ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಪಾಕ್ ವಿರುದ್ದದ ಪದ್ಯಕ್ಕೆ ತಂಡ ಘೋಷಣೆ ಮಾಡಿದಲಕ್ಷ್ಮಣ್, ಇವರು ಆಡಿದರೇ ಗೆಲುವು ಪಕ್ಕ ಎಂದು ಆಯ್ಕೆ ಮಾಡಿ 11 ಆಟಗಾರರು ಯಾರು ಗೊತ್ತೇ??

11

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಟಿ 20 ವಿಶ್ವಕಪ್ ನ ಅರ್ಹತಾ ಸುತ್ತುಗಳು ಮುಗಿದು ಸೂಪರ್ 12 ಸುತ್ತುಗಳು ನಾಳೆಯಿಂದ ಆರಂಭವಾಗಲಿವೆ. ಇನ್ನೇನು ಪ್ರತಿ ದಿನವೂ ಹೈವೋಲ್ಟೇಜ್ ಪಂದ್ಯಗಳು ಶುರುವಾಗಲಿವೆ. ಅದರಲ್ಲೂ ಭಾನುವಾರದ ಸಂಜೆಯ ಪಂದ್ಯ ಬದ್ದ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಲಿದೆ. ಹಲವು ವರ್ಷಗಳ ನಂತರ ಅಂತರಾಷ್ಟ್ರೀಯ ಕ್ರಿಕೇಟ್ ನಲ್ಲಿ ಈ ದೇಶಗಳು ಎದುರುಬದುರಾಗಲಿದ್ದು ಅಸಂಖ್ಯಾತ ಅಭಿಮಾನಿಗಳು ಈ ಪಂದ್ಯವನ್ನ ಎದುರು ನೋಡುತ್ತಿದ್ದಾರೆ.

ಮೊದಲ ಪಂದ್ಯವನ್ನ ಗೆದ್ದು ಶುಭಾರಂಭ ಮಾಡುವ ನೀರಿಕ್ಷೆಯಲ್ಲಿ ಭಾರತ ತಂಡವಿದೆ. ಇನ್ನು ಈ ಬಗ್ಗೆ ಭಾರತೀಯ ಕ್ರಿಕೇಟ್ ತಂಡದ ಮಾಜಿ ಆಟಗಾರ ಹೈದರಾಬಾದ್ ನ ಕಲಾತ್ಮಕ ಬ್ಯಾಟ್ಸಮನ್ ವಿ.ವಿ.ಎಸ್.ಲಕ್ಷ್ಮಣ್ , ಪಾಕಿಸ್ತಾನದ ವಿರುದ್ದ ಆಡಲಿರುವ ಭಾರತ ತಂಡ ಈ ಹನ್ನೊಂದು ಜನರನ್ನ ಆಡಿಸಬೇಕು ಎಂದು ಇತ್ತಿಚೆಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಲಕ್ಷ್ಮಣ್ ಪ್ರಕಟಿಸಿರುವ ಭಾರತ ತಂಡದಲ್ಲಿ ಐವರು ಬ್ಯಾಟ್ಸಮನ್ ಗಳು, ಇಬ್ಬರೂ ಆಲ್ ರೌಂಡರ್ ಗಳು, ಇಬ್ಬರೂ ವೇಗದ ಬೌಲರ್ ಗಳು ಹಾಗೂ ಇಬ್ಬರೂ ಸ್ಪಿನ್ ಬೌಲರ್ ಗಳು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೇ ಲಕ್ಷ್ಮಣ್ ಪ್ರಕಟಿಸಿದ ತಂಡದಲ್ಲಿ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಹಾಗೂ ವೇಗಿ ಮಹಮದ್ ಶಮಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಆರಂಭಿಕರಾಗಿ ರೋಹಿತ್ ಮತ್ತು ರಾಹುಲ್ ಕಣಕ್ಕಿಳಿಯಲಿದ್ದು, ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯ ಕುಮಾರ್ ಯಾದವ್ ಸ್ಥಾನ ಪಡೆದಿದ್ದಾರೆ. ಇನ್ನು ಐದನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಆಡಿದರೇ, ಆರು ಹಾಗೂ ಏಳನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಆಡಲಿದ್ದಾರೆ. ಎಂಟನೇ ಕ್ರಮಾಂಕದಲ್ಲಿ ಭುವನೇಶ್ವರ್ ಕುಮಾರ್, ಒಂಬತ್ತನೇ ಕ್ರಮಾಂಕದಲ್ಲಿ ಜಸಪ್ರಿತ್ ಬುಮ್ರಾ, ಹತ್ತನೇ ಕ್ರಮಾಂಕದಲ್ಲಿ ವರುಣ್ ಚಕ್ರವರ್ತಿ ಹಾಗೂ ಹನ್ನೊಂದನೇ ಕ್ರಮಾಂಕದಲ್ಲಿ ರಾಹುಲ್ ಚಾಹರ್ ಸ್ಥಾನ ಪಡೆದಿದ್ದಾರೆ.

ಆದರೇ ಫಾರ್ಮ್ ನಲ್ಲಿ ಇಲ್ಲದ ರಾಹುಲ್ ಚಾಹರ್ ಹಾಗೂ ಭುವನೇಶ್ವರ್ ಕುಮಾರ್ , ಅಶ್ವಿನ್ ಹಾಗೂ ಮಹಮದ್ ಶಮಿ ಜಾಗದಲ್ಲಿ ಸ್ಥಾನ ಪಡೆದಿರುವುದು ಆಶ್ಚರ್ಯವಾಗಿದೆ. ಆದರೇ ಇದು ಅಂತಿಮವಲ್ಲ, ಭಾರತದ ಪ್ಲೇಯಿಂಗ್ ಇಲೆವೆನ್ ತಿಳಿಯಲು ಭಾನುವಾರದ ಸಂಜೆಯ ತನಕ ಕಾಯಬೇಕಾಗುತ್ತದೆ.

ವಿ.ವಿ.ಎಸ್ ಲಕ್ಷ್ಮಣ್ ಪ್ರಕಟಿಸಿರುವ ಭಾರತ ತಂಡ ಇಂತಿದೆ – ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಜಸಪ್ರಿತ್ ಬುಮ್ರಾ, ವರುಣ್ ಚಕ್ರವರ್ತಿ, ಯುಜವೇಂದ್ರ ಚಾಹಲ್‌. ನಿಮ್ಮ ಪ್ರಕಾರ ಯಾವ ಪ್ಲೇಯಿಂಗ್ ಇಲೆವೆನ್ ಆಡಿಸಬೇಕು ಎಂಬ ಅಭಿಪ್ರಾಯವನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.