ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಪುನೀತ್ ನಿಧನದ ಹಿಂದಿನ ರಾತ್ರಿ ಬಂದು ನನ್ನ ಬಳಿ ಹೇಳಿದ್ದರು, ಅದೊಂದೇ ವಿಚಾರ ಸಾಕಷ್ಟು ಕಾಡುತಿತ್ತು ಎಂದ ಅನಿರುದ್. ಪತ್ರ ಬರೆದು ಹೇಳಿದ್ದೇನು ಗೊತ್ತೇ??

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಗು ಮುಖವನ್ನು ನೋಡುತ್ತಾ ಅವರನ್ನು ಕಳೆದುಕೊಂಡಿದ್ದೇವೆ ಎಂಬ ಭಾವನೆ ಕೂಡ ಮನಸ್ಸಿಗೆ ಒಪ್ಪಿಕೊಳ್ಳುವುದು ಕಷ್ಟಕರವಾಗುತ್ತಿದೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕಳೆದುಕೊಂಡಿರುವ ದುಃಖದಲ್ಲಿ ಹಲವಾರು ಸೆಲೆಬ್ರಿಟಿಗಳು ಶ್ರದ್ಧಾಂಜಲಿಯನ್ನು ಕೋರುತ್ತಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಮರಣವನ್ನು ಹೊಂದುವ ಹಿಂದಿನ ದಿನ ರಾತ್ರಿ ಸಂಗೀತ ನಿರ್ದೇಶಕ ಗುರುಕಿರಣ್ ರವರ ಜನ್ಮದಿನಾಚರಣೆಗೆ ಹೋಗಿದ್ದರು.

ಆ ಸಂದರ್ಭದಲ್ಲಿ ರಾತ್ರಿ 11.30 ತನಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೊಂದಿಗೆ ನಟ ಅನಿರುದ್ಧ ರವರು ಮೂರು ಗಂಟೆಗಳ ಕಾಲ ಚರ್ಚೆ ಮಾಡಿದ್ದರು. ಈ ಕುರಿತಂತೆ ಸುದೀರ್ಘವಾಗಿ ಪತ್ರವನ್ನು ಬರೆಯುವ ಮೂಲಕ ಅಪ್ಪು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಹಾಗಿದ್ದರೆ ಈ ಪತ್ರದಲ್ಲಿ ಏನಿದೆ ಎಂಬುದನ್ನು ನಾವು ನಿಮಗೆ ಹೇಳುತ್ತೇವೆ ಬನ್ನಿ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗುರುಕಿರಣ್ ರವರ ಜನ್ಮ ದಿನಾಚರಣೆಗೆ ನಾನು ಹಾಗೂ ನನ್ನ ಪತ್ನಿ ಹೋಗಿದ್ದೆವು. ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಹಾಗೂ ರಮೇಶ್ ಅರವಿಂದ್ ಅವರು ನಮ್ಮೊಂದಿಗೆ ಇದ್ದರು.

ಈ ಸಮಾರಂಭದಲ್ಲಿ ನಾವು ಪುನೀತ್ ರಾಜಕುಮಾರ್ ಅವರೊಂದಿಗೆ ಸಾಕಷ್ಟು ವಿಷಯಗಳ ಕುರಿತಂತೆ ಮಾತನಾಡಿದ್ದೆವು. ಸಿನಿಮಾ ವ್ಯಾಯಾಮ ಹೀಗೆ ಇತ್ಯಾದಿ. ಇನ್ನೂ ಅವರು ಇತ್ತೀಚೆಗೆ ಸೈಕಲ್ ನಲ್ಲಿ 70 ಕಿಲೋಮೀಟರುಗಳಷ್ಟು ರೈಡಿಂಗ್ ಹೋಗಿದ್ದಾರೆ ಎಂಬುದನ್ನು ಕೂಡ ತಿಳಿದು ಸಂತೋಷಪಟ್ಟೆ. ಅವರು ಈಜು, ಸೈಕಲ್ ಹೊಡೆಯುವುದು ಮತ್ತು ಮ್ಯಾರಥಾನ್ ಓಟವನ್ನು ಒಳಗೊಂಡ “ಐರನ್ ಮ್ಯಾನ್ ವರ್ಲ್ಡ್ ಚಾಂಪಿಯನ್ ಶಿಪ್” ಸ್ಪರ್ಧೆಗೆ ಪ್ರಯತ್ನಿಸಬಹುದು ಎಂದು ಸಲಹೆ ನೀಡಿದೆ.

ಇದಕ್ಕಾಗಿ ನುರಿತ ತಜ್ಞರ ಅಡಿಯಲ್ಲಿ ತರಬೇತಿಯನ್ನು ಕೂಡ ಪಡೆಯಬೇಕು ಎಂದು ಚರ್ಚಿಸಿದೆವು. ಈ ಸಂದರ್ಭದಲ್ಲಿ ಅಪ್ಪು ಹಾಗೂ ಅಶ್ವಿನಿ ದಂಪತಿಗಳು ಇಬ್ಬರೂ ಕೂಡ ತಮ್ಮ ಹಿರಿಯ ಮಗಳು ಸ್ವಂತ ಸ್ಕಾಲರ್ಶಿಪ್ ನಿಂದ ಅಮೇರಿಕಾದ ಯೂನಿವರ್ಸಿಟಿಯಲ್ಲಿ ಕಲಿಯುತ್ತಿದ್ದಾಳೆ ಎಂಬುದಾಗಿ ಹೆಮ್ಮೆಯನ್ನು ವ್ಯಕ್ತಪಡಿಸಿದ್ದರು. ಇದಾದನಂತರ ಅವರೊಂದಿಗೆ ಫೋಟೋ ತೆಗೆಯಬೇಕೆಂಬ ಹಂಬಲ ಕೂಡ ನನ್ನಲ್ಲಿತ್ತು ಆದರೆ ತೆಗೆಯಲು ಸಾಧ್ಯವೇ ಆಗಲಿಲ್ಲ. ನಾವುಗಳು ಸಂತೋಷದಿಂದ ಮಾತಾಡಿಕೊಂಡು ಊಟವನ್ನು ಕೂಡ ಮಾಡಿದೆವು.

ಪುನೀತ್ ರಾಜಕುಮಾರ್ ಅವರು ತಮ್ಮ ಮಡದಿ ಅಶ್ವಿನಿ ಅವರೊಂದಿಗೆ ರಾತ್ರಿ 11.30ಕ್ಕೆ ಮನೆಗೆ ತೆರಳಿದರು. ನಾವು ಕೂಡ ಸ್ವಲ್ಪಹೊತ್ತಿನಲ್ಲೇ ಮನೆಗೆ ಹೋದೆವು. ಆದರೆ ಮರುದಿನ ನಾವು ಕೇಳಿದ್ದು ಮಾತ್ರ ನಾವು ಎಂದು ಕೂಡ ಅರಗಿಸಿಕೊಳ್ಳಲಾಗದಂತಹ ಸುದ್ದಿಯನ್ನು. ಅಣ್ಣಾವ್ರ ಕಿರಿಯ ಪುತ್ರ ರಾಷ್ಟ್ರಪ್ರಶಸ್ತಿ ವಿಜೇತ ಯುವಜನರ ಪ್ರತೀಕ ಸೂಪರ್ ಸ್ಟಾರ್ ಕಿಂಚಿತ್ತು ಅಹಂಕಾರವಿಲ್ಲದ ಸರಳತೆಯ ಸರದಾರ ಗಾಯಕ ನಿರ್ಮಾಪಕ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇನ್ನಿಲ್ಲ ಎಂಬ ಸುದ್ದಿ.

ಕೆಲವೇ ಗಂಟೆಗಳ ಹಿಂದೆಯಷ್ಟೇ ನಮ್ಮೊಂದಿಗೆ ರಾತ್ರಿ ಚೆನ್ನಾಗಿ ಉತ್ಸಾಹಭರಿತರಾಗಿ ಲವಲವಿಕೆಯಿಂದ ಇದ್ದ ಮನುಷ್ಯ ಈಗ ಚಲನೆಯಿಲ್ಲದೆ ಮಲಗಿರುವುದನ್ನು ನೋಡಿ ನಮಗೆ ದಿಗ್ಭ್ರಮೆ ಆಗಿತ್ತು. ಅಪ್ಪು ಅವರು ವ್ಯಾಯಾಮವನ್ನು ತುಂಬಾ ಇಷ್ಟಪಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿತ್ತು. ನಟರು ಸದೃಢರಾಗಿರಬೇಕು ಸಿಕ್ಸ್ ಪ್ಯಾಕನ್ನು ಹೊಂದಿರಬೇಕೆಂಬ ಆಸೆಯನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಾರೆ. ಆದರೆ ಅದನ್ನು ಪೂರೈಸಲು ನಟರು ಎಷ್ಟು ಕಷ್ಟಪಡುತ್ತಾರೆ ಎಂಬುದು ಅವರಿಗೆ ಗೊತ್ತಿರಲ್ಲ. ಇದಕ್ಕಾಗಿ ನಟರು ಶಕ್ತಿಮೀರಿ ಪ್ರಯತ್ನ ಪಡುತ್ತಾರೆ. ಇನ್ನು ಮುಂದೆಯಾದರೂ ನಟರಿಂದ ಇಂತಹ ಪ್ರವೃತ್ತಿಯನ್ನು ಅಪೇಕ್ಷಿಸುವುದು ಅಭಿಮಾನಿಗಳು ಬಿಡಬೇಕು.

ಭಾರತಿ ಅಮ್ಮ ಹಾಗೂ ಪುನೀತ್ ರಾಜಕುಮಾರ್ ಅವರ ಎರಡು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ರಾಜಕುಮಾರ್ ಅವರ ಜೊತೆಗೆ ಕೂಡ ಭಾರತೀ ಅಮ್ಮ ಹಾಗೂ ವಿಷ್ಣುವರ್ಧನ್ ರವರು ನಟಿಸಿದ್ದಾರೆ. ನಮ್ಮ ಇಬ್ಬರು ಕುಟುಂಬಗಳು ಕೂಡ ಅಂದಿನಿಂದಲೂ ಇಂದಿನವರೆಗೂ ಅನ್ಯೋನ್ಯವಾಗಿದ್ದಾರೆ. ಅಪ್ಪು ಸಿಕ್ಕಿದಾಗಲೆಲ್ಲ ನಾವು ಸದಾ ಕಾಲ ಸಂತೋಷವನ್ನು ಹಂಚಿಕೊಂಡಿದ್ದೆವು. ಮಾತನಾಡುವುದು ತುಂಬಾ ಕಷ್ಟವಾಗುತ್ತಿದೆ ಹಿಂದಿನ ದಿನ ರಾತ್ರಿ ನಮ್ಮೊಂದಿಗೆ ಔತಣಕೂಟದಲ್ಲಿ ಭಾಗಿಯಾಗಿದ್ದವರು ಮರುದಿನ ಬೆಳಗ್ಗೆ ಇಲ್ಲ ಎಂದರೆ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಭರಿಸಲಾಗದ ದುಃಖವನ್ನು ಸಂಭಾಳಿಸಲು ಅವರ ಕುಟುಂಬದವರಿಗೆ ಆ ದೇವರು ಶಕ್ತಿ ನೀಡಲಿ ಎಂದು ಆಶಿಸುತ್ತೇವೆ.

Get real time updates directly on you device, subscribe now.