ಎಲೆಗಳನ್ನು ಹೀಗೆ ಬಳಸಿ ನೋಡಿ. ಮನೆಮದ್ದು ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ.

ಶ್ರುಗರ್ ಅನ್ನು ಫುಲ್ ನಿಯಂತ್ರಣದಲ್ಲಿ ಇಡಬೇಕೆ?? ಬಿರಿಯಾನಿ ಎಲೆಗಳನ್ನು ಹೀಗೆ ಬಳಸಿ ನೋಡಿ. ಮನೆಮದ್ದು ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ.

ನಮಸ್ಕಾರ ಸ್ನೇಹಿತರೇ ಮಧುಮೇಹ ಇತ್ತೀಚಿಗೆ ಜನರನ್ನು ಕಾಡುತ್ತಿರುವ ಬಹುದೊಡ್ದ ಸಮಸ್ಯೆ, ಇದರಿಂದ ಎಲ್ಲರಿಗೂ ಪ್ರಾಣಾಪಾಯವಾಗದೇ ಇರಬಹುದು. ಆದರೆ ದಿನವೂ ಈ ಖಾಯಿಲೆಯೊಟ್ಟಿಗೆ ಬದುಕು ನಡೆಸುವುದು ಕಷ್ಟವೇ! ಎಷ್ಟೋ ಜನರಿಗೆ ಏನೇ ಮಾಡಿದರೂ ಶುಗರ್ ನಿಯಂತ್ರಣಕ್ಕೇ ಸಿಗುವುದಿಲ್ಲ. ಅಂಥ ಸಂದರ್ಭದಲ್ಲಿ ನೀವು ತಪ್ಪದೇ ಈ ಕೆಳಗಿನ ಟಿಪ್ಸ್ ನ್ನು ಫಾಲೋ ಮಾಡಿ.

ಲವಂಗದ ಎಲೆಗಳು; ಲವಂಗದ ಎಲೆಗಳನ್ನು ಹಲವು ಖಾದ್ಯಗಳಲ್ಲಿ ಪರಿಮಳಕ್ಕಾಗಿ ಬಳಸಲಾಗುತ್ತದೆ. ಮಾತ್ರವಲ್ಲದೆ ಆಹಾರದ ರುಚಿಯೂ ಕೂಡ ವಿಶೇಷವಾಗಿರುತ್ತದೆ. ಇನ್ನು ಬಾಯಿ ರುಚಿ ಹೆಚ್ಚಿಸುವುದು ಅಷ್ಟೇ ಅಲ್ಲ, ಲವಂಗದ ಎಲೆ ಆರೊಗ್ಯದ ಗುಣಗಳನ್ನೂ ಕೂಡ ಹೊಂದಿದೆ. ಅನೇಕ ರೋಗಗಳಿಂದ ರಕ್ಷಿಸುವ ಉತ್ಕರ್ಷಣ ನಿರೋಧಕಗಳು, ತಾಮ್ರ, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳು ಲವಂಗದ ಎಲೆಗಳಲ್ಲಿವೆ. ಇನ್ನು ಇದರಲ್ಲಿರುವ ಪಾಲಿಫಿನಾಲ್, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಹಾಗಾಗಿ ನಮ್ಮ ಆಹಾರ ಪದಾರ್ಥಗಳಲ್ಲಿ ಲವಂಗದ ಎಲೆಗಳನ್ನು ಸೇರಿಸುವುದು ಉತ್ತಮ.

ಲವಂಗದ ಎಲೆಗಳನ್ನು ಔಷಧಿಗಳಲ್ಲಿಯೂ ಬಳಸಲಾಗುತ್ತದೆ. ಆಯುರ್ವೇದದಲ್ಲಿ ಇದರ ಬಳಕೆ ಹೆಚ್ಚು. ಪ್ರಾಕೃತಿಕವಾಗಿ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಮಧುಮೇಹ ರೋಗಿಗಳಲ್ಲಿ ಇನ್ಸುಲಿನ್‌ನ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇನ್ನು ಲವಂಗದ ಎಲೆಗಳಲ್ಲಿ ವಿಟಮಿನ್ ಸಿ ಅಂಶವೂ ಅಧಿಕವಾಗಿದ್ದು, ಬಿಳಿರಕ್ತ ಕಣಗಳನ್ನು ಹೆಚ್ಚಿಸುತ್ತದೆ ಹಾಗೂ ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ನಿಯಂತ್ರಿಸಲೂ ಕೂಡ ಸಹಾಯ ಮಾಡುತ್ತದೆ. ಲವಂಗದ ಎಲೆಗಳನ್ನು ಊಟದಲ್ಲಿ, ಅಕ್ಕಿಯ ಜೊತೆ ಬೇಯಲು, ಸೂಪ್, ಟಿ ಮೊದಲಾದವುಗಳಲ್ಲಿ ಬಳಸಬಹುದು. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ತಿಂದರೆ ಮಧುಮೇಹಿಗಳಿಗೆ ಉತ್ತಮ. ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಲವಂಗದ ಎಲೆ ಇನ್ನು ಸದಾ ನಿಮ್ಮ ಅಡುಗೆಮನೆಯಲ್ಲಿರಲಿ!