ಕೊನೆಗೂ ವಿರಾಟ್ ನಂತರ ನಾಯಕನನ್ನು ಆಯ್ಕೆ ಮಾಡಿದ ಬಿಸಿಸಿಐ, ಹೊಸ ನಾಯಕ ಯಾರು ಗೊತ್ತೇ?? ನೆಟ್ಟಿಗರು ಫುಲ್ ಗರಂ. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ವಿರಾಟ್ ಕೊಹ್ಲಿ ಇನ್ಮುಂದೆ ಭಾರತ ತಂಡದ ಟಿ 20 ನಾಯಕನ ಜವಾಬ್ದಾರಿಯಿಂದ ಇಳಿಯುವುದಾಗಿ ಘೋಷಿಸಿದ ನಂತರ ಮುಂದಿನ ನಾಯಕ ಯಾರಾಗುತ್ತಾರೆ ಎಂಬ ಕುತೂಹಲವನ್ನ ಕೊನೆಗೂ ಬಿಸಿಸಿಐ ಮೂಲಗಳು ತಣಿಸಿವೆ. ವಿರಾಟ್ ರಾಜೀನಾಮೆ ನಂತರ , ನಾಯಕನ ಸ್ಥಾನಕ್ಕೆ ರಿಷಭ್ ಪಂತ್, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ರೋಹಿತ್ ಶರ್ಮಾ ಹೆಸರುಗಳು ಕೇಳಿ ಬಂದಿದ್ದವು. ವಯಸ್ಸಿನ ಕಾರಣದಿಂದ ರೋಹಿತ್ ಶರ್ಮಾ ಬದಲು ಯುವಕರಿಗೆ ಬಿಸಿಸಿಐ ಮಣೆ ಹಾಕಬಹುದು ಎಂದು ಹೇಳಲಾಗಿತ್ತು.

ವಿರಾಟ್ ಕೊಹ್ಲಿ ಭಾರತ ತಂಡದ ಯಶಸ್ವಿ ನಾಯಕನಾಗಿದ್ದರೂ, ಒಂದೇ ಒಂದು ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ ಎಂಬ ಕಳಂಕ ಅವರ ಮೇಲಿದೆ. 2017 ರಲ್ಲಿ ಧೋನಿ ನಂತರ ಟಿ 20 ತಂಡದ ನಾಯಕನಾದ ವಿರಾಟ್ 45 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿ 27 ಪಂದ್ಯಗಳಲ್ಲಿ ಗೆಲುವನ್ನು ದಾಖಲಿಸುವ ಮೂಲಕ ಉತ್ತಮ ನಾಯಕ ಎಂದು ಕರೆಸಿಕೊಂಡಿದ್ದರು. ಆದರೇ ಐಸಿಸಿ ಟೂರ್ನಿಯಲ್ಲಿ ಟ್ರೋಫಿ ಗೆಲ್ಲಲಾಗದಿರುವುದು ವಿರಾಟ್ ಗೆ ಹಿನ್ನಡೆಯಾಗಿತ್ತು. ಅದಲ್ಲದೇ ಐಪಿಎಲ್ ನಲ್ಲಿಯೂ ಸಹ ಆರ್ಸಿಬಿ ತಂಡದ ನಾಯಕನಾಗಿದ್ದರೂ, ಇಲ್ಲಿಯೂ ಸಹ ಕಪ್ ಗೆಲ್ಲಲು ಆಗಿರಲಿಲ್ಲ.

ಸದ್ಯ 34 ವರ್ಷದ ರೋಹಿತ್ ಶರ್ಮಾ ಸದ್ಯ ತಂಡದ ಉಪನಾಯಕರಾಗಿದ್ದಾರೆ. ವಿರಾಟ್ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡಿದ್ದ ರೋಹಿತ್ ಶರ್ಮಾ 19 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿ 14 ಪಂದ್ಯಗಳಲ್ಲಿ ಭಾರತವನ್ನು ಗೆಲ್ಲಿಸಿದ್ದರು. ಅದಲ್ಲದೇ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿರುವ ರೋಹಿತ್ ಶರ್ಮಾ ಐದು ಭಾರಿ ಮುಂಬೈ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದರು. ಹಾಗಾಗಿ ವಿರಾಟ್ ನಂತರ ರೋಹಿತ್ ಆ ಸ್ಥಾನಕ್ಕೆ ಸೂಕ್ತ ಎಂಬ ಅಭಿಪ್ರಾಯಗಳು ಕೇಳಿ ಬಂದಿದ್ದವು. ಕೊನೆಗೂ ಅನುಭವಕ್ಕೆ ಮಣೆ ಹಾಕುವ ನಿರ್ಧಾರ ಮಾಡಿರುವ ಬಿಸಿಸಿಐ ರೋಹಿತ್ ಶರ್ಮಾರವರಿಗೆ ನಾಯಕನ ಪಟ್ಟ ಕಟ್ಟುವುದು ಬಹುತೇಖ ಖಚಿತ ಎಂದು ಹೇಳಲಾಗಿದೆ.

ಮುಂದಿನ ವರ್ಷ ಮತ್ತೊಂದು ಟಿ 20 ವಿಶ್ವಕಪ್ ನಡೆಯಲಿದೆ. ಹಾಗೂ 2023 ರಲ್ಲಿ ಏಕದಿನ ವಿಶ್ವಕಪ್ ಸಹ ನಡೆಯಲಿದೆ. ಹೀಗಾಗಿ ವಿರಾಟ್ ಮೇಲಿನ ಒತ್ತಡ ಕಡಿಮೆ ಮಾಡಿ ಎರಡು ವಿಶ್ವ ಚಾಂಪಿಯನ್ ಶಿಪ್ ಮೇಲೆ ಕಣ್ಣಿಟ್ಟಿರುವ ಬಿಸಿಸಿಐ ರೋಹಿತ್ ಶರ್ಮಾರನ್ನ ಪಟ್ಟಕ್ಕೆ ಅಂತಿಮಗೊಳಿಸಿದೆ, ಆದರೆ ಇದೇ ಸಮಯದಲ್ಲಿ ಮುಂದಿನ ವಿಶ್ವಕಪ್ ಗಮನದಲ್ಲಿ ಇಟ್ಟುಕೊಂಡು ಯುವ ಆಟಗಾರನನ್ನು ಆಯ್ಕೆ ಮಾಡಬೇಕಾಗಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. 2014 ರಲ್ಲಿ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೇಟ್ ಗೆ ವಿದಾಯ ಹೇಳಿದ ನಂತರ ಭಾರತೀಯ ಕ್ರಿಕೇಟ್ ನಲ್ಲಿ ದ್ವಿನಾಯಕತ್ವ ಜಾರಿಯಲ್ಲಿತ್ತು. ನಂತರ 2017 ರಲ್ಲಿ ಟೆಸ್ಟ್, ಏಕದಿನ, ಟಿ 20 ಈ ಮೂರು ಮಾದರಿಗೆ ವಿರಾಟ್ ಕೊಹ್ಲಿ ನಾಯಕರಾಗಿದ್ದರು. ಈಗ ನಾಲ್ಕು ವರ್ಷಗಳ ನಂತರ ಮತ್ತೆ ಭಾರತ ತಂಡದಲ್ಲಿ ದ್ವಿನಾಯಕತ್ವವನ್ನು ನಾವು ಕಾಣಬಹುದಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav