ದೀಪಾವಳಿ ಹಬ್ಬದ ಸಮಯದಲ್ಲಿ ನೀವು ಈ ಚಿಕ್ಕ ಕ್ರಮಗಳ ಮೂಲಕ ಲಕ್ಷ್ಮೀದೇವಿಯ ಆಶೀರ್ವಾದ ದೊರೆಯುವುದು ಪಕ್ಕ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬ ಮನುಷ್ಯನು ಕೂಡ ಜೀವನದಲ್ಲಿ ಸಾಕಷ್ಟು ಹಣವನ್ನು ಸಂಪಾದಿಸುವ ಕನಸನ್ನು ಕಂಡಿರುತ್ತಾನೆ. ಇದಕ್ಕಾಗಿ ಆತ ಹಗಲು-ರಾತ್ರಿಯೆನ್ನದೆ ಪರಿಶ್ರಮದಿಂದ ದುಡಿಯುತ್ತಾನೆ. ಇಷ್ಟೆಲ್ಲ ಮಾಡಿದರೂ ಕೂಡ ಆತ ನಾನಂದುಕೊಂಡ ಜೀವನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವನು ತನ್ನ ಹಣೆಬರಹವನ್ನು ಹಳಿದುಕೊಂಡಿರುತ್ತಾನೆ. ಇನ್ನು ಈಗಾಗಲೇ ಕೆಲವೇ ದಿನಗಳಲ್ಲಿ ಹಿಂದೂಗಳ ಪವಿತ್ರ ಹಬ್ಬವಾಗಿರುವ ದೀಪಾವಳಿ ಹಬ್ಬ ಬರಲಿದೆ. ಈ ಸಂದರ್ಭದಲ್ಲಿ ಲಕ್ಷ್ಮಿ ದೇವಿಯ ಪೂಜೆ ಎಲ್ಲರ ಮನೆಯಲ್ಲಿ ಕೂಡ ನಡೆಯುತ್ತದೆ.

ಈ ಸಂದರ್ಭದಲ್ಲಿ ಲಕ್ಷ್ಮಿ ದೇವಿಯ ಪೂಜೆ ಮಾಡುವುದರಿಂದ ಆಗಿ ಖಂಡಿತವಾಗಿಯೂ ಕೇವಲ ಧನಲಕ್ಷ್ಮಿ ಪ್ರವೇಶ ನಿಮ್ಮ ಜೀವನದಲ್ಲಿ ಮಾತ್ರವಲ್ಲದೆ ನಿಮ್ಮ ಕೊನೆಯವರೆಗೂ ಕೂಡ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ ಎಂಬ ಪ್ರತೀತಿ ಇದೆ. ಹಾಗಿದ್ದರೆ ಏನು ಮಾಡುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಬಲಿಷ್ಠವಾಗಿ ಧನಲಕ್ಷ್ಮಿ ನಿಮ್ಮ ಮನೆಯಲ್ಲಿ ಸದಾಕಾಲ ನೆಲೆಸಿರುತ್ತಾಳೆ ಎಂಬುದರ ಕುರಿತು ತಿಳಿಯೋಣ ಬನ್ನಿ.

1 ದೀಪಾವಳಿ ಹಬ್ಬಕ್ಕೆ ಎರಡು ದಿನ ಮುಂಚೆ ಹಳದಿಯನ್ನು ಉಂಡೆ ಗಟ್ಟಿ ಮನೆಯ ಮುಖ್ಯ ದ್ವಾರದ ಮೇಲೆ ಓಂ ಎಂದು ಬರೆಯುವುದರಿಂದ ಲಕ್ಷ್ಮೀದೇವಿಯ ಆಗಮನವಾಗುತ್ತದೆ ಎಂಬ ನಂಬಿಕೆ ಇದೇ. 2 ದೀಪಾವಳಿ ದಿನದ ಪೂಜೆಯ ಸಂದರ್ಭದಲ್ಲಿ ಶಾಖ ಹಾಗೂ ಜಾಗಟೆಗಳನ್ನು ಬಾರಿಸಬೇಕು. ಇದರಿಂದ ಮನೆಯಲ್ಲಿ ನೆಲೆಸಿರುವ ದರಿದ್ರ ಹೊರಗೆ ಹೋಗಿ ಲಕ್ಷ್ಮೀದೇವಿ ವಾಸವಾಗುತ್ತಾಳೆ.

3 ದೀಪಾವಳಿ ಪೂಜೆ ಸಂದರ್ಭದಲ್ಲಿ ಕಪ್ಪು ರತ್ನಕ್ಕೆ ಕೂಡ ಪೂಜೆ ಮಾಡಿ ಅದನ್ನು ಮಾಲೆಯ ರೀತಿಯಲ್ಲಿ ದರಿಸುವುದರಿಂದ ಲಕ್ಷ್ಮೀದೇವಿ ಆಗಮನವಾಗುತ್ತದೆ. 4 ನಿಮಗೆಲ್ಲ ತಿಳಿದಿರುವಂತೆ ವಿದ್ಯೆ ಹಾಗೂ ಬುದ್ಧಿಯ ದೇವರು ವಿನಾಯಕ ಆದರೆ ಹಣದ ದೇವರು ಲಕ್ಷ್ಮಿ ಎಂಬುದಾಗಿ. ಇನ್ನು ಇವರಿಬ್ಬರ ಯಂತ್ರ ಮಹಾ ಯಂತ್ರವಾಗಿದ್ದು ಇದನ್ನು ಮನೆಯಲ್ಲಿ ಸ್ಥಾಪಿಸಬೇಕಾಗಿದೆ. ಇದರಿಂದಾಗಿ ಎರಡು ಕೂಡ ಮನೆಯಲ್ಲಿ ವೃದ್ಧಿಯಾಗಿ ಮನೆ ಸಮೃದ್ಧಿಯಾಗಿರುತ್ತದೆ.

5 ಇನ್ನು ನೀವು ದೀಪಾವಳಿ ಪೂಜೆಯ ಸಂದರ್ಭದಲ್ಲಿ ಶ್ರೀ ಯಂತ್ರ ಕುಬೇರ ಯಂತ್ರ ಹಾಗೂ ಕನಕಧಾರ ಯಂತ್ರವನ್ನು ಮನೆಯಲ್ಲಿ ಸ್ಥಾಪಿಸುವುದರಿಂದ ಆಗಿ ಇದರಿಂದ ನೀವು ನೆಲೆಸಿರುವ ಮನೆಯಲ್ಲಿ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಸದಾ ಕಾಲ ಇರುತ್ತದೆ ಎಂಬ ನಂಬಿಕೆ ಕೂಡ ಶಾಸ್ತ್ರ-ಪುರಾಣ ಜ್ಯೋತಿಷ್ಯ ಗಳಲ್ಲಿ ಇದೆ. 6 ದೀಪಾವಳಿ ಹಬ್ಬದ ಸಂದರ್ಭದಲ್ಲಿ ಲಕ್ಷ್ಮಿ ದೇವಿಯ ಪೂಜೆ ಮಾಡುತ್ತಿರಬೇಕಾದರೆ 11 ಬಿಳಿ ಕವಡೆಗಳನ್ನು ಲಕ್ಷ್ಮಿಯ ಪಾದದ ಬಳಿ ಇಟ್ಟು ಪೂಜೆ ಮಾಡಿ ನಂತರ ಅವುಗಳನ್ನು ಕೆಂಪು ಶಾಲಿನಿಂದ ಸುತ್ತಿ ನಿಮ್ಮ ತಿಜೋರಿಯಲ್ಲಿ ಇಡಿ. ಖಂಡಿತವಾಗಿ ಅತಿವೇಗವಾಗಿ ನಿಮಗೆ ಆರ್ಥಿಕದ ಲಾಭದ ಕುರಿತಂತೆ ಸುದ್ದಿ ಖಂಡಿತವಾಗಿ ಕೇಳಲು ಸಿಗುತ್ತದೆ.

7 ಇನ್ನು ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮೀದೇವಿಗೆ ಪ್ರಸಾದವನ್ನು ನೈವೇದ್ಯವಾಗಿ ಪೂಜೆಗೆ ಇಟ್ಟು ಅದನ್ನು ಬಡವರಲ್ಲಿ ಹಂಚುವುದರಿಂದ ನಿಮ್ಮಲ್ಲಿರುವ ಎಲ್ಲಾ ಸಾಲ ಹಾಗೂ ಖರ್ಚುಗಳ ಭಾರ ಹಾಗೂ ಸಮಸ್ಯೆಗಳು ಕಡಿಮೆಯಾಗುತ್ತದೆ. 8 ಇನ್ನು ದೀಪಾವಳಿ ಸಂದರ್ಭದಲ್ಲಿ ಒಂದು ಲೋಟ  ತೆಗೆದುಕೊಂಡು ಅದನ್ನು ನೀರು ತುಂಬಿಸಿ ಅದನ್ನು ಒಂದು ಬಟ್ಟೆಯಿಂದ ಸುತ್ತಿ ಅಡುಗೆಮನೆಯಲ್ಲಿ ತಂದಿಡಬೇಕು. ಇದರಿಂದಾಗಿ ಇಡೀ ಮನೆಯಲ್ಲಿ ಸಂತೋಷ ಸುಖ ನೆಮ್ಮದಿ ಹಾಗೂ ಅಷ್ಟೈಶ್ವರ್ಯಗಳು ಕೂಡ ತುಂಬಿ ತುಳುಕುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನು ಎಂಬುದನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Post Author: Ravi Yadav