ಅಫ್ಘಾನ್ ವಿರುದ್ಧ ನ್ಯೂಜಿಲೆಂಡ್ ಗೆದ್ದರೆ ಏನು ಗತಿ?? ಜಡೇಜಾ ಕೊಟ್ಟ ಉತ್ತರವೇನು ಗೊತ್ತೇ?? ಶಬ್ಬಾಶ್ ಎಂದ ನೆಟ್ಟಿಗರು.

ಅಫ್ಘಾನ್ ವಿರುದ್ಧ ನ್ಯೂಜಿಲೆಂಡ್ ಗೆದ್ದರೆ ಏನು ಗತಿ?? ಜಡೇಜಾ ಕೊಟ್ಟ ಉತ್ತರವೇನು ಗೊತ್ತೇ?? ಶಬ್ಬಾಶ್ ಎಂದ ನೆಟ್ಟಿಗರು.

ನಮಸ್ಕಾರ ಸ್ನೇಹಿತರೇ ಸರ್ ರವೀಂದ್ರ ಜಡೇಜಾ ಟೀಮ್ ಇಂಡಿಯಾದ ಆಧಾರಸ್ತಂಭ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಯಾವುದೇ ಇರಲಿ, ಅಲ್ಲಿ ತನ್ನ ಶೇಕಡಾ ನೂರರಷ್ಟು ಸಾಮರ್ಥ್ಯವನ್ನು ಧಾರೆ ಎರೆಯುವ ಕ್ರಿಕೇಟಿಗ. ತಂಡ ಸಂಕಷ್ಟದಲ್ಲಿದ್ದಾಗ ಆಧಾರವಾಗುವ ಜಡೇಜಾ, ಕ್ರಿಕೇಟ್ ನ ಯಾವುದಾದರೂ ಒಂದು ವಿಭಾಗದಲ್ಲಿ ಸದಾ ಮಿಂಚುತ್ತಿರುತ್ತಾರೆ. ಇನ್ನು ಈಗ ನಡೆಯುತ್ತಿರುವ ಐಸಿಸಿ ಟಿ 20 ವಿಶ್ವಕಪ್ ನಲ್ಲಿ ಮೊದಲೆರೆಡು ಪಂದ್ಯಗಳಲ್ಲಿ ಜಡೇಜಾ ವಿಕೇಟ್ ತೆಗೆಯುವಲ್ಲಿ ವಿಫಲರಾಗಿದ್ದರು. ಅದಲ್ಲದೇ ಸಾಕಷ್ಟು ರನ್ ಬಿಟ್ಟುಕೊಟ್ಟು ದುಬಾರಿ ಸಹ ಆಗಿದ್ದರು. ಹೀಗಾಗಿ ಜಡೇಜಾ ಮೇಲೆ ಟೀಕೆಗಳ ಸುರಿಮಳೆ ಬಂದಿದ್ದವು. ಆದರೇ ಜಡೇಜಾ ಮೂರನೇ ಪಂದ್ಯದಲ್ಲಿ ಒಂದು ವಿಕೇಟ್ ತೆಗೆದಿದ್ದರು. ಇನ್ನು ನಿನ್ನೆ ನಡೆದ ಸ್ಕಾಟ್ಲೆಂಡ್ ವಿರುದ್ದದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಜಡೇಜಾ, ನಾಲ್ಕು ಓವರ್ ಗಳಲ್ಲಿ ಹದಿನೈದು ರನ್ ನೀಡಿ ಮೂರು ಪ್ರಮುಖ ವಿಕೇಟ್ ಪಡೆದುಕೊಂಡರು.

ಈ ಮೂಲಕ ಸ್ಕಾಟ್ಲೆಂಡ್ ತಂಡದ ವಿರುದ್ದ ಭರ್ಜರಿ ಜಯವನ್ನ ಭಾರತ ಸಾಧಿಸಲು ಸಾಧ್ಯವಾಯಿತು. ಇನ್ನು ಸಹಜವಾಗಿ ಉತ್ತಮ ಬೌಲಿಂಗ್ ನಡೆಸಿದ್ದ ರವೀಂದ್ರ ಜಡೇಜಾರವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ದೊರೆಯಿತು. ಇನ್ನು ಪಂದ್ಯ ಮುಗಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ರವೀಂದ್ರ ಜಡೇಜಾ ಪತ್ರಕರ್ತರೊಬ್ಬರ ಪ್ರಶ್ನೆಗೆ ಸಖತ್ ಬೋಲ್ಡ್ ಆಗಿ ಉತ್ತರ ನೀಡಿದ್ದರು. ಆ ಉತ್ತರ ನೀಡಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಭಾರತ ಸೆಮಿಫೈನಲ್ ತಲುಪುವ ನಿಟ್ಟಿನಲ್ಲಿ ಅಫಘಾನಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಗೆಲ್ಲಬೇಕಿದೆ. ಒಂದು ವೇಳೆ ಅಫಘಾನಿಸ್ತಾನ ಗೆಲ್ಲದಿದ್ದರೇ ಏನು ಮಾಡುತ್ತಿರಿ ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದರು.

ಅದಕ್ಕೆ ಸಿಂಪಲ್ ಉತ್ತರ ನೀಡಿದ ಜಡೇಜಾ, ಏನು.ಮಾಡಲು ಸಾಧ್ಯ, ಬ್ಯಾಗ್ ಪ್ಯಾಕ್ ಮಾಡಿಕೊಂಡು ಮನೆಗೆ ಹೋಗುತ್ತೇವೆ ಎಂದು ಹೇಳಿದರು. ಈ ಉತ್ತರಕ್ಕೆ ಪತ್ರಿಕಾಗೋಷ್ಠಿಯಲ್ಲಿದ್ದ ಎಲ್ಲಾ ಪತ್ರಕರ್ತರು ಗೊಳ್ಳೆಂದು ನಕ್ಕರು. ಭಾನುವಾರ ನಡೆಯಲಿರುವ ಮೊದಲ ಪಂದ್ಯದ ಮೇಲೆ ಸದ್ಯ ಎಲ್ಲರೂ ಗಮನ ಹರಿಸಿದ್ದು ಅಫಘಾನಿಸ್ತಾನ ತಂಡ ನ್ಯೂಜಿಲೆಂಡ್ ತಂಡವನ್ನು ಮಣಿಸಲಿ ಎಂದು ವಿಶ್ವಾದ್ಯಂತ ಇರುವ ಭಾರತೀಯ ತಂಡದ ಕ್ರಿಕೇಟ್ ಪ್ರೇಮಿಗಳು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಹಾಗೊಂದು ವೇಳೆ ನಡೆದರೇ ಭಾರತ ತಂಡ ಸೆಮಿಫೈನಲ್ ಗೆ ಏರುತ್ತದೆ. ಅಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ, ಫೈನಲ್ ನಲ್ಲಿ ಸಾಂಪ್ರದಾಯಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಲಿ ಎಂಬುದು ಕೋಟ್ಯಾಂತರ ಅಭಿಮಾನಿಗಳ ಹಾರೈಕೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.