ದುಡ್ಡು ಹಾಕುವಾಗ ಅಚನೂಕ್ ಆಗಿ ಬೇರೆ ಯವರಿಗೆ ಹಣ ಹಾಕಿದರೇ ವಾಪಸ್ಸು ಪಡೆಯುವುದು ಹೇಗೆ ಗೊತ್ತೇ?? ಬ್ಯಾಂಕ್ ನಿಯಮಗಳು ಏನು ಹೇಳುತ್ತವೆ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ನಮ್ಮ ಭಾರತ ಹಾಗೂ ಭಾರತೀಯರು ಡಿಜಿಟಲೀಕರಣಕ್ಕೆ ಒಗ್ಗಿಕೊಂಡಿದ್ದಾರೆ. ಎಲ್ಲರೂ ಕೂಡ ಆನ್ಲೈನ್ ಬ್ಯಾಂಕಿಂಗ್ ಹಾಗೂ ಯುಪಿಐ ಮೂಲಕ ತಮ್ಮ ಹಣವನ್ನು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಟ್ರಾನ್ಸಾಕ್ಷನ್ ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಇನ್ನು ಇದರಿಂದ ಒಳ್ಳೆಯದು ಎಷ್ಟಿದೆಯೋ ಹಾಗೆಯೇ ಕೆಲವೊಮ್ಮೆ ಹಣವನ್ನು ಟ್ರಾನ್ಸಾಕ್ಷನ್ ಮಾಡುವಾಗ ನಾವು ಮೋಸ ಹೋಗುತ್ತೇವೆ ಅಥವಾ ತಪ್ಪು ಖಾತೆಗೆ ಹಣವನ್ನು ಹಾಕಿ ಬಿಡುತ್ತೇವೆ. ಇದರಿಂದಾಗಿ ಹಲವು ಬಾರಿ ಪರಿಶ್ರಮಪಟ್ಟು ದುಡಿದಂತಹ ಹಣ ಬೇರೆಯವರ ಪಾಲಾಗುತ್ತದೆ ಎಂಬ ಭಯ ಕೂಡ ಇರುತ್ತದೆ.

ನಮ್ಮ ಭಾರತೀಯರು ಹಲವಾರು ಬಾರಿ ತಪ್ಪಾಗಿ ಬೇರೆ ಖಾತೆಗೆ ಹಣವನ್ನು ಹಾಕಿದಾಗ ಅದು ವಾಪಸ್ಸು ಬರುವುದಿಲ್ಲ ಎಂಬ ಬೇಸರದಲ್ಲಿ ಕುಳಿತಿರುತ್ತಾರೆ ಅದಕ್ಕೆ ಈಗಾಗಲೇ ಆರ್ ಬಿ ಐ ಕೆಲವೊಂದು ಗೈಡ್ ಲೈನ್ ಹೊರಹಾಕಿದೆ ಇದರ ಮೂಲಕ ನೀವು ನಿಮ್ಮ ಹಣವನ್ನು ರಿ ಫಂಡ್ ಪಡೆಯಬಹುದಾಗಿದೆ. ಹೌದು ಗೆಳೆಯರೇ ಆರ್ಬಿಐನ ಹೊಸ ಕಾನೂನಿನ ಪ್ರಕಾರ ಒಂದು ವೇಳೆ ನೀವು ಬ್ಯಾಂಕ್ ಎಟಿಎಂ ಅಥವಾ ಮೊಬೈಲ್ ನಿಂದ ಹಣವನ್ನು ಟ್ರಾನ್ಸಾಕ್ಷನ್ ಮಾಡಿದ್ದರೆ, ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಗೆ ಒಂದು ಮೆಸೇಜ್ ಬರುತ್ತದೆ. ಅದರಲ್ಲಿ ನೀವು ಮಾಡಿರುವ ಟ್ರಾನ್ಸಾಕ್ಷನ್ ಸರಿಯಾಗಿ ಆಗಿದೆ ಅಥವಾ ಅಚಾತುರ್ಯದಿಂದ ನಡೆದಿದೆಯೇ ಎಂಬುದಾಗಿ ನಿಮ್ಮನ್ನು ಕೇಳಲಾಗುತ್ತದೆ.

ಒಂದು ವೇಳೆ ತಪ್ಪಿನಿಂದಾಗಿ ಆ ಹಣ ಟ್ರಾನ್ಸಾಕ್ಷನ್ ಆಗಿದ್ದಾರೆ ಅಲ್ಲೇ ನೀಡಿರುವ ನಂಬರ್ಗೆ ನೀವು ಕರೆ ಮಾಡಿ ನಿಮ್ಮ ದೂರನ್ನು ದಾಖಲಿಸಬಹುದು ನಿಮ್ಮ ಹಣ ಸುರಕ್ಷಿತವಾಗಿ ನಿಮ್ಮ ಖಾತೆಗೆ ಬಂದು ಸೇರುತ್ತದೆ. ಇಷ್ಟು ಮಾತ್ರವಲ್ಲದೆ ನಿಮ್ಮ ಬ್ಯಾಂಕಿಗೆ ಹೋಗಿ ನೀವು ಯಾವ ಖಾತೆಗೆ ಹಣ ಹಾಕಿದ್ದೀರಿ ಎಷ್ಟು ಸಮಯಕ್ಕೆ ಹಾಕಿದ್ದೀರಿ ಎಷ್ಟು ಹಣವನ್ನು ಹಾಕಿದ್ದೀರಿ ಎಂಬ ಸಂಪೂರ್ಣ ವಿವರವನ್ನು ನೀಡಿದರೆ ಇದರಿಂದ ಕೂಡ ನಿಮ್ಮ ಹಣ ವಾಪಸ್ಸು ಬರುವ ಎಲ್ಲಾ ಸಾಧ್ಯತೆಗಳು ಇರುತ್ತದೆ.

ಒಂದು ವೇಳೆ ನೀವು ತಪ್ಪಿನಿಂದ ಹಾಕಿರುವ ಖಾತೆಯ ಹೋಲ್ಡರ್ ನಿಮ್ಮ ಹಣವನ್ನು ನೀಡಲು ಒಪ್ಪಿದರೆ ಓಕೆ. ಒಂದು ವೇಳೆ ಹಣವನ್ನು ಹಿಂದಿರುಗಿಸಲು ತಕರಾರು ತೆಗೆದರೆ ನೀವು ಕಾನೂನಾತ್ಮಕ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ. ಮತ್ತು ನಿಮಗೆಲ್ಲ ತಿಳಿದಿರುವಂತೆ ಕಾರಣಾತ್ಮಕ ಕ್ರಮಗಳು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಇನ್ನೊಂದು ಪ್ರಮುಖ ವಿಚಾರವೇನೆಂದರೆ ಒಂದು ವೇಳೆ ನೀವು ಆನ್ಲೈನ್ ಟ್ರಾನ್ಸಾಕ್ಷನ್ ಮಾಡಬೇಕಾದರೆ ತಪ್ಪಿನಿಂದ ಬೇರೆಯವರಿಗೆ ಹಣವನ್ನು ವರ್ಗಾಯಿಸಿದರೆ ಅದಕ್ಕೆ ಬ್ಯಾಂಕ್ ಹೊಣೆ ಆಗಿರುವುದಿಲ್ಲ.

ಹೀಗಾಗಿ ಪ್ರತಿಯೊಬ್ಬರು ಕೂಡ ನೀವು ಎಲ್ಲಾ ವಿಚಾರಗಳನ್ನು ಪರಿಶೀಲಿಸಿ ಹಣವನ್ನು ಟ್ರಾನ್ಸಾಕ್ಷನ್ ಮಾಡಬೇಕಾಗುತ್ತದೆ. ಇನ್ನೂ ಒಂದು ವೇಳೆ ನೀವು ಆನ್ಲೈನ್ ಯುಪಿಐ ಟ್ರಾನ್ಸಾಕ್ಷನ್ ಮಾಡಬೇಕಾದರೆ ತಪ್ಪು ಖಾತೆಯ ಸಂಖ್ಯೆ ಅಂದರೆ ಆ ಸಂಖ್ಯೆಯಲ್ಲಿ ಯಾವುದೇ ಅಕೌಂಟ್ ಇಲ್ಲದಿದ್ದರೆ ಅದು ಖಂಡಿತವಾಗಿ ಅದೇ ಕೂಡಲೇ ನಿಮ್ಮ ಖಾತೆಗೆ ವಾಪಸಾಗುತ್ತದೆ. ಈ ಎಲ್ಲಾ ವಿಚಾರಗಳನ್ನು ನೀವು ಆನ್ಲೈನ್ ಟ್ರಾನ್ಸಾಕ್ಷನ್ ಮಾಡಬೇಕಾದರೆ ಖಂಡಿತವಾಗಿ ಗಮನವನ್ನು ವಹಿಸಬೇಕಾಗುತ್ತದೆ. ಈ ವಿಚಾರಗಳ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Post Author: Ravi Yadav