ಬಿಗ್ ನ್ಯೂಸ್: ಅಪ್ಪು ಆತ್ಮದ ಜೊತೆ ಖ್ಯಾತ ತಜ್ಞ ಮಾತನಾಡಿದಾಗ ಅಪ್ಪು ಹೇಳಿದ್ದೇನು ಗೊತ್ತಾ?? ಆತ್ಮದ ಜೊತೆ ಮಾತನಾಡಿದ ಖ್ಯಾತ ತಜ್ಞ.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಆಗಲಿ ಈಗಾಗಲೇ 11 ದಿನಗಳು ಕಳೆದಿವೆ. ಇಂದು ಕುಟುಂಬಸ್ಥರ ಎಲ್ಲ ಸೇರಿ ಸರಳವಾಗಿ ತಿಥಿ ಕಾರ್ಯಕ್ರಮವನ್ನು ಶಾಸ್ತ್ರೋಕ್ತವಾಗಿ ನಡೆಸಿದ್ದಾರೆ. ಹಿಂದು ಸಂಸ್ಕೃತಿಯ ಪ್ರಕಾರ 11ನೇ ದಿನ ಮರಣ ಹೊಂದಿದವರ ತಿಥಿ ಕಾರ್ಯಕ್ರಮ ನಡೆಸಲಾಗುತ್ತದೆ. ಇದರಿಂದಾಗಿ ಅವರ ಆತ್ಮಕ್ಕೆ ಶಾಂತಿ ಕೋರುವ ಕಾರ್ಯವನ್ನು ಮಾಡಲಾಗುತ್ತದೆ.

ಈ ಸಂದರ್ಭದಲ್ಲಿ ಕುಟುಂಬಸ್ಥರು ಹಾಗೂ ಅತ್ಯಂತ ಆಪ್ತ ವರ್ಗದವರನ್ನು ಆಹ್ವಾನಿಸಲಾಗಿದ್ದು ಸರಳ ರೀತಿಯಲ್ಲಿ ಕಾರ್ಯಕ್ರಮವನ್ನು ಮುಗಿಸಿದ್ದಾರೆ. ಇನ್ನು ಸದ್ಯದಲ್ಲೇ ಪುನೀತ್ ರವರಿಗೆ ನಮನ ಕಾರ್ಯಕ್ರಮವನ್ನು ದೊಡ್ಡದಾಗಿ ಆಯೋಜಿಸಿದ್ದು ಇದಕ್ಕೆ 2000 ಕ್ಕೂ ಅಧಿಕ ಸೆಲೆಬ್ರಿಟಿಗಳು ಬರುವ ನಿರೀಕ್ಷೆ ಇದೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ಆತ್ಮದ ಜೊತೆಗೆ ಮಾತನಾಡಿರುವ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

ಕಳೆದ ಬಾರಿ ಚಿರು ಆತ್ಮದೊಂದಿಗೆ ಮಾತನಾಡಿರುವ ವಿದೇಶಿ ಪ್ಯಾರಾನಾರ್ಮಲ್ ಆಕ್ಟಿವಿಟಿ ತಜ್ಞ ಚಾರ್ಲಿ ಚಿಟ್ಟೆದ್ದಿನ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಆತ್ಮದ ಜೊತೆಗೆ ಕೂಡ ಮಾತನಾಡಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅವರು ನಿಮ್ಮ ಜನರಿಗೆ ಏನು ಹೇಳಲು ಇಷ್ಟಪಡುತ್ತೀರಾ ಎಂದು ಕೇಳಿದಾಗ ಅಪ್ಪು ಅವರ ಆತ್ಮ ಅವರು ನಾನು ಅವರು ಇಷ್ಟಪಡುತ್ತೇನೆ ಎಂಬುದಾಗಿ ಹೇಳಿದ್ದಾರೆ. ನಿಮ್ಮ ಇಬ್ಬರು ಮಕ್ಕಳ ಕುರಿತಂತೆ ಏನು ಹೇಳಲು ಇಷ್ಟಪಡುತ್ತೀರಾ ಎಂದು ಕೇಳಿದಾಗ ನಾನು ಅವರನ್ನು ತುಂಬಾನೇ ಪ್ರೀತಿಸುತ್ತೇನೆ ಎಂಬುದಾಗಿ ಹೇಳಿ ನನಗೆ ಹಾರ್ಟ್ ಫೈಲ್ ಆಗಿದೆ ಡಾಕ್ಟರ್ ಎಂಬುದಾಗಿ ಕೂಡ ಹೇಳಿದ್ದಾರೆ. ಇದು ಎಷ್ಟರ ಮಟ್ಟಿಗೆ ಸತ್ಯ ಹಾಗೂ ಸುಳ್ಳು ಎಂಬುದನ್ನು ನಾವು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav