ಆಫಘಾನಿಸ್ತಾನ ಹೀಗೆ ಮಾಡಿದರೇ ನ್ಯೂಜಿಲೆಂಡ್ ವಿರುದ್ದ ಗೆಲುವು ಫಿಕ್ಸ್, ಅಶ್ವಿನ್ ಕೊಟ್ಟ ಸಲಹೆ ಏನು ಗೊತ್ತೇ??

ಆಫಘಾನಿಸ್ತಾನ ಹೀಗೆ ಮಾಡಿದರೇ ನ್ಯೂಜಿಲೆಂಡ್ ವಿರುದ್ದ ಗೆಲುವು ಫಿಕ್ಸ್, ಅಶ್ವಿನ್ ಕೊಟ್ಟ ಸಲಹೆ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಟಿ 20 ವಿಶ್ವಕಪ್ ರೋಚಕ ಹಂತಕ್ಕೆ ತಲುಪಿದೆ. ಎ ಗುಂಪಿನಿಂದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ಶತಲುಪಿವೆ. ಆದರೇ ಬಿ ಗುಂಪಿನಲ್ಲಿ ಸದ್ಯ ಪಾಕಿಸ್ತಾನ ಮಾತ್ರ ಸೆಮಿಫೈನಲ್ ನಲ್ಲಿ ಸ್ಥಾನ ಖಚಿತ ಪಡಿಸಿಕೊಂಡಿದೆ. ಆದರೇ ಎರಡನೇ ಸ್ಥಾನಕ್ಕೆ ಭಾರತ, ನ್ಯೂಜಿಲೆಂಡ್ ಹಾಗೂ ಅಫಘಾನಿಸ್ತಾನ ತಂಡಗಳು ಹೋರಾಟ ನಡೆಸುತ್ತಿವೆ. ಮೂರು ತಂಡಗಳು ಉತ್ತಮ ರನರೇಟ್ ಹೊಂದಿವೆ. ಭಾರತ ಕಳೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ನೀಡಿದ ಗುರಿಯನ್ನು ಕೇವಲ 6.3 ಓವರ್ ನಲ್ಲಿ ತಲುಪಿದ ಕಾರಣ, ನ್ಯೂಜಿಲೆಂಡ್ ಅಫಘಾನಿಸ್ತಾನ ತಂಡಕ್ಕಿಂತ ಉತ್ತಮವಾಗಿದೆ. ಹಾಗಾಗಿ ಭಾರತ ಸೆಮಿಫೈನಲ್ ತಲುಪಬೇಕೆಂದರೇ ಈಗ ಅಫಘಾನಿಸ್ತಾನ ತಂಡ ನ್ಯೂಜಿಲೆಂಡ್ ತಂಡವನ್ನು ಮಣಿಸಬೇಕಿದೆ.

ಆಗ ಭಾರತ ತನ್ನ ಕೊನೆಯ ಪಂದ್ಯ ನಮೀಬಿಯಾ ವಿರುದ್ದ ಯಾವ ಅಂತರದಲ್ಲಿ ಗೆಲ್ಲಬೇಕೆಂಬ ಸ್ಪಷ್ಟ ಲೆಕ್ಕಾಚಾರ ದೊರೆಯುತ್ತದೆ. ಹಾಗಾಗಿ ಸದ್ಯ ಕೋಟ್ಯಂತರ ಭಾರತೀಯರು, ನ್ಯೂಜಿಲೆಂಡ್ ತಂಡ ಅಫಘಾನಿಸ್ತಾನ ತಂಡದ ವಿರುದ್ದ ಸೋಲಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಇತ್ತ ಈ ಪಂದ್ಯದ ಬಗ್ಗೆ ಮಾತನಾಡಿರುವ ಭಾರತ ತಂಡದ ಸ್ಪಿನ್ನರ್ ಆರ್.ಅಶ್ವಿನ್,ನಾವು ಸಹ ಅಫಘಾನಿಸ್ತಾನ ತಂಡ ಗೆಲ್ಲಲಿ ಎಂದು ಬಯಸುತ್ತೇವೆ. ಆ ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ಮುಜಿಬ್ ಉರ್ ರೆಹಮಾನ್ ಗಾಯಗೊಂಡಿದ್ದಾರೆ.

ಅವರು ಶೀಘ್ರವಾಗಿ ಗುಣಮುಖರಾಗಲು ನಮ್ಮ ಫಿಸಿಯೋರವರನ್ನು ಸಹ ಕಳುಹಿಸಿಕೊಡುತ್ತೇವೆ ಎಂದು ಹೇಳಿದ್ದಾರೆ. ಮುಜೀಬ್ ಅಫ್ಘನ್ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದು , ಆಡಿರುವ ಎರಡು ಪಂದ್ಯಗಳಲ್ಲಿ ಆರು ವಿಕೇಟ್ ಪಡೆದಿದ್ದಾರೆ. ಅವರು ನ್ಯೂಜಿಲೆಂಡ್ ತಂಡಕ್ಕೆ ಕಬ್ಬಿಣದ ಕಡಲೆಯಾಗಬಲ್ಲರು. ಇನ್ನು ಅಶ್ವಿನ್ ರವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅಫಘಾನಿಸ್ತಾನ ತಂಡದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್, ನಿಮ್ಮ ಫಿಸಿಯೋ ಬೇಡ, ಅಶ್ವಿನ್ ಭಾಯ್, ಮುಜೀಬ್ ನಮ್ಮ ಫೀಸಿಯೋ ನೀಡಿದ ಚಿಕಿತ್ಸೆಗೆ ಗುಣಮುಖರಾಗಿದ್ದಾರೆ ಮತ್ತವರು ಮಹತ್ವದ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಹೇಳಿದರು. ಮುಜೀಬ್ ಉರ್ ರೆಹಮಾನ್, ರಶೀದ್ ಖಾನ್ ಹಾಗೂ ಮಹಮದ ನಬಿ ಸ್ಪಿನ್ ತ್ರಿವಳಿ ಜೋಡಿ ನ್ಯೂಜಿಲೆಂಡ್ ತಂಡದ ಪ್ರಮುಖ ಬ್ಯಾಟ್ಸಮನ್ ಗಳಿಗೆ ಕಂಟಕವಾಗಬಲ್ಲರು.ಒಂದು ವೇಳೆ ಈ ಪಂದ್ಯ ನ್ಯೂಜಿಲೆಂಡ್ ಗೆದ್ದರೇ, ಸೋಮವಾರದ ಭಾರತದ ಪಂದ್ಯ ಅನೌಪಚಾರಕವಾಗಲಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.