ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಅಪ್ಪು ಇಹಲೋಕ ತ್ಯಜಿಸಿದ ಮೇಲೆ ಇದೇ ಮೊದಲ ಬಾರಿಗೆ ಮಾತನಾಡಿದ ಪತ್ನಿ ಅಶ್ವಿನಿ, ಹೇಳಿದ್ದೇನು ಗೊತ್ತೇ??

ಅಪ್ಪು ಇಹಲೋಕ ತ್ಯಜಿಸಿದ ಮೇಲೆ ಇದೇ ಮೊದಲ ಬಾರಿಗೆ ಮಾತನಾಡಿದ ಪತ್ನಿ ಅಶ್ವಿನಿ, ಹೇಳಿದ್ದೇನು ಗೊತ್ತೇ??

13

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಆಗಲಿ ನಾವು ಇಂದಿಗೆ 11 ದಿನಗಳಾಗಿವೆ. ಆದರೂ ಕೂಡ ಅವರು ಕೊಟ್ಟಿರುವಂತಹ ಸವಿ-ಸವಿ-ನೆನಪು ಇಂದಿಗೂ ಎಂದೆಂದಿಗೂ ಕೂಡ ಸಾವಿರ ವರ್ಷಗಳ ಕಾಲ ಹಸಿರಾಗಿ ಉಳಿಯಲಿದೆ. ಅವರ ವ್ಯಕ್ತಿತ್ವವೇ ಹಾಗೆ ಅವರನ್ನು ನೋಡಿ ದ್ವೇಷ ಪಡುವ ಒಬ್ಬೇಒಬ್ಬ ಮನುಷ್ಯನು ಕೂಡ ಈ ಕರ್ನಾಟಕದಲ್ಲಿ ನಮಗೆ ಸಿಗಲಾರ. ಅವರ ಸರಳ ವ್ಯಕ್ತಿತ್ವಕ್ಕೆ ಕೇವಲ ಅಭಿಮಾನಿಗಳು ಮಾತ್ರ ಫಿದಾ ಆಗದೆ ಸೆಲೆಬ್ರಿಟಿಗಳು ಕೂಡ ಅವರ ಅಭಿಮಾನಿಗಳಾಗಿದ್ದರೆ. ಇದು ದೊಡ್ಡಮನೆಯ ರಾಜಕುಮಾರನ ಹೆಸರಿಗೆ ಇರುವ ಗತ್ತು ಗಮ್ಮತ್ತು.

Follow us on Google News

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 11ನೇ ದಿನದ ಕಾರ್ಯಕ್ರಮವನ್ನು ಕುಟುಂಬಸ್ಥರು ಸಹೋದರರು ಪತ್ನಿ ಹಾಗೂ ಮಕ್ಕಳು ಮಾಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸೇರಿದಂತೆ ಎಲ್ಲರೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 11ನೇ ದಿನದ ಕಾರ್ಯಕ್ರಮವನ್ನು ಮನೆಯಲ್ಲಿ ಪೂಜೆ ಮಾಡುವ ಮೂಲಕ ನಂತರ ಸಮಾಧಿಗೆ ಅವರ ತಿಂಡಿತಿನಿಸುಗಳನ್ನು ನೀಡುವ ಮೂಲಕ ಪೂರ್ಣಗೊಳಿಸಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತಿ ಅಶ್ವಿನಿ ಅವರು ಅವರ ಮರಣಾನಂತರ ಸಂಪೂರ್ಣವಾಗಿ ಸ್ತಬ್ಧರಾಗಿ ಮನೆಯಲ್ಲಿ ಯಾರ ಜೊತೆಗೆ ಕೂಡ ಬೆರೆಯದೇ ಮಂದವಾಗಿ ಉಳಿದುಕೊಂಡಿದ್ದರು. ಇನ್ನು ಸಮಾಧಿಯ ಬಳಿ 11ನೇ ದಿನದ ಪೂಜೆಯನ್ನು ನಿರ್ವಹಿಸಬೇಕಾದರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಜೊತೆ ಅವರ ಮಕ್ಕಳಾದ ಹೊಂದಿದ ಹಾಗೂ ಧೃತಿ ಇಬ್ಬರು ಕೂಡ ಇದ್ದರು. ರಾಘಣ್ಣ ನವರೇ ಹೇಳುವಂತೆ ಅಪ್ಪು ಅವರನ್ನು ಕಳೆದುಕೊಂಡ ನಂತರ ಮನೆಯಿಂದ ಹೊರಬರದೆ ಯಾರೊಂದಿಗೂ ಮಾತನಾಡದೆ ಶಾಂತಮೂರ್ತಿ ಅಂತ ಅಶ್ವಿನಿ ಅವರು ಇದುವರೆಗೂ ಕೂಡ ಇದ್ದರು. ಇನ್ನು ಈಗ ದೊಡ್ಡ ಮನೆಯ ಸೊಸೆಯಾಗಿ ಜವಾಬ್ದಾರಿಯನ್ನು ಹೊತ್ತುಕೊಂಡು ಹೊರಬಂದಿದ್ದಾರೆ.

ಇನ್ನು ನಿಮಗೆಲ್ಲ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಡೆಸಿಕೊಂಡು ಹೋಗುತ್ತಿದ್ದ ಎಲ್ಲಾ ಕಾರ್ಯಗಳನ್ನು ಅವರೇ ಮುಂದುವರಿಸಿಕೊಂಡು ಹೋಗಲಿದ್ದಾರೆ. ಇನ್ನು ಅಪ್ಪು ಅವರನ್ನು ಕಳೆದುಕೊಂಡಿರುವ ದುಃಖದಲ್ಲಿ ತಮ್ಮ ಜೀವನವನ್ನು ಕಳೆದುಕೊಂಡಿರುವ ಅಭಿಮಾನಿಗಳ ವಿಚಾರದಲ್ಲಿ ಕೂಡ ಅವರು ಬೇಸರ ವ್ಯಕ್ತಪಡಿಸಿದರು. ಇದು ಅಪ್ಪುಗೆ ಕೂಡ ಇಷ್ಟವಾಗುವುದಿಲ್ಲ ಹೀಗೆ ಮಾಡಿಕೊಳ್ಳುವುದಕ್ಕೆ ಹೋಗಬೇಡಿ ಎಂಬುದಾಗಿ ಹೇಳಿದರು.

ಇಷ್ಟು ಮಾತ್ರವಲ್ಲದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಪತ್ನಿಯಾಗಿರುವ ಅಶ್ವಿನಿ ಅವರು ಗೃಹಮಂತ್ರಿ ಆಗಿರುವ ಅರಗ ಜ್ಞಾನೇಂದ್ರ ಅವರಿಗೂ ಕೂಡ ಪತ್ರವನ್ನು ಬರೆದು ಧನ್ಯವಾದಗಳನ್ನು ತಿಳಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನವನ್ನು ದುಃಖವನ್ನು ಮರೆತು ಅಭಿಮಾನಿಗಳಿಗಾಗಿ ಮಾಡಿ ಕೊಡಬೇಕಾಗಿತ್ತು. ಅದನ್ನು ಸರ್ಕಾರ ಚೆನ್ನಾಗಿ ನೋಡಿಕೊಂಡಿದ್ದು ಮೂರು ದಿನಗಳವರೆಗೂ ಕೂಡಾ ಲಕ್ಷಾಂತರ ಅಭಿಮಾನಿಗಳು ಅಪ್ಪು ಅವರ,

ಅಂತಿಮ ದರ್ಶನವನ್ನು ಪಡೆದುಕೊಂಡರು ಸಹ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಭಾಯಿಸಿದ್ದಕ್ಕೆ ಧನ್ಯವಾದಗಳು ಎಂಬುದಾಗಿ ಹೇಳಿದ್ದಾರೆ. ಅಪ್ಪು ಅವರಿಗೆ ಸೂಕ್ತವಾದ ಅಂತಿಮ ವಿದಾಯವನ್ನು ಕೋರಲು ಅವಕಾಶ ಮಾಡಿಕೊಟ್ಟದ್ದಕ್ಕೆ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಪರವಾಗಿ ಧನ್ಯವಾದಗಳು ಎಂಬುದಾಗಿ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಇನ್ನು ತಾಳ್ಮೆಯಿಂದ ಇದ್ದಿದ್ದಕ್ಕೆ ಅಭಿಮಾನಿಗಳು ಹಾಗೂ ಕನ್ನಡಿಗರಿಗೆ ಧನ್ಯವಾದಗಳನ್ನು ಕೋರಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.