ಪಾಕ್ ವಿರುದ್ಧ ಸೋತ ಬೆನ್ನಲ್ಲೇ ಭಾರತಕ್ಕ ಶಾಕ್ ಮೇಲೆ ಶಾಕ್, ಕೊಹ್ಲಿ ತಗೋಳ್ತಾರಾ ಕಠಿಣ ನಿರ್ಧಾರ?? ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಹು ನೀರಿಕ್ಷಿತ ಟಿ 20 ವಿಶ್ವಕಪ್ ನ ಮೊದಲ ಪಂದ್ಯದಲ್ಲೇ ಭಾರತ ತನ್ನ ಸಾಂಪ್ರದಾಯಕ ಎದುರಾಳಿ ಪಾಕಿಸ್ತಾನದ ವಿರುದ್ದ ಹೀನಾಯವಾಗಿ ಸೋತಿದೆ. ಮೊದಲು ಬ್ಯಾಟ್ ಮಾಡಿದ ಭಾರತ ಇಪ್ಪತ್ತು ಓವರ್ ಗಳಲ್ಲಿ 152 ರನ್ ಗಳಿಸಲಷ್ಟೇ ಶಕ್ತವಾದರೇ, ನಂತರ ಬ್ಯಾಟ್ ಮಾಡಿದ ಪಾಕಿಸ್ತಾನ ವಿಕೇಟ್ ನಷ್ಟವಿಲ್ಲದೇ 18 ನೇ ಓವರ್ ನಲ್ಲಿ ವಿಜಯ ಸಾಧಿಸಿತು. ಇದು ಭಾರತೀಯ ಕ್ರೀಡಾ ಅಭಿಮಾನಿಗಳ ಜಂಘಾಬಲವೇ ಕುಸಿಯುವಂತೆ ಮಾಡಿತು. ವಿಶ್ವಕಪ್ ಟೂರ್ನಿಗಳಲ್ಲಿ ಇದುವರೆಗೂ ಅಜೇಯವಾಗಿದ್ದ ಭಾರತ, ಇದೇ ಮೊದಲ ಭಾರಿ ಪಾಕಿಸ್ತಾನದ ಎದುರು ಶರಣಾಗಿದೆ.

ಇನ್ನು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಪಾಕ್ ವೇಗಿ ಶಾಹೀನ್ ಅಫ್ರಿದಿ ಮೊದಲ ಓವರ್ ನಲ್ಲೇ ರೋಹಿತ್ ಶರ್ಮಾರನ್ನ ಪೆವಿಲಿಯನ್ ಗೆ ಕಳುಹಿಸಿ ಶಾಕ್ ನೀಡಿದರು. ಇನ್ನು ತಮ್ಮ ಏರಡನೇ ಓವರ್ ನಲ್ಲಿ ಕೆ.ಎಲ್.ರಾಹುಲ್ ರನ್ನ ಸಹ ಬೌಲ್ಡ್ ಮಾಡಿದರು. ಈ ಮೂಲಕ ಭಾರತವನ್ನ ಪವರ್ ಪ್ಲೇನಲ್ಲಿ ಕಟ್ಟಿಹಾಕಿದರು. ಇದು ಭಾರತಕ್ಕೆ 20 ರಿಂದ 30 ರನ್ ಹೊಡೆತ ನೀಡಿತು‌. ಇನ್ನು ಬೌಲಿಂಗ್ ನಲ್ಲಿಯೂ ನಿಸ್ತೇಜ ಪ್ರದರ್ಶನ ನೀಡಿದ ಭಾರತದ ಬೌಲರ್ ಗಳು ಒಂದೇ ಒಂದು ವಿಕೇಟ್ ತೆಗೆಯುವ ಅವಕಾಶವನ್ನ ಸೃಷ್ಠಿಸಲೇ ಇಲ್ಲ. ಎಲ್ಲಾ ಬೌಲರ್ ಗಳು ದುಬಾರಿಯಾದರು. ಇದೇ ಥರಹದ ಬೌಲಿಂಗ್ ನಡೆಸಿದರೇ ಭಾರತ ವಿಶ್ವಕಪ್ ನ ಉಪಾಂತ್ಯ ತಲುಪತ್ತದೆಯಾ ಎಂಬ ಅನುಮಾನ ಸದ್ಯ ಎಲ್ಲರಿಗೂ ಕಾಡುತ್ತಿದೆ.

ಇನ್ನು ಈ ನಡುವೆ ಭಾರತ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು, ಭಾರತ ತಂಡದಲ್ಲಿದ್ದ ಏಕೈಕ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಿನ್ನೆ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಇಂಜುರಿ ಗೊಂಡಿದ್ದಾರೆ‌. ಬಲ ಭುಜಕ್ಕೆ ಇಂಜುರಿವಾದ ಕಾರಣ ಅವರನ್ನ ಸ್ಕ್ಯಾನಿಂಗ್ ಮಾಡಿಸಲು ಕರೆದುಕೊಂಡು ಹೋಗಲಾಗಿತ್ತು. ಹಾಗಾಗಿ ಹಾರ್ದಿಕ್ ಬದಲು ಇಶಾನ್ ಫೀಲ್ಡಿಂಗ್ ಗೆ ಇಳಿದಿದ್ದರು. ಹಾರ್ದಿಕ್ ಸದ್ಯ ಬೆನ್ನು ನೋವಿನಿಂದ ಬೌಲಿಂಗ್ ಮಾಡುತ್ತಿಲ್ಲ. ಇದರ ಜೊತೆಗೆ ಆರನೇ ಕ್ರಮಾಂಕದಲ್ಲಿ ಫೀನಿಶರ್ ಜವಾಬ್ದಾರಿ ನಿರ್ವಹಿಸುತ್ತಿದ್ದ ಹಾರ್ದಿಕ್ ಮುಂಬರುವ ಪಂದ್ಯಗಳಲ್ಲಿ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಹೀಗಾದರೇ ಭಾರತ ತಂಡಕ್ಕೆ ದೊಡ್ಡ ಹೊಡೆತ ಬೀಳುವುದು ಖಚಿತವಾಗುತ್ತದೆ. ಪಾಕ್ ವಿರುದ್ದ ಮೊದಲ ಪಂದ್ಯ ಸೋತ ಕಾರಣ ಭಾರತ ಸದ್ಯ ಗೆಲ್ಲಲೇಬೇಕಾದ ಟೆನ್ಶನ್ ನಲ್ಲಿದ್ದು, ಮುಂದಿನ ನಾಲ್ಕು ಪಂದ್ಯಗಳನ್ನ ಗೆದ್ದರೇ ಮಾತ್ರ ಉಪಾಂತ್ಯ ತಲುಪಲಿದೆ. ಈ ಸಮಯದಲ್ಲಿ ಕೊಹ್ಲಿ ರವರು ಹಾರ್ಧಿಕ್ ಪಂದ್ಯ ರವರ ಬದಿಗಿಟ್ಟು ರೆಸೆರ್ವ್ಡ್ ಪ್ಲೇಯರ್ ಆಗಿರುವ ಹರ್ಷಲ್ ಪಟೇಲ್ ರವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳುವ ಪ್ರಸ್ತಾಪ ಮಾಡಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Post Author: Ravi Yadav