ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಈತ ವಿಶ್ವಕಪ್ ನಲ್ಲಿ ಭಾರತ ತಂಡಕ್ಕೆ ಬಹುದೊಡ್ಡ ಆಸ್ತಿಯಾಗಬಲ್ಲ ಎಂದು ಭವಿಷ್ಯ ನುಡಿದ ಕಪಿಲ್ ದೇವ್. ಯಾರು ಆ ಆಟಗಾರ ಗೊತ್ತೇ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಟಿ 20 ವಿಶ್ವಕಪ್ ನಲ್ಲಿ ಅರ್ಹತಾ ಸುತ್ತು ಹಾಗೂ ಅಭ್ಯಾಸ ಪಂದ್ಯಗಳು ಜೋರಾಗಿ ನಡೆಯುತ್ತಿವೆ. ಸ್ಕಾಟ್ ಲ್ಯಾಂಡ್ ತಂಡ ಬಾಂಗ್ಲಾದೇಶವನ್ನು ಮಣಿಸಿ ಮೊದಲ ಅಚ್ಚರಿ ಫಲಿತಾಂಶವನ್ನು ನೀಡಿತ್ತು. ಇದೇ ರೀತಿಯ ಹಲವಾರು ಅಚ್ಚರಿ ಫಲಿತಾಂಶಗಳು ಟೂರ್ನಿಯುದ್ದಕ್ಕೂ ಹೊರಹೊಮ್ಮಿದರೂ ಆಶ್ಚರ್ಯವಿಲ್ಲ. ಏಕೆಂದರೇ ಟಿ 20 ಕ್ರಿಕೇಟ್ ನ ಸ್ವಾರಸ್ಯವೇ ಅಂತಹದ್ದು. ಇನ್ನು ಭಾರತ ಅಕ್ಟೋಬರ್ 24 ರಂದು ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಮಹತ್ವದ ಟೂರ್ನಿಗಳ ಲೀಗ್ ಪಂದ್ಯಗಳಲ್ಲಿ ಪಾಕಿಸ್ತಾನ ಇದುವರೆಗೂ ಭಾರತವನ್ನ ಒಮ್ಮೆಯೂ ಸೋಲಿಸಿಲ್ಲ.

ಹಾಗಾಗಿ ಭಾನುವಾರ ನಡೆಯಲಿರುವ ಪಂದ್ಯ ಅತ್ಯಂತ ಮಹತ್ವದ್ದು ಎನಿಸಿದೆ. ಈ ನಡುವೆ ಭಾನುವಾರದ ಪಂದ್ಯಕ್ಕೆ ಉತ್ತಮ ತಯಾರಿ ನಡೆಸಿರುವ ಭಾರತ ಆಡಿರುವ ಎರಡು ಅಭ್ಯಾಸ ಪಂದ್ಯಗಳಲ್ಲಿ ಜಯಿಸಿದೆ. ಇನ್ನು ಈ ಬಗ್ಗೆ ಮಾತನಾಡಿರುವ 1983 ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕರಾಗಿದ್ದ ಕಪಿಲ್ ದೇವ್, ಈತ ಭಾರತ ತಂಡದ ಆಸ್ತಿ ಎಂದು ಹೊಗಳಿದ್ದಾರೆ. ಅಷ್ಟಕ್ಕೂ ಕಪಿಲ್ ಹೊಗಳಿದ ಆ ಆಟಗಾರ ಯಾರು ಎಂಬುದನ್ನ ತಿಳಿಯೋಣ ಬನ್ನಿ.

ಕಪಿಲ್ ದೇವ್ ಭಾರತ ತಂಡದ ಆಸ್ತಿ ಎಂದು ಹೊಗಳಿದ್ದು ಬೇರಾರನ್ನೂ ಅಲ್ಲ, ಕನ್ನಡಿಗ ಕೆ.ಎಲ್.ರಾಹುಲ್ ರನ್ನ. ಇತ್ತಿಚೆಗೆ ಮುಗಿದ ಐಪಿಎಲ್ ಟೂರ್ನಿಯಲ್ಲಿ ರಾಹುಲ್ ಕೇವಲ 13 ಪಂದ್ಯಗಳಲ್ಲಿ 626 ರನ್ ಗಳಿಸಿದ್ದರು. ಕೇವಲ ಐದು ರನ್ ಗಳಿಂದ ಆರೇಂಜ್ ಕ್ಯಾಪ್ ನಿಂದ ವಂಚಿತರಾದರು. ಒಂದು ವೇಳೆ ರಾಹುಲ್ ಫೈನಲ್ ವರೆಗೆ ಎಲ್ಲಾ ಪಂದ್ಯಗಳನ್ನು ಆಡಿದ್ದರೇ ಟೂರ್ನಿಯಲ್ಲಿ 800 ಕ್ಕೂ ಹೆಚ್ಚು ರನ್ ಗಳಿಸುತ್ತಿದ್ದರು ಎಂದು ಹೇಳಿದರು. ಇನ್ನು ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಲಿರುವ ರಾಹುಲ್ ತಮ್ಮ ಜವಾಬ್ದಾರಿ ಅರಿತು ಬ್ಯಾಟ್ ಬೀಸಿದರೇ, ಖಂಡಿತ ಭಾರತ ವಿಶ್ವಕಪ್ ಎತ್ತಿಹಿಡಿಯಲಿದೆ ಎಂದು ಹೇಳಿದರು.

ಇದರ ಜೊತೆ ರಾಹುಲ್ ಈಗ ಅತ್ಯುತ್ತಮ ಶಾಟ್ ಮೇಕಿಂಗ್ ಮಾಡುತ್ತಿದ್ದಾರೆ. ಎಲ್ಲಾ ಬಾಲ್ ಗಳನ್ನು ಮಿಡಲ್ ಬ್ಯಾಟ್ ನಿಂದ ಎದುರಿಸುತ್ತಿದ್ದಾರೆ. ಒಂದು ಭಾರಿಯೂ ಅವರು ಕೆಟ್ಟ ಶಾಟ್ ನಿಂದ ಔಟ್ ಆಗಿಲ್ಲ. ರಾಹುಲ್ ಗೆ ಈಗ ಅವರ ಅನುಭವ ಅತ್ಯುತ್ತಮ ಸಾಥ್ ನೀಡಿದೆ. ನಾನು ಅವರ ಆಟವನ್ನು ಎಂಜಾಯ್ ಮಾಡುತ್ತೇನೆ. ಅವರ ಆಟವನ್ನು ನೋಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು. ಅವರು ಭಾರತ ತಂಡಕ್ಕೆ ಈ ವಿಶ್ವಕಪ್ ನಲ್ಲಿ ಬಹುದೊಡ್ಡ ಆಸ್ತಿಯಾಗಿದ್ದು, ಅವರು ಈ ಟೂರ್ನಿಯಲ್ಲಿ ಯಶಸ್ವಿಯಾದರೇ, ಖಂಡಿತ ಭಾರತ ವಿಶ್ವಕಪ್ ಎತ್ತಿ ಹಿಡಿಯಲಿದೆ ಎಂದು ಅಭಿಪ್ರಾಯಪಟ್ಟರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.