ಮುಂದಿನ ವಿಶ್ವಕಪ್ ಗೆಲ್ಲೆಬೇಕು ಎಂದರೇ ಈ 5 ಆಟಗಾರರನ್ನು ಸಿದ್ದಪಡಿಸಿ, ಈಗಿನಿಂದಲೇ ಇವರನ್ನು ತಯಾರಿ ನಡೆಸಿ ಎಂದ ಸೆಹ್ವಾಗ್, ಯಾರ್ಯರಂತೆ ಗೊತ್ತೇ??

ಮುಂದಿನ ವಿಶ್ವಕಪ್ ಗೆಲ್ಲೆಬೇಕು ಎಂದರೇ ಈ 5 ಆಟಗಾರರನ್ನು ಸಿದ್ದಪಡಿಸಿ, ಈಗಿನಿಂದಲೇ ಇವರನ್ನು ತಯಾರಿ ನಡೆಸಿ ಎಂದ ಸೆಹ್ವಾಗ್, ಯಾರ್ಯರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಹು ನೀರಿಕ್ಷಿತ ಟಿ 20 ವಿಶ್ವಕಪ್ ನಲ್ಲಿ ಭಾರತ ತಂಡ ಕೊನೆಗೂ ಹೊರಬಿದ್ದಿದೆ. ಈ ಭಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದು ಕರೆಸಿಕೊಂಡಿದ್ದ ಭಾರತ, ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ದ ಹೀನಾಯವಾಗಿ ಸೋತಿತು. ಈ ಮೂಲಕ ಕೋಟ್ಯಂತರ ಕ್ರಿಕೇಟ್ ಪ್ರೇಮಿಗಳಿಗೆ ನಿರಾಸೆ ತರಿಸಿತು. ಸದ್ಯ ಸೆಮಿಫೈನಲ್ ರೇಸ್ ನಿಂದ ಹೊರಬಿದ್ದಿರುವ ಭಾರತ, 2022 ನವೆಂಬರ್ ತನಕ ವಿಶ್ವಕಪ್ ಗಾಗಿ ಕಾಯಬೇಕಿದೆ. ಇನ್ನು ನಾಯಕನಾಗಿ ಇದೇ ಕೊನೆಯ ಸರಣಿಯಲ್ಲಿ ತಂಡವನ್ನ ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಯಾವುದೇ ಐಸಿಸಿ ಟ್ರೋಫಿ ಗೆಲ್ಲದೇ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

ಇನ್ನು ಮುಂದಿನ ವಿಶ್ವಕಪ್ 2002 ಅಕ್ಟೋಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದೆ. ಹೀಗಾಗಿ ಈ ಭಾರಿ ಆದ ತಪ್ಪನ್ನು ಮುಂದಿನ ಭಾರಿ ಪುನರಾವರ್ತಿಸದೇ ಇರಲು ಭಾರತ ತಂಡ ತೀರ್ಮಾನಿಸಿದೆ. ಭಾರತ ತಂಡಕ್ಕೆ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಆಗಮಿಸಿದ್ದು ಕಪ್ ಗೆಲ್ಲುವ ನೀರಿಕ್ಷೆಗಳು ಇಮ್ಮಡಿಯಾಗಿವೆ. ಇನ್ನು ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್, ಭಾರತ ಮುಂದಿನ ಭಾರಿ ಕಪ್ ಗೆಲ್ಲಬೇಕೆಂದರೇ, ವೈಟ್ ಬಾಲ್ ಪರಿಣಿತ ಆಟಗಾರರಿಗೆ ಹೆಚ್ಚು ಅವಕಾಶ ನೀಡಬೇಕು. ಆಗ ಮಾತ್ರ ಗೆಲ್ಲಬಹುದು. ಈ ಐವರು ಆಟಗಾರರನ್ನು ಈಗಿನಿಂದಲೇ ತಯಾರಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸೆಹ್ವಾಗ್ ಪ್ರಕಾರ ಸದ್ಯ ಭಾರತ ತಂಡದಲ್ಲಿ ಕೆ.ಎಲ್.ರಾಹುಲ್, ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ರಂತಹ ಅದ್ಭುತ ವೈಟ್ ಬಾಲ್ ಕ್ರಿಕೇಟಿಗರಿದ್ದಾರೆ. ರಾಹುಲ್ ಹೊರತುಪಡಿಸಿದರೇ, ಇನ್ನಿಬ್ಬರಿಗೆ ಅಂತಹ ಉತ್ತಮ ಅವಕಾಶ ಸಿಗುತ್ತಿಲ್ಲ. ಈ ಮೂವರ ಜೊತೆ ಋತುರಾಜ್ ಗಾಯಕ್ವಾಡ್ ಹಾಗೂ ಶ್ರೇಯಸ್ ಅಯ್ಯರ್ ರವರಿಗೂ ಸಹ ತಂಡದಲ್ಲಿ ಸ್ಥಾನ ಕಲ್ಪಿಸಿ, ಆಡಲು ಅವಕಾಶ ನೀಡಬೇಕು. ಆಗ ಅವರ ಅನುಭವ ಖಂಡಿತವಾಗಿಯೂ ಭಾರತ ತಂಡಕ್ಕೆ ಸಹಾಯವಾಗುತ್ತದೆ ಎಂದು ಹೇಳಿದರು. ವಿರಾಟ್ ಮತ್ತು ರೋಹಿತ್ ಹೆಚ್ಚೆಂದರೇ ಮುಂದಿನ ವಿಶ್ವಕಪ್ ತನಕ ಆಡಬಹುದು. ಹಾಗಾಗಿ ಈಗಿನಿಂದಲೇ ಬಿಸಿಸಿಐ ಯುವ ಆಟಗಾರರನ್ನ ಗುರುತಿಸಿ, ಅವರಿಗೆ ಸೂಕ್ತ ತರಬೇತಿ ಹಾಗೂ ಅವಕಾಶ ನೀಡಬೇಕು ಎಂದು ಹೇಳಿದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.