ರೇಣುಕಾರ್ಚಾರ್ಯ ಅವರ ಮುಂದುವರೆದ ಸಮಾಜಮುಖಿ ಕಾರ್ಯ, ಮತ್ತೊಮ್ಮೆ ಯಾರು ಮಾಡದ ಕೆಲಸ ಮಾಡಿ ಭೇಷ್ ಅನಿಸಿಕೊಂಡದ್ದು ಹೇಗೆ ಗೊತ್ತೇ??

ರೇಣುಕಾರ್ಚಾರ್ಯ ಅವರ ಮುಂದುವರೆದ ಸಮಾಜಮುಖಿ ಕಾರ್ಯ, ಮತ್ತೊಮ್ಮೆ ಯಾರು ಮಾಡದ ಕೆಲಸ ಮಾಡಿ ಭೇಷ್ ಅನಿಸಿಕೊಂಡದ್ದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಶಾಸಕ ಎಂ.ಪಿ ರೇಣುಕಾಚಾರ್ಯ, ಸಾಕಷ್ಟು ಸಮಾಜ ಮುಖಿ ಕೆಲಸಗಳನ್ನು ಮಾಡಿ ಸದಾ ಸುದ್ದಿಯಲ್ಲಿರುತ್ತಾರೆ. ಇದಕ್ಕೆ ಉದಾಹರಣೆ ಕರೋನಾ ಸಂಕಷ್ಟ ಸಮಯದಲ್ಲಿ ಜನರ ಬೆನ್ನಿಗೆ ನಿಂತಿದ್ದು. ಇದೀಗ ಮತ್ತೆ ಸುದ್ದಿಯಲ್ಲಿ ರೇಣುಕಾಚಾರ್ಯ. ಜಿಲ್ಲಾಧಿಕಾರಿ ’ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದ ಅಂಗವಾಗಿ ಸಚಿವ ಆರ್. ಅಶೋಕ್ ದಾವಣೆಗೆರೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ರೇಣುಕಾಚಾರ್ಯ ಕೂಡ ಅವರ ಜೊತೆಗಿದ್ದರು.

ಗ್ರಾಮ ವಾಸ್ತವ್ಯ ಇಂದು ನಿನ್ನೆಯದಲ್ಲ, ಸಾಮಾನ್ಯವಾಗಿ ಅಧಿಕಾರದಲ್ಲಿರುವ ಸಚಿವರು ಆಗಾಗ ಜನರ ಕಷ್ಟ ಸುಖಗಳನ್ನು ಕೇಳಲು ಅವರ ಗ್ರಾಮಗಳಿಗೆ ಭೇಟಿ ನೀಡುವುದು ರೂಢಿಯಲ್ಲಿದೆ. ಈ ಕಾರ್ಯಕ್ರಮದ ಅಂಗವಾಗಿ ಕಂದಾಯ ಸಚಿವ ಆರ್. ಅಶೋಕ್ ಹಾಗೂ ಶಾಸಕ ಎಂ.ಪಿ. ರೇಣುಕಾಚಾರ್ಯ ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ್ದಾರೆ. ಉಪಹಾರ ಸೇವನೆಯ ಬಳಿಕ ಎಂ.ಪಿ. ರೇಣುಕಾಚಾರ್ಯ ತಾವು ಸೇವಿಸಿದ ಆಹಾರದ ತಟ್ಟೆಯನ್ನು ತೊಳೆದಿಟ್ಟಿದ್ದು ಇದೀಗ ಎಲ್ಲೆಡೆ ಸುದ್ದಿಯಾಗಿದೆ.

ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಸಚಿವರು ಟ್ವೀಟ್ ಮಾಡಿದ್ದಾರೆ. ದಲಿತರ ಮನೆಯಲ್ಲಿ ಉಪಹಾರ ಸೇವಿಸಿ, ಊಟಕ್ಕೆ ಬುತ್ತಿಯನ್ನೂ ಕಟ್ಟಿಸಿಕೊಂಡಿದ್ದು ಗ್ರಾಮದ ಜನರಿಗೆ ತುಂಬಾನೇ ಖುಷಿ ಕೊಟ್ಟಿದೆ. ಈ ಸಂದರ್ಭದಲ್ಲಿ ಗ್ರಾಮಗಳ ಕೇರಿಗಳಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳ ಕುರಿತು ಮನವಿ ಸ್ವೀಕರಿಸಿದ್ದಾರೆ ಸಚಿವರು. ಈ ಬಾರಿ ಸಚಿವರ ಗ್ರಾಮ ವಾಸ್ತವ್ಯ ಇದ್ದಿದ್ದು ಸೊರಹೊನ್ನೆ ಗ್ರಾಮದಲ್ಲಿ. ಕಂದಾಯ ಸಚಿವ ಆರ್.ಅಶೋಕ್ ಹಾಗೂ ರೇಣುಕಾಚಾರ್ಯ ಅವರಿಗೆ ಪೂರ್ಣಕುಂಭ ಹಾಗೂ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ಗ್ರಾಮದವರು ಸ್ವಾಗತಿಸಿದ್ದಾರೆ. ಈ ಸಮಯದಲ್ಲಿ ಗ್ರಾಮಸ್ಥರೆಲ್ಲರೂ ಉಪಸ್ಥಿತರಿದ್ದು, ತಮ್ಮ ಬೇಡಿಕೆಗಳ ಮನವಿಪತ್ರವನ್ನು ಸಚಿವರಿಗೆ ಸಲ್ಲಿಸಿದ್ದಾರೆ.