ಪ್ರಭಾಸ್, ಯಶ್, ವಿಜಯ್ ದೇವರಕೊಂಡ ರವರನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನ ಪಡೆದ ಕರುನಾಡಿನ ನಟಿ, ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರತ ದೇಶದ ಅಧ್ಯಂತ ನಟಿ ರಶ್ಮಿಕಾ ಮಂದಣ್ಣ ನವರ ಜನಪ್ರಿಯತೆ ಸಾಕಷ್ಟು ಗಮನೀಯವಾಗಿ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಎಲ್ಲಾ ಕಡೆಯೂ ಕೂಡ ನ್ಯಾಷನಲ್ ಕ್ರಷ್ ಎಂದೇ ಖ್ಯಾತರಾಗಿರುವ ರಶ್ಮಿಕ ಮಂದಣ್ಣ ಅವರ ಅಭಿಮಾನಿಗಳ ಸಂಖ್ಯೆ ಕೂಡ ದಿನೇ ದಿನೇ ಜಾಸ್ತಿಯಾಗುತ್ತಿದೆ.

ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದ ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಚಿತ್ರದ ಮೂಲಕ ನಟನೆಗೆ ಕಾಲಿಟ್ಟ ಅಂತಹ ರಶ್ಮಿಕ ಮಂದಣ್ಣ ನಂತರ ತೆಲುಗು ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ನಿಜವಾದ ಜನಪ್ರಿಯತೆ ಗಳಿಸಿಕೊಳ್ಳುತ್ತಾರೆ. ಇದಾದನಂತರ ರಶ್ಮಿಕ ಮಂದಣ್ಣ ಕನ್ನಡ ಚಿತ್ರರಂಗದಲ್ಲಿ ನಟಿಸುವುದನ್ನು ಕಡಿಮೆ ಮಾಡಿದರೂ ಕೂಡ ಅವರ ಜನಪ್ರಿಯತೆ ಮಾತ್ರ ಕಡಿಮೆಯಾಗಲಿಲ್ಲ. ಈಗಾಗಲೇ ಕನ್ನಡ ತಮಿಳು ತೆಲುಗು ಮಾತ್ರವಲ್ಲದೆ ಹಿಂದಿ ಚಿತ್ರರಂಗದಲ್ಲಿ ಕೂಡ ಸಾಕಷ್ಟು ದೊಡ್ಡ ಚಿತ್ರಗಳಲ್ಲಿ ನಟಿಸುವ ಆಫರ್ ಗಳನ್ನು ಪಡೆದುಕೊಂಡು ಭಾರತ ದೇಶದ ಟಾಪ್ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಇತ್ತೀಚೆಗಷ್ಟೆ ಬಂದ ಸುದ್ದಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ನವರು ಯಶ್ ಪ್ರಭಾಸ್ ಹಾಗೂ ವಿಜಯ್ ದೇವರಕೊಂಡ ರವರನ್ನು ಕೂಡ ಹಿಂದಿಕ್ಕಿ ಮುಂದೆ ಸಾಗಿ ನಂಬರ್ ವನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೌದು ಫೋರ್ಬ್ಸ್ ಬಿಡುಗಡೆ ಮಾಡಿರುವ ಆ ಸೋಶಿಯಲ್ ಮೀಡಿಯಾದಲ್ಲಿ ಪ್ರಭಾವಿಯಾಗಿರುವ ದಕ್ಷಿಣ ಭಾರತದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ರಶ್ಮಿಕ ಮಂದಣ್ಣ ರವರು ನಂಬರ್ ಒನ್ ಸ್ಥಾನವನ್ನು ಪಡೆದಿದ್ದಾರೆ. ಇನ್ನು ಅವರ ಕೆಳಗಡೆ ವಿಜಯ್ ದೇವರಕೊಂಡ ಪ್ರಭಾಸ್ ಯಶ್ ಹೀಗೆ ಇನ್ನಿತರರು ಕಾಣಿಸಿಕೊಳ್ಳುತ್ತಾರೆ. ಒಟ್ಟಾರೆಯಾಗಿ ಹೇಳಬೇಕಾದರೆ ಇತ್ತೀಚಿನ ದಿನಗಳಲ್ಲಿ ರಶ್ಮಿಕ ಮಂದಣ್ಣ ನವರು ಎಲ್ಲರಿಗಿಂತ ಹೆಚ್ಚಾಗಿ ಭಾರತ ದೇಶದಾದ್ಯಂತ ಪ್ರೇಕ್ಷಕರ ಮನವನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

Post Author: Ravi Yadav