ಅಪ್ಪು ಅವರ 12 ನೇ ದಿನದ ಅನ್ನಸಂತರ್ಪಣೆ ಕಾರ್ಯಕ್ಕೆ ಖರ್ಚಾಗಿದ್ದು ಎಷ್ಟು ಕೋಟಿ ಗೊತ್ತಾ?? ಇದಲ್ಲವೇ ಅಭಿಮಾನಿಗಳ ಮೇಲೆ ಇರುವ ಪ್ರೀತಿ.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 12ನೇ ದಿನದ ಅಂಗವಾಗಿ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಬಂದಿದ್ದ ಸಹಸ್ರಾರು ಅಭಿಮಾನಿಗಳಿಗೆ ಅನ್ನಸಂತರ್ಪಣೆ ನಡೆದಿದೆ. ಹೌದು ಗೆಳೆಯರೇ ನಿನ್ನೆಯಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಆಗಲಿದ ಹನ್ನೊಂದು ದಿನಗಳ ಪೂಜೆಯನ್ನು ಕೂಡ ಕುಟುಂಬಸ್ಥರು ಮಾಡಿದ್ದರು.

ಈ ಸಂದರ್ಭದಲ್ಲಿ ಮನೆ ಹಾಗೂ ಸಮಾಧಿ ಎರಡು ಕಡೆಯಲ್ಲೂ ಕೂಡ ಪೂಜೆ ಮಾಡಿದರು. 11ನೇ ದಿನದ ಕಾರ್ಯಕ್ರಮದಲ್ಲಿ ಕೂಡ 3000 ಜನರಿಗೆ ಊಟವನ್ನು ಏರ್ಪಡಿಸಲಾಗಿತ್ತು. ಇನ್ನು 12ನೇ ದಿನದ ಅಂಗವಾಗಿ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಬರೋಬ್ಬರಿ 28 ರಿಂದ 30 ಸಾವಿರ ಜನರಿಗೆ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಈ ಸಮಯದಲ್ಲಿ ತಗಲಿರುವ ಒಟ್ಟು ವೆಚ್ಚ ಎಷ್ಟು ಎಂಬುದರ ಕುರಿತಂತೆ ನಾವು ನಿಮಗೆ ಹೇಳುತ್ತೇವೆ. ಅನ್ನಸಂತರ್ಪಣೆ ಕಾರ್ಯದಲ್ಲಿ ವೆಜ್ ಹಾಗೂ ನಾನ್ ವೆಜ್ ಎರಡು ರೀತಿಯ ಊಟಗಳು ಇದ್ದವು.

ಇನ್ನು ನಾನ್ವೆಜ್ ನಲ್ಲಿ 6 ರೀತಿಯ ಖಾದ್ಯಗಳು ಇದ್ದವು. ಇನ್ನು ವೆಜ್ ಊಟದಲ್ಲಿ ಕೂಡ ಮೂರ್ನಾಲ್ಕು ಬಗೆಯ ಖಾದ್ಯಗಳಿದ್ದವು. ಇನ್ನು ಖರ್ಚು ವೆಚ್ಚದಲ್ಲಿ ವಿವರವಾಗಿ ಹೇಳುವುದಾದರೆ ಒಂದು ಊಟಕ್ಕೆ ₹350 ಲೆಕ್ಕದಲ್ಲಿ ಬರುತ್ತದೆ. ಹಾಲ್ ಬಾಡಿಗೆ, ಊಟವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಕೊಂಡೊಯ್ಯಲು ಕ್ಯಾಂಟರ್ ವ್ಯವಸ್ಥೆಗಳು ಇನ್ನು ಲೈಟಿಂಗ್ ಡೆಕೋರೇಷನ್ ಹೀಗೆ ಹಲವಾರು ಕಾರ್ಯಗಳಿಗೆ ಎಲ್ಲಾ ಸೇರಿ ಒಟ್ಟು ಬರೋಬ್ಬರಿ ಮೂರು ಕೋಟಿ ಖರ್ಚಾಗಿದೆ. ಇಷ್ಟೊಂದು ಮೊತ್ತದ ಹಣವನ್ನು ಕೇವಲ ಅಭಿಮಾನಿಗಳಿಗಾಗಿ ಖರ್ಚು ಮಾಡಿರುವುದು ದೊಡ್ಮನೆ ದೊಡ್ಡತನವನ್ನು ಎತ್ತಿಹಿಡಿಯುತ್ತದೆ. ಮಾಹಿತಿಯ ಪ್ರಕಾರ ಬರೋಬ್ಬರಿ 30 ಸಾವಿರ ಜನ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Post Author: Ravi Yadav