ಬಿಗ್ ನ್ಯೂಸ್: ಪುನೀತ್ ಸಾವಿನ ತನಿಖೆಯ ಕುರಿತು ಅಖಾಡಕ್ಕೆ ಸಿಎಂ. ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಮುಹೂರ್ತ ಫಿಕ್ಸ್. ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರ ಆಕಸ್ಮಿಕ ಸಾ’ವಿನ ಕುರಿತಂತೆ ಈಗಾಗಲೇ ಸಾಕಷ್ಟು ಆಕ್ರೋಶದ ಧ್ವನಿಗಳು ರಾಜ್ಯಾದ್ಯಂತ ಕೇಳಿಬರುತ್ತಿವೆ. ಯಾಕೆಂದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಸುಸ್ತು ಎಂದು ಮನೆಯಿಂದ ಹೊರಹೋದವರು ಕೂಡ ಚೆನ್ನಾಗಿದ್ದರು. ಇನ್ನು ರಮಣ್ ರಾವ್ ಅವರ ರಮಣಶ್ರೀ ಆಸ್ಪತ್ರೆಗೆ ಹೋದಾಗಲೂ ಕೂಡ ಅಪ್ಪು ಅವರು ಚೆನ್ನಾಗಿದ್ದರು.

ಆದರೆ ಅಲ್ಲಿಂದ ವಿಕ್ರಮ ಆಸ್ಪತ್ರೆಗೆ ಹೊರಹೊರಡುವ ಏಳು ನಿಮಿಷದ ಮಧ್ಯದಲ್ಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹತ್ತಿರದಲ್ಲಿ ರಾಮಯ್ಯ ಆಸ್ಪತ್ರೆ ಇದ್ದರೂ ಕೂಡ ಯಾಕೆ ಕಳುಹಿಸಿಲ್ಲ, ವಿಕ್ರಮ್ ಆಸ್ಪತ್ರೆಯಲ್ಲಿ ಅವರ ಮಗ ಕೆಲಸ ಮಾಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ವೈದ್ಯರು ಅಲ್ಲಿಗೆ ಬಿಸಿನೆಸ್ ಯಾಗಿ ಕಳಿಸಿಕೊಟ್ಟರು ಎಂಬ ಮಾತುಗಳನ್ನು ಅಭಿಮಾನಿಗಳು ವೈದ್ಯರಾದ ರಮಣರಾವ್ ರವರ ಕುರಿತಂತೆ ಮಾಡುತ್ತಿದ್ದಾರೆ. ಇದರ ಕುರಿತಂತೆ ಶೀಘ್ರವಾಗಿ ಸಮಗ್ರವಾಗಿ ತನಿಖೆ ನಡೆಸಬೇಕೆಂದು ದಾಗಿ ರಾಜ್ಯಾದ್ಯಂತ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

ಇನ್ನು ಈ ವಿಚಾರವಾಗಿ ರಾಜ್ಯದ ಮುಖ್ಯಮಂತ್ರಿಗಳಾಗಿ ರುವ ಬಸವರಾಜ ಬೊಮ್ಮಾಯಿ ರವರು ಈಗಾಗಲೇ ಮಧ್ಯ ಪ್ರವೇಶಿಸಿದ್ದು ಹದಿನಾರಕ್ಕೆ ಕಾರ್ಯಕ್ರಮವೊಂದು ನಡೆಯುವುದಿದೆ, ಅದಾದ ನಂತರ ಎಲ್ಲವನ್ನು ಕೂಡ ತನಿಖೆ ಮಾಡಿಸುವುದಾಗಿ ಹಾಗೂ ಅದರ ಕುರಿತಂತೆ ಕುಟುಂಬಸ್ಥರಲ್ಲಿ ಅನುಮತಿಯನ್ನು ಕೇಳುವುದಾಗಿ ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ಪುನೀತ್ ರಾಜಕುಮಾರ್ ಅವರ ಅನಿರೀಕ್ಷಿತ ಸಾ’ವು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ ರಮಣ್ ರಾವ್ ರವರು ಸಾಕಷ್ಟು ಸಂದರ್ಶನಗಳಲ್ಲಿ ಇದರಲ್ಲಿ ನಮ್ಮ ತಪ್ಪು ಏನು ಇಲ್ಲ ಎಂಬುದಾಗಿ ಖಾತರಿ ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಷಯ ಯಾವ ತಿರುವುಗಳನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Post Author: Ravi Yadav