ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಗ್ ಬಾಸ್ ನಿಂದ 50ಲಕ್ಷ ತಗೊಂಡ್ಮೇಲೆ ಮುಟ್ಟಿದ್ದೆಲ್ಲ ಚಿನ್ನ ಅಂತಿದ್ದಾರೆ ಮಂಜು ಪಾವಗಡ ಯಾಕೆ ಗೊತ್ತಾ?? ಆದರೂ ವಿಷಾದ ವ್ಯಕ್ತ ಪಡಿಸಿದ ಮಂಜು. ಯಾಕೆ ಗೊತ್ತೇ???

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಅದರಲ್ಲಿಯೂ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 8 ಕಿರುತೆರೆಯ ಪ್ರೇಕ್ಷಕರಿಗೆ ಅತ್ಯಂತ ಮನೋರಂಜನೆಯನ್ನು ನೀಡಿದ ಸೀಸನ್ ಆಗಿತ್ತು. ಇದಕ್ಕೆ ಮುಖ್ಯವಾಗಿ ಕಾರಣವಾಗಿದ್ದು ಮಂಜು ಪಾವಗಡ ಎಂದರೆ ಖಂಡಿತವಾಗಿ ತಪ್ಪಾಗಲಾರದು.

ಹೌದು ಗೆಳೆಯರೇ ಬೆಂಗಳೂರಿನ ಜೆಪಿನಗರದ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಮಂಜು ಪಾವಗಡ ರವರು ಮಜಾಭಾರತ ಕಾರ್ಯಕ್ರಮದ ಮೂಲಕ ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ಪರಿಚಿತರಾಗುತ್ತಾರೆ. ಮಜಾಭಾರತ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದುಕೊಂಡ ನಂತರ ಕನ್ನಡದ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದರು ನಮ್ಮ ಮಂಜಣ್ಣ. ಮಂಜಣ್ಣ ತಮ್ಮ ಪರಿಶ್ರಮ ಹಾಗೂ ಪ್ರತಿಭೆಯ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 8ನ್ನು ಸುಲಭವಾಗಿ ಗೆದ್ದುಕೊಂಡಿದ್ದರು.

ಇನ್ನು ಬಿಗ್ ಬಾಸ್ ಸಮಯದಲ್ಲಿ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ರವರ ನಡುವೆ ಸಾಕಷ್ಟು ಸುದ್ದಿಗಳು ಕೂಡ ಕೇಳಿಬಂದಿದ್ದವು. ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಮಂಜು ಪಾವಗಡ ರವರು ದಿವ್ಯ ಸುರೇಶ್ ಅವರೊಂದಿಗೆ ಇನ್ಸ್ಟಾಗ್ರಾಮ್ ರೀಲ್ಸ್ ಹಾಗೂ ಶಾರ್ಟ್ ವಿಡಿಯೋಗಳನ್ನು ಪೋಸ್ಟ್ ಮಾಡುವುದರಲ್ಲಿ ಕೂಡ ಮಗ್ನರಾಗಿದ್ದರು.

ಇಷ್ಟು ಮಾತ್ರವಲ್ಲದೆ ಅಭಿಮಾನಿಗಳ ಕೈಗೆ ಕೂಡ ಸುಲಭವಾಗಿ ಸಿಗುತ್ತಿದ್ದರು ನಮ್ಮ ಮಂಜು ಪಾವಗಡ. ಸಂದರ್ಶನದಲ್ಲಿ ಕೂಡ ಹೇರಳವಾಗಿ ಮಾತನಾಡುತ್ತಿದ್ದರು ಮಾತಿನಮಲ್ಲ ಮಂಜಣ್ಣ. ಇನ್ನು ಬಂದಂತಹ 50 ಲಕ್ಷ ಹಣದಲ್ಲಿ ಒಂದು ಮನೆಯನ್ನು ಕೂಡ ವಿಜ್ರಂಭಣೆಯಿಂದ ಕಟ್ಟಿದರು. ಮಂಜಣ್ಣನವರ ಕೈ ಗೆ ಹಲವಾರು ಸಿನಿಮಾಗಳ ಆಫರ್ ಕೂಡ ಬರಲು ಪ್ರಾರಂಭವಾಗಿದ್ದವು.

ಇನ್ನು ತಮಗೆ ಬಂದಿರುವ ಸಿನಿಮಾ ಆಫರ್ ಗಳ ಕುರಿತಂತೆ ಹೇಳುತ್ತಾ ಮಂಜಣ್ಣ ಎಲ್ಲರೂ ಕೂಡ ಹೆಚ್ಚಾಗಿ ನನ್ನ ಬಳಿ ಹಾಸ್ಯಾತ್ಮಕ ಪಾತ್ರಗಳನ್ನು ಮಾಡಲು ಕೇಳಿಕೊಳ್ಳುತ್ತಾರೆ ಆದರೆ ನನಗೆ ಬೇರೆ ರೀತಿಯ ಪಾತ್ರಗಳು ಕೂಡ ಇಷ್ಟವಾಗುತ್ತದೆ ಎಂದು ವಿಷಾದ ವ್ಯಕ್ತ ಪಡಿಸಿದರು. ಇನ್ನು ಕಮರ್ಷಿಯಲ್ ಸಿನಿಮಾಗಳಲ್ಲಿ ಕೂಡ ನಾನು ನಟಿಸಲು ಇಷ್ಟಪಡುತ್ತೇನೆ. ಎಷ್ಟೇ ಸಿನಿಮಾಗಳು ಬಂದರೂ ಕೂಡ ನಾನು ಕಿರುತೆರೆಯಿಂದ ಬಂದವನು ಹಾಗಾಗಿ ಕಿರುತೆರೆಯನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂಬುದಾಗಿ ತಮ್ಮ ಅನಿಸಿಕೆಯನ್ನು ಹೇಳಿಕೊಂಡಿದ್ದಾರೆ.

ಇನ್ನು ಇತ್ತೀಚೆಗೆ ಮಂಜಣ್ಣನವರ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ ಆಲ್ಬಮ್ ಸಾಂಗ್ ಕೂಡ ಬಿಡುಗಡೆಯಾಗಿದ್ದು ಇದರಲ್ಲಿ ದಿವ್ಯ ಸುರೇಶ್ ರವರು ಕೂಡ ಇರುತ್ತಾರೆ ಎಂಬುದಾಗಿ ಅಭಿಮಾನಿಗಳು ಕಾತರರಾಗಿದ್ದರು. ಆದರೆ ಇದರಲ್ಲಿ ಸಿಂಗರ್ ಸಂಗೀತ ರವರೆ ಮಂಜು ಪಾವಗಡ ರವರ ಜೊತೆಗೆ ಡ್ಯಾನ್ಸ್ ಕೂಡ ಮಾಡಿದ್ದರು. ಇನ್ನು ಮುಟ್ಟಿದ್ದೆಲ್ಲ ಚಿನ್ನ ಎಂದು ಹಾಡುತ್ತಾ ಈ ಸಾಂಗ್ನಲ್ಲಿ ಮಂಜು ಪಾವಗಡ ರವರು ಸಕ್ಕತ್ತಾಗಿ ಸ್ಟೆಪ್ ಕೂಡ ಹಾಕಿದ್ದಾರೆ. ಇನ್ನಷ್ಟು ಅವಕಾಶಗಳು ನಮ್ಮ ಪ್ರತಿಭಾನ್ವಿತ ಮಂಜು ಪಾವಗಡ ರವರಿಗೆ ಹುಡುಕಿ ಬರಲಿ ಎಂದು ಹಾರೈಸೋಣ ಸ್ನೇಹಿತರೇ.

Get real time updates directly on you device, subscribe now.