ಪ್ರಶಾಂತ್ ನೀಲ್ ಚಿತ್ರದಲ್ಲಿ ನಟಿಸೋಕೆ ಹಿಂದೇಟು ಹಾಕುತ್ತಿದ್ದಾರೆ ತೆಲುಗು ಸ್ಟಾರ್ ನಟರು ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ನಮ್ಮ ಕನ್ನಡ ಚಿತ್ರರಂಗ ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಸದ್ದು ಮಾಡುತ್ತಿರುವುದು ಕೆಜಿಎಫ್ ಸರಣಿ ಚಿತ್ರಗಳ ಕಾರಣದಿಂದಾಗಿ. ಇನ್ನು ಕೆಜಿಎಫ್ ಚಿತ್ರವನ್ನು ಹುಟ್ಟುಹಾಕಿರುವುದು ನಮ್ಮ ಕನ್ನಡದ ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ನಿರ್ದೇಶಕನಾಗಿ ತಮ್ಮ ಪ್ರತಿಭೆಯನ್ನು ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ ಉ’ಗ್ರಂ ಚಿತ್ರದಲ್ಲಿ ತೋರಿಸಿರುವ ಪ್ರಶಾಂತ್ ನೀಲ್ ರವರು ಕನ್ನಡ ಚಿತ್ರರಂಗದಲ್ಲಿ ದೊಡ್ಡದೊಡ್ಡ ಚಿತ್ರಗಳನ್ನು ನಿರ್ದೇಶನ ಮಾಡಬಲ್ಲೆ ಎಂಬುದಾಗಿ ಅಂದೇ ಸಾಬೀತುಪಡಿಸಿದ್ದರು.

ಇನ್ನು ಇದರ ಮೊದಲ ಪ್ರಯತ್ನವಾಗಿ ರಾಕಿಂಗ್ ಸ್ಟಾರ್ ಯಶ್ ನಟನೆಯಲ್ಲಿ ಹಾಗೂ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಕೆಜಿಎಫ್ ಚಿತ್ರದ ಯಶಸ್ಸು ನಿಮ್ಮ ಕಣ್ಣಮುಂದಿದೆ. ಇನ್ನು ಇದಾದನಂತರ ಪ್ರಶಾಂತ್ ನೀಲ್ ರವರ ಜನಪ್ರಿಯತೆ ಹಾಗೂ ಬೇಡಿಕೆ ಹೆಚ್ಚಿದ್ದು ತೆಲುಗು ಚಿತ್ರರಂಗದಲ್ಲಿ. ಈಗಾಗಲೇ ಪ್ರಭಾಸ್ ರವರೊಂದಿಗೆ ಸಲಾರ್ ಚಿತ್ರವನ್ನು ಮಾಡುತ್ತಿರುವ ಪ್ರಶಾಂತ್ ನೀಲ್ ರವರು ಮಹೇಶ್ ಬಾಬು ಜೂನಿಯರ್ ಎನ್ಟಿಆರ್ ಅಲ್ಲು ಅರ್ಜುನ್ ಹಾಗೂ ರಾಮಚರಣ್ ಅವರಿಗೂ ಕೂಡ ಕಥೆಯನ್ನು ಹೇಳಿದ್ದಾರಂತೆ.

ಆದರೆ ಸದ್ಯಕ್ಕೆ ಪ್ರಶಾಂತ್ ನೀಲ್ ಅವರೊಂದಿಗೆ ಚಿತ್ರವನ್ನು ಮಾಡುವುದು ಬೇಡ ಎಂಬುದಾಗಿ ಎಲ್ಲ ನಟರು ನಿರ್ಧರಿಸಿದ್ದಾರಂತೆ. ಅದಕ್ಕೆ ಮುಖ್ಯ ಕಾರಣ ಖಂಡಿತ ಚಿತ್ರಗಳು ದೊಡ್ಡ ಬಜೆಟ್ನಲ್ಲಿ ಮೂಡಿಬರುತ್ತವೆ. ಆದರೆ ಈಗಿರುವ ಪರಿಸ್ಥಿತಿ ಪ್ರಕಾರ ಈ ಚಿತ್ರಗಳು ಜನರಿಗೆ ಹೇಗೆ ಇಷ್ಟವಾಗುತ್ತವೆ ಜನರು ಬಂದು ನೋಡುತ್ತಾರೆ ಎಂಬ ಅನುಮಾನಗಳು ಕೂಡ ಇವೆ. ಎಲ್ಲಕ್ಕಿಂತ ಹೆಚ್ಚಾಗಿ ಕೆಜಿಎಫ್ ಚಾಪ್ಟರ್ 2 ಹಾಗೂ ಸಲಾರ್ ಚಿತ್ರದ ಯಶಸ್ಸನ್ನು ನೋಡಿಕೊಂಡು ಚಿತ್ರವನ್ನು ಮಾಡುವುದು ಅಥವಾ ಬೇಡವೋ ಎಂಬುದರ ಕುರಿತಂತೆ ನಿರ್ಧಾರ ತೆಗೆದುಕೊಳ್ಳುವ ಹಂತಕ್ಕೆ ಬಂದಿದ್ದಾರೆ. ಇದು ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

Post Author: Ravi Yadav