ಕೊಹ್ಲಿ, ರೋಹಿತ್ ಅಲ್ಲ, ಈತ ಈ ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸುತ್ತಾನೆ ಎಂದು ಭವಿಷ್ಯ ನುಡಿದ ಬ್ರೇಟ್ ಲೀ – ಆತ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಟಿ 20 ವಿಶ್ವಕಪ್ ಗೆ ಕ್ಷಣಗಣನೆ ಆರಂಭವಾಗಿದೆ. ಅರ್ಹತಾ ಸುತ್ತು ಮುಗಿದಿದ್ದು, ಸೂಪರ್ 12 ಪಂದ್ಯಗಳು ನಾಳೆಯಿಂದ ಆರಂಭವಾಗಲಿವೆ. ಬಹುತೇಖ ಆಟಗಾರರು ಇತ್ತಿಚೇಗೆ ಮುಗಿದ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನದ ಜೊತೆ ಯು.ಎ.ಇ ಯಲ್ಲಿನ ಪಿಚ್ ಗಳಲ್ಲಿ ಆಡಿದ ಅನುಭವವನ್ನ ಹೊಂದಿದ್ದಾರೆ.ಇದು ಸಹಜವಾಗಿ ಎಲ್ಲಾ ದೇಶದ ಆಟಗಾರರಿಗೂ ಆತ್ಮವಿಶ್ವಾಸವನ್ನ ವೃದ್ಧಿಸಿದೆ.

ಇನ್ನು ಈ ಮಹತ್ವದ ಟೂರ್ನಿಯ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೇಟ್ ಲೀ , ಭಾರತ ತಂಡ ಈ ಭಾರಿ ಟಿ 20 ವಿಶ್ವಕಪ್ ಎತ್ತಿ ಹಿಡಿಯುವ ನೆಚ್ಚಿನ ತಂಡವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಐದಾರು ಆಟಗಾರರು ಇತ್ತಿಚೆಗಷ್ಟೇ ಮುಗಿದ ಐಪಿಎಲೊ ನಲ್ಲಿ ಉತ್ತಮ ಫಾರ್ಮ್ ನಲ್ಲಿದ್ದರು. ಅವರುಗಳು ಅದನ್ನ ಮುಂದುವರಿಸಿದರೇ ಸಾಕು, ಭಾರತಕ್ಕೆ ಪ್ರಶಸ್ತಿ ಗ್ಯಾರೆಂಟಿ ಎಂದು ಹೇಳಿದರು. ಅದರಲ್ಲೂ ಈ ಟೂರ್ನಿಯಲ್ಲಿ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬದಲು , ಕೆ.ಎಲ್ ರಾಹುಲ್ ರವರೇ ಹೆಚ್ಚು ರನ್ ಗಳಿಸುತ್ತಾರೆ ಎಂದು ಭವಿಷ್ಯ ನುಡಿದರು. ಇತ್ತಿಚೆಗೆ ಮುಗಿದ ಐಪಿಎಲ್ ನಲ್ಲಿಯೂ ಸಹ ರಾಹುಲ್ ಹೆಚ್ಚು ರನ್ ಭಾರಿಸಿದ್ದರು.

ಇನ್ನು ಭಾರತದ ಬೌಲಿಂಗ್ ಬಗ್ಗೆ ಮಾತನಾಡಿರುವ ಬ್ರೇಟ್ ಲೀ, ಮಹಮದ್ ಶಮಿಯವರನ್ನ ಹೊಗಳಿದ್ದಾರೆ. ಅವರು ಈ ಭಾರಿ ಭಾರತದ ಪರ ಹೆಚ್ಚು ವಿಕೇಟ್ ಪಡೆಯುವ ಸಾಧ್ಯತೆ ಅಧಿಕವಾಗಿದೆ ಎಂದು ಹೇಳಿದರು. ಶಮಿ ಈ ಐಪಿಎಲ್ ನಲ್ಲಿ 19 ವಿಕೇಟ್ ಪಡೆದು ಮಿಂಚಿದ್ದರು. ಇದೇ ವೇಳೆ ಆಸ್ಟ್ರೇಲಿಯಾ ತಂಡದ ಬಗ್ಗೆಯೂ ಮಾತನಾಡಿರುವ ಲೀ, ಆಸ್ಟ್ರೇಲಿಯಾ ತಂಡ ಸೆಮಿಫೈನಲ್ ಗೆ ಹೋಗುವ ಎಲ್ಲಾ ಅರ್ಹತೆ ಹೊಂದಿದೆ. ಆದರೇ ತಂಡದ ಪ್ರಮುಖ ಬ್ಯಾಟ್ಸಮನ್ ಡೇವಿಡ್ ವಾರ್ನರ್ ಲಯದಲ್ಲಿ ಇಲ್ಲದೆ ಇರುವುದೇ ದೊಡ್ಡ ಸಮಸ್ಯೆಯಾಗಿದೆ. ಅವರಲ್ಲದೇ ಉಳಿದ ಆಟಗಾರರು ಉತ್ತಮ ಫಾರ್ಮ್ ನಲ್ಲಿದ್ದು, ಆಸ್ಟ್ರೇಲಿಯಾ ಸಹ ಉತ್ತಮ ಆಟವಾಡಿ, ಪ್ರಶಸ್ತಿ ಗೆಲ್ಲುವ ತಂಡವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆಸ್ಟ್ರೇಲಿಯಾ ತಂಡದ ಪರ ಗ್ಲೆನ್ ಮ್ಯಾಕ್ಸವೆಲ್ ಹಾಗೂ ಜೋಶ್ ಹೇಜಲ್ ವುಡ್ ಪ್ರಮುಖ ಟ್ರಂಪ್ ಕಾರ್ಡ್ ಆಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬ್ರೆಟ್ ಲೀ ಅವರ ಈ ಅಭಿಪ್ರಾಯದ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav