ಕರುನಾಡ ವಾಣಿ
ಇದು ನಿಮ್ಮ ಧ್ವನಿ

ರೈತರ ಪಾಲಿನ ನೆಚ್ಚಿನ ಮಂತ್ರಿಯಾಗಿ ಕ್ರಾಂತಿಕಾರಿ ಬದಲಾವಣೆ ಮಾಡುತ್ತಿರುವ ಜನಮೆಚ್ಚಿದ ಕೃಷಿ ಮಂತ್ರಿಗಳು ನಮ್ಮ ಬಿ ಸಿ ಪಾಟೀಲ್ ಸಾಹೇಬರು.

14

ನಮಸ್ಕಾರ ಸ್ನೇಹಿತರೇ ನಮ್ಮ ರಾಜ್ಯದಲ್ಲಿ ಅದೆಷ್ಟು ಮಂತ್ರಿಗಳು ಶಾಸಕರು ರಾಜಕೀಯ ನಾಯಕರು ಬಂದು ಹೋಗಿರಬಹುದು ಆದರೆ ಒಬ್ಬರು ಈಗ ಕೃಷಿ ಮಂತ್ರಿಗಳಾಗಿ ರಾಜ್ಯದ ಕೃಷಿ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸುತ್ತಿದ್ದಾರೆ. ಈ ಹಿಂದೆ ಜನನಾಯಕರು ಚುನಾಯಿತರಾದ ಮೇಲೆ ಅಭಿವೃದ್ಧಿ ಕಡೆಗೆ ಗಮನ ನೀಡುವುದನ್ನು ಬಿಟ್ಟು ಬಿಟ್ಟಿದ್ದಾರೆ. ಆದರೆ ನಮ್ಮ ಕೃಷಿ ಸಚಿವರಾಗಿರುವ ಬಿ ಸಿ ಪಾಟೀಲ್ ರವರು ಹಾಗಲ್ಲ. ಮತದಾರರ ಋಣವನ್ನು ಅವರಿಗೆ ಸೇವೆ ಮಾಡುವ ಮೂಲಕ ತೀರಿಸುತ್ತಿದ್ದಾರೆ.

ಬೇರೆಲ್ಲ ಮಂತ್ರಿಗಳು ಜನರಿಗೆ ಸಿಕ್ಕಲು ತಕರಾರು ತೆಗೆದರೆ ಬಿ ಸಿ ಪಾಟೀಲ್ ಅವರು ಮಾತ್ರ ಜನರಿಗೆ ಪಾರದರ್ಶಕವಾಗಿ ಸಿಗುತ್ತಾರೆ ಹಾಗೂ ಅವರ ಸಮಸ್ಯೆಗಳನ್ನು ಆಲಿಸುತ್ತಾರೆ. ಒಬ್ಬ ನಿಜವಾದ ಜನನಾಯಕ ನಲ್ಲಿ ಇರಬಹುದಾದ ಎಲ್ಲಾ ಪ್ರಮುಖ ಗುಣಲಕ್ಷಣಗಳು ಬಿ ಸಿ ಪಾಟೀಲ್ ಅವರಲ್ಲಿ ಇರುವುದಕ್ಕಾಗಿಯೇ ರೈತರ ನೆಚ್ಚಿನ ಕೃಷಿ ಮಂತ್ರಿಗಳಾಗಿದ್ದಾರೆ. ಬಿ ಸಿ ಪಾಟೀಲ್ ರವರು ಈಗಾಗಲೇ ಕೇವಲ ರಾಜಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ಪೊಲೀಸ್ ಅಧಿಕಾರಿಯಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಕೇವಲ ರಾಜಕೀಯ ಕ್ಷೇತ್ರಕ್ಕೆ ಬೇರೆಯವರಂತೆ ಅಧಿಕಾರದಾಸೆಯಿಂದ ಬಂದವರಲ್ಲ. ರೈತರ ಸಮಸ್ಯೆಗಳನ್ನು ತಳಮಟ್ಟದಲ್ಲಿ ಆಲಿಸಿ ಅದಕ್ಕೆ ಬೇಕಾದಂತಹ ಪರಿಹಾರಗಳನ್ನು ಕ್ಷಿಪ್ರವಾಗಿ ಒದಗಿಸುವಂತಹ ಜನಾನುರಾಗಿ ನಾಯಕ. ಇನ್ನು ಹಾವೇರಿ ಜಿಲ್ಲೆಯ ಹಿರೇಕೆರೂರು ಕ್ಷೇತ್ರದ ಅಭ್ಯರ್ಥಿಯಾಗಿ ತನ್ನ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ ಸನ್ಮಾನ್ಯ ಕೃಷಿ ಮಂತ್ರಿಗಳು.

ಇನ್ನು ನಾಳೆ ಕೃಷಿ ಮಂತ್ರಿಗಳಾಗಿರುವ ಸನ್ಮಾನ್ಯ ಶ್ರೀ ಬಿ ಸಿ ಪಾಟೀಲ್ ಅವರು ತಮ್ಮ 66ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇನ್ನು ಜನ್ಮದಿನದ ಆಚರಣೆಯನ್ನು ಕೂಡ ವಿಭಿನ್ನವಾಗಿ ಜನರಿಗೆ ಉಪಯೋಗವಾಗುವಂತಹ ರೀತಿಯಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಿಗಳು ಈಗಾಗಲೇ ಇಂದು ಮುಂಚಿತವಾಗಿಯೇ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಇದು ಎಲ್ಲಾ ಕನ್ನಡಿಗರು ಕೂಡ ಹೆಮ್ಮೆಪಡುವಂತಹ ವಿಚಾರ. ಇನ್ನು ಜನ್ಮದಿನದಂದು ಕೂಡ ರೈತರ ಸಮಸ್ಯೆಗಳನ್ನು ಆಲಿಸಲು ಸಮಯ ನೀಡುತ್ತಿದ್ದಾರೆ ನಮ್ಮ ನೆಚ್ಚಿನ ಕೃಷಿ ಮಂತ್ರಿಗಳ ಆಗಿರುವ ಬಿ ಸಿ ಪಾಟೀಲ್ ಸಾಹೇಬರು. ಇಂತಹ ಮಂತ್ರಿಗಳನ್ನು ಪಡೆದಿರುವ ನಾವೇ ಧನ್ಯ. ನಾವು ಕೂಡ ಕೃಷಿ ಮಂತ್ರಿ ಗಳಾಗಿರುವ ಬಿಸಿ ಪಾಟೀಲ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರೋಣ.