ಟಿ 20 ನಾಯಕತ್ವ ತ್ಯಜಿಸುತ್ತಿರವ ವೇಳೆಯಲ್ಲೇ ಕೊಹ್ಲಿ ಗೆ ಮತ್ತೊಂದು ಶಾಕ್, ವಿಶ್ವಕಪ್ ನಿಂದ ಹೊರ ಬಂದಮೇಲೆ ಮತ್ತೊಂದು ಕಹಿ ಸುದ್ದಿ.

ಟಿ 20 ನಾಯಕತ್ವ ತ್ಯಜಿಸುತ್ತಿರವ ವೇಳೆಯಲ್ಲೇ ಕೊಹ್ಲಿ ಗೆ ಮತ್ತೊಂದು ಶಾಕ್, ವಿಶ್ವಕಪ್ ನಿಂದ ಹೊರ ಬಂದಮೇಲೆ ಮತ್ತೊಂದು ಕಹಿ ಸುದ್ದಿ.

ನಮಸ್ಕಾರ ಸ್ನೇಹಿತರೇ ಅದೇನೋ ನಾಯಕ ವಿರಾಟ್ ಕೊಹ್ಲಿಯ ಅದೃಷ್ಠವೋ ದುರಾದೃಷ್ಠವೋ ಗೊತ್ತಿಲ್ಲ, ನಾಯಕನಾದ ಮೇಲೆ ಭಾರತ ತಂಡ ಎಲ್ಲಾ ದೇಶಗಳಿಗೂ ಹೋಗಿ ಆ ದೇಶದ ಮೇಲೆ ಟೆಸ್ಟ್ ಸರಣಿ, ಏಕದಿನ , ಟಿ 20 ಪಂದ್ಯಗಳನ್ನು ಗೆಲ್ಲುತ್ತಿದೆ. ಆದರೇ ಒಂದೇ ಒಂದು ಮಹತ್ವದ ಐಸಿಸಿ ಟೂರ್ನಿಗಳಾಗಲಿ ಅಥವಾ ಐಪಿಎಲ್ ಟ್ರೋಫಿ ಗೆಲ್ಲಲು ವಿರಾಟ್ ಕೊಹ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇದು ಭಾರತದ ಅಭಿಮಾನಿಗಳಿಗೆ ತೀವ್ರ ಬೇಸರ ತರಿಸಿತ್ತು. ಇನ್ನು ಈ ಟಿ 20 ವಿಶ್ವಕಪ್ ಮುಗಿದ ನಂತರ ಟಿ 20 ನಾಯಕತ್ವದಿಂದ ಹಿಂದೆ ಸರಿಯುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದರು.

ಇದರ ಜೊತೆ ಐಪಿಎಲ್ ನಲ್ಲಿಯೂ ಸಹ ಆರ್ಸಿಬಿ ತಂಡದ ನಾಯಕತ್ವದಿಂದ ಸಹ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ಈಗ ವಿರಾಟ್ ಗೆ ಇನ್ನೊಂದು ಕೆಟ್ಟ ಸುದ್ದಿ ಬರುತ್ತಿದ್ದು, ವಿರಾಟ್ ಕೊಹ್ಲಿಯವರನ್ನ ಏಕದಿನ ನಾಯಕತ್ವದಿಂದಲೂ ಇಳಿಸುವುದು ಪಕ್ಕಾ ಎನ್ನಲಾಗುತ್ತಿದೆ. 2023 ರ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಈ ಭಾರಿ ಶತಾಯಗತಾಯ ಗೆಲ್ಲಲೇಬೇಕೆಂದರೇ ಈಗಲೇ ಹೊಸ ನಾಯಕತ್ವವನ್ನು ಸೃಷ್ಠಿಸುವುದು ಒಳ್ಳೆಯದು ಎಂಬ ಅಭಿಪ್ರಾಯ ಟೀಮ್ ಮ್ಯಾನೇಜ್ ಮೆಂಟ್ ಗೆ ಇದೆ.

ಹಾಗಾಗಿ ವಿರಾಟ್ ಗೆ ಏಕದಿನ ನಾಯಕತ್ವಕ್ಕೂ ಕೋಕ್ ಕೊಟ್ಟು ಕೇವಲ ಟೆಸ್ಟ್ ತಂಡಕ್ಕೆ ಮಾತ್ರ ನಾಯಕನನ್ನಾಗಿ ಮಾಡಲು ಚಿಂತನೆ ನಡೆಸಿದೆ. ಏಕದಿನ ವಿಶ್ವಕಪ್ ಗೆಲ್ಲುವ ಇರಾದೆಯಿಂದ ಕನ್ನಡಿಗ ಕೆ.ಎಲ್.ರಾಹುಲ್ ಗೆ ಟಿ 20 ಹಾಗೂ ಏಕದಿನ ತಂಡದ ನಾಯಕತ್ವವನ್ನು ವಹಿಸಲು ಚಿಂತನೆ ನಡೆಸಿದೆ. ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್ ಆಗಲಿದ್ದು, ಕನ್ನಡಿಗ ಕೆ.ಎಲ್.ರಾಹುಲ್ ಭಾರತ ತಂಡದ ನಾಯಕರಾಗುವ ಸಂಭವ ಇದೆ. ವಯಸ್ಸಿನ ಕಾರಣ ರೋಹಿತ್ ಶರ್ಮಾ ನಾಯಕರಾಗುವುದು ಕಷ್ಟ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.