ಅಷ್ಟು ಕೋಟಿ ಇಷ್ಟು ಕೋಟಿ ಅಲ್ಲ ಸ್ವಾಮಿ, ಪುನೀತ್ ತನ್ನ ಕುಟುಂಬಕ್ಕೆ ಬಿಟ್ಟು ಹೋಗಿರುವ ನಿಜವಾದ ಅಸ್ತಿ ಇದು. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕಳೆದುಕೊಂಡಿರುವುದು ಕೇವಲ ಒಬ್ಬ ನಟನನ್ನು ಕಳೆದುಕೊಂಡಿರುವುದಕ್ಕಿಂತ ಹೆಚ್ಚಾಗಿ ತಮ್ಮ ಕುಟುಂಬದವರನ್ನು ಕಳೆದುಕೊಂಡಿದ್ದೇವೆ ಎಂಬ ಭಾವನೆ ಕರ್ನಾಟಕದ ಪ್ರತಿಯೊಂದು ಮನೆಯಲ್ಲಿ ಕೂಡ ಕಾಣಿಸಿಕೊಳ್ಳುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಂತಿಮದರ್ಶನಕ್ಕೆ 25 ಲಕ್ಷಕ್ಕೂ ಅಧಿಕ ಜನ ಬಂದಿರುವುದು ನೋಡಿದರೆ ಖಂಡಿತವಾಗಿ ನಿಮಗೆ ಇದರ ಕುರಿತಂತೆ ತಿಳಿಯಬಹುದು.

ಪುನೀತ್ ರವರ ನಿಧನದ ಸುದ್ದಿ ಜನರಿಗೆ ಎಷ್ಟು ದುಃಖವನ್ನು ತರಿಸಿದೆಯೋ ಅಷ್ಟೇ ಒಂದು ಜೀವನ ಪಾಠವನ್ನು ಕೂಡ ಕಲಿಸಿದೆ. ಅದೇನೆಂದರೆ ಈ ಭೂಮಿಯ ಮೇಲೆ ಯಾವುದೂ ಕೂಡ ಶಾಶ್ವತ ಅಲ್ಲ ಎನ್ನುವುದು. ನಾವು ಎಷ್ಟೇ ಪ್ರೀತಿಸಿದರೂ ಕೂಡ ಅದು ಒಂದು ದಿನ ನಮ್ಮನ್ನು ಬಿಟ್ಟು ಹೋಗಲೇಬೇಕು. ಬದುಕಿರುವಷ್ಟು ದಿನ ಸಂತೋಷವಾಗಿ ಪರರಿಗೆ ಉಪಕಾರ ಮಾಡಿಕೊಳ್ಳುತ್ತಾ ಬದುಕಬೇಕು. ಹೀಗೆ ಮಾಡಿಕೊಂಡು ಬದುಕಿದರೆ ಮಾತ್ರ ಜೀವನದ ಸಾರ್ಥಕತೆಯನ್ನು ಕಾಣಬಹುದು.

ಇನ್ನು ಇದೆಲ್ಲದರ ನಡುವೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ತಮ್ಮ ಪತ್ನಿ ಹಾಗೂ ಮಕ್ಕಳಿಗಾಗಿ ಸಾಕಷ್ಟು ಕೋಟಿ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದು ಎಷ್ಟರಮಟ್ಟಿಗೆ ಸತ್ಯ ಹಾಗೂ ಎಷ್ಟು ಬಿಟ್ಟುಹೋಗಿದ್ದಾರೆ ಎಂಬುದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ಕೇವಲ ಚಿತ್ರರಂಗದಲ್ಲಿ ಮಾತ್ರ ಕಾಣಿಸಿಕೊಳ್ಳದೆ ಕಿರುತೆರೆಯಲ್ಲಿ ಕೂಡ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ ಕನ್ನಡ ಚಿತ್ರರಂಗದಿಂದ ಅತ್ಯಂತ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಂಡವರು ಕೂಡ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್.

ಇನ್ನು ಸರ್ಕಾರದ ಹಲವಾರು ಜಾಹೀರಾತುಗಳಿಗೆ ಒಂದು ರೂಪಾಯಿ ಕೂಡ ಸಂಭಾವನೆ ಪಡೆದುಕೊಂಡಿರಲಿಲ್ಲ. ರೈತರಿಗೆ ಉಪಯೋಗವಾಗುವ ಎಲ್ಲಾ ಕಾರ್ಯಗಳನ್ನು ಕೂಡ ಆ ಸಂಭಾವನೆ ರಹಿತವಾಗಿ ಮಾಡಿದ್ದಾರೆ. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಅವರು ಬಡವರಿಗಾಗಿ ಗೆಲ್ಲಲು ಮಾಡುತ್ತಿದ್ದ ಪ್ರೋತ್ಸಾಹ ಹೀಗೆ ಹಲವಾರು ಅಂಶಗಳಿಂದಾಗಿ ಪುನೀತ್ ರಾಜಕುಮಾರ್ ರವರ ಶ್ರೀಮಂತರಾಗಿ ಕಾಣಿಸಿಕೊಳ್ಳುತ್ತಾರೆ.

ಇನ್ನು ಎಲ್ಲಾ ಒಳ್ಳೆ ಕಾರ್ಯಕ್ಕೆ ಅವರ ತಾಯಿ ಪಾರ್ವತಮ್ಮ ರಾಜ್ ಕುಮಾರ್ ಅವರು ಸ್ಫೂರ್ತಿ ಎಂದರೆ ತಪ್ಪಾಗಲಾರದು. ಅವರೆಲ್ಲ ಖರ್ಚುವೆಚ್ಚಗಳನ್ನು ನೋಡಿ ಹಣವನ್ನು ಉಳಿತಾಯ ಮಾಡಿ ಕುಟುಂಬವನ್ನು ಸುಸೂತ್ರವಾಗಿ ನಡೆಸಿಕೊಂಡು ಸಾಮಾಜಿಕ ಕಾರ್ಯಗಳನ್ನು ಕೂಡ ಮಾಡಿಕೊಂಡು ಬಂದಿದ್ದರು. ಇದನ್ನೇ ಅಪ್ಪು ತಾಯಿಯಿಂದ ಮೈಗೂಡಿಸಿಕೊಂಡ ಒಳ್ಳೆಯ ವಿಚಾರಗಳು. ಇನ್ನು ಅಪ್ಪು ಅವರ ಬಳಿ ಎರಡು ಸಾವಿರ ಕೋಟಿ ಆಸ್ತಿ ಇದೆ ಸಾವಿರಾರು ಕೋಟಿ ಆಸ್ತಿ ಇದೆ ಎಂಬ ಸುಳ್ಳು ಸುದ್ದಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತದೆ.

ಆದರೆ ನಿಜವಾದ ಆಸ್ತಿ ಇದೆಲ್ಲವನ್ನು ಮೀರಿದ್ದು ಅಪ್ಪು ಕುಟುಂಬಕ್ಕಾಗಿ ಬಿಟ್ಟುಹೋಗಿದ್ದು. ಅಪ್ಪು ನಿಧನರಾದಾಗ ದೆಹಲಿಯಿಂದ ಬೆಂಗಳೂರಿಗೆ ಬರಲು ಪ್ರಧಾನಿ ಕಚೇರಿಯಿಂದ ವಿಶೇಷ ವಿಮಾನವನ್ನು ಬಿಡಲಾಗಿತ್ತು. ಇದು ಅಪ್ಪು ಸಂಪಾದಿಸಿದ್ದು. ಅಪ್ಪು ಅವರ ನಿಧನದ ನಂತರ ಅವರ ದೇಹಕ್ಕೆ ಸುತ್ತಿರುವ ರಾಷ್ಟ್ರಧ್ವಜವನ್ನು ಮುಖ್ಯಮಂತ್ರಿಗಳು ಅಶ್ವಿನಿ ಅವರಿಗೆ ನೀಡಿದ್ದು ಅವರು ಮಾಡಿದ ಸಂಪಾದನೆ. ಏನೇ ಆಗಲಿ ತಾನು ಮಾಡುತ್ತಿರುವ ಸಾಮಾಜಿಕ ಕಾರ್ಯಗಳು ನಿಲ್ಲಬಾರದೆಂದು 8 ಕೋಟಿ ರೂಪಾಯಿಯನ್ನು ಎಫ್ ಡಿ ಮಾಡಿರುವುದು ಅಪ್ಪು ಅವರ ನಿಜವಾದ ಆಸ್ತಿ. ಕೋಟ್ಯಂತರ ಕನ್ನಡಿಗರು ಅಶ್ವಿನಿ ಹಾಗೂ ಅವರ ಮಕ್ಕಳಿಗೆ ರಾಜ್ಯಾದ್ಯಂತ ಪ್ರಾರ್ಥನೆ ಮಾಡುತ್ತಿರುವುದು ಅಪ್ಪು ಅವರು ಗಳಿಸಿರುವ ಆಸ್ತಿ. ಇವೆಲ್ಲಾ ಆಸ್ತಿ ಹಣಕ್ಕಿಂತಲೂ ದೊಡ್ಡದು ಹಾಗೂ ಅದಕ್ಕಿಂತ ಹೆಚ್ಚು ಮೌಲ್ಯವುಳ್ಳದ್ದು. ಇದರ ಕುರಿತಂತೆ ನೀವೇನನ್ನುತ್ತೀರಿ ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav