ಅಪ್ಪು ಅವರ ಸಮಾಧಿಯ ಮುಂದೆ ಹೋಗಿ ಆಂಕರ್ ಅನುಶ್ರೀ ಪ್ರತಿಜ್ಞೆ ಮಾಡಿದ್ದಾದರೂ ಏನು ಗೊತ್ತಾ?? ಹೊಸ ಪ್ರತಿಜ್ಞೆ ಮಾಡಿ ಭೇಷ್ ಎನಿಸಿಕೊಂಡ ಅನುಶ್ರೀ.

ಅಪ್ಪು ಅವರ ಸಮಾಧಿಯ ಮುಂದೆ ಹೋಗಿ ಆಂಕರ್ ಅನುಶ್ರೀ ಪ್ರತಿಜ್ಞೆ ಮಾಡಿದ್ದಾದರೂ ಏನು ಗೊತ್ತಾ?? ಹೊಸ ಪ್ರತಿಜ್ಞೆ ಮಾಡಿ ಭೇಷ್ ಎನಿಸಿಕೊಂಡ ಅನುಶ್ರೀ.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ನಾವೆಲ್ಲ ಎಷ್ಟು ದುಃಖಿತರಾಗಿದ್ದೇವೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಒಬ್ಬ ನಟನ ಮರಣಕ್ಕೆ ಇಷ್ಟೊಂದು ಜನರು ಸೇರಿದ್ದು ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲು. ಅಷ್ಟರಮಟ್ಟಿಗೆ ನಮ್ಮ ಕನ್ನಡಿಗರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಮೆಚ್ಚಿಕೊಂಡಿದ್ದರು‌. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಅಂತಿಮ ದರ್ಶನಕ್ಕೆ ಹಾಗೂ ಅವರ ಸಮಾಧಿ ದರ್ಶನಕ್ಕೆ ಹಲವಾರು ಸೆಲೆಬ್ರಿಟಿಗಳು ದೇಶದ ಮೂಲೆ ಮೂಲೆಯಿಂದಲೂ ಕೂಡ ಬಂದಿದ್ದರು.

ಇನ್ನು ಪುನೀತ್ ರಾಜಕುಮಾರ್ ಅವರ ದೊಡ್ಡ ಅಭಿಮಾನಿ ಆಗಿರುವ ನಿರೂಪಕಿ ಅನುಶ್ರೀ ಅವರು ಪುನೀತ್ ರಾಜಕುಮಾರ್ ರವರ ಅಂತಿಮ ದರ್ಶನಕ್ಕೆ ಬರಲಾಗಲಿಲ್ಲ. ಯಾಕೆಂದರೆ ಅವರ ನಗು ಮುಖವನ್ನು ನೋಡಿಕೊಂಡು ಬೆಳೆದಿರುವ ನಾನು ಅವರನ್ನು ಈ ಸ್ಥಿತಿಯಲ್ಲಿ ನೋಡಲು ನನಗೆ ಮನಸ್ಸಿಲ್ಲ ಎಂಬುದಾಗಿ ಭಾವುಕರಾಗಿ ಹೇಳಿಕೊಂಡಿದ್ದರು. ಇನ್ನು ಇದೇ ಸಂದರ್ಭದಲ್ಲಿ ನಿರೂಪಕಿ ಅನುಶ್ರೀ ಅವರು ಸಮಾಧಿಯ ಮುಂದೆ ಒಂದು ಪ್ರತಿಜ್ಞೆಯನ್ನು ಮಾಡಿದ್ದಾರೆ.

ಹಾಗಿದ್ದರೆ ಆಂಕರ್ ಅನುಶ್ರೀ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಮಾಧಿಯ ಮುಂದೆ ಮಾಡಿರುವ ಪ್ರತಿಜ್ಞೆ ಏನು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ ಬನ್ನಿ. ನಿಮಗೆಲ್ಲ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ತಮ್ಮ ಮರಣಾನಂತರದ ನೇತ್ರದಾನ ದಿಂದಾಗಿ ನಾಲ್ಕು ಜನ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಇದೇ ಮಾದರಿಯಲ್ಲಿ ನಾನು ಕೂಡ ನನ್ನ ಮರಣಾನಂತರ ನೇತ್ರದಾನ ಮಾಡುವುದಾಗಿ ಆಂಕರ್ ಅನುಶ್ರೀ ಅವರು ಪುನೀತ್ ರಾಜಕುಮಾರ್ ಅವರ ಸಮಾಧಿ ಬಳಿ ಪ್ರತಿಜ್ಞೆ ಮಾಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.