ಫುಲ್ ಫಾರ್ಮ್ ಕಳೆದುಕೊಂಡಿರುವ ಹಾರ್ದಿಕ್ ಪಾಂಡ್ಯ ರವರ ಸ್ಥಾನ ತುಂಬುವವ ಯಾರಂತೆ ಗೊತ್ತೇ?? ಸೀಕ್ರೆಟ್ ಆಗಿ ಬಲೆ ಬೀಸಿರುವ ಬಿಸಿಸಿಐ.

ಫುಲ್ ಫಾರ್ಮ್ ಕಳೆದುಕೊಂಡಿರುವ ಹಾರ್ದಿಕ್ ಪಾಂಡ್ಯ ರವರ ಸ್ಥಾನ ತುಂಬುವವ ಯಾರಂತೆ ಗೊತ್ತೇ?? ಸೀಕ್ರೆಟ್ ಆಗಿ ಬಲೆ ಬೀಸಿರುವ ಬಿಸಿಸಿಐ.

ನಮಸ್ಕಾರ ಸ್ನೇಹಿತರೇ ಈಗಾಗಲೇ ಐಪಿಎಲ್ ಮುಗಿದು ಕ್ರಿಕೆಟ್ ಪ್ರೇಮಿಗಳು t20 ವರ್ಲ್ಡ್ ಕಪ್ ನನ್ನ ತಮ್ಮ ಗಮನವನ್ನು ಹರಿಸಿದ್ದಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಭಾರತೀಯ ಕ್ರಿಕೆಟ್ ಪ್ರೇಮಿಗಳು ಇದೇ ಅಕ್ಟೋಬರ್ 24 ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಮ್ಯಾಚನ್ನು ನೋಡಲು ಕಾತರರಾಗಿ ಕಾಯುತ್ತಿದ್ದಾರೆ. ಇನ್ನು ಭಾರತೀಯ ಕ್ರಿಕೆಟ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ರವರು ಆಲ್-ರೌಂಡರ್ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು ಆದರೆ ಈಗ ಅವರು ಇಂಜುರಿ ಸಮಸ್ಯೆಯಿಂದಾಗಿ ಬಳಲುತ್ತಿದ್ದಾರೆ.

ಹೀಗಾಗಿ ಅವರು ಈ ಬಾರಿಯ ಪ್ಲೇಯಿಂಗ್ 11ರಲ್ಲಿ ಜಾಗವನ್ನು ಪಡೆಯುತ್ತಾರೋ ಇಲ್ಲವೋ ಎಂಬುದು ಅನುಮಾನವಾಗಿದೆ. ಹೀಗಾಗಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ರವರ ಜಾಗಕ್ಕೆ ಸಮರ್ಥವಾದ ಕ್ರಿಕೆಟಿಗ ಯಾರು ಆಗುತ್ತಾರೆ ಎಂಬ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಹಾರ್ದಿಕ್ ಪಾಂಡ್ಯ ಮಧ್ಯಮ ಕ್ರಮಾಂಕದ ಭಾರತೀಯ ಕ್ರಿಕೆಟ್ ತಂಡದ ಬ್ಯಾಟಿಂಗ್ ಅನ್ನು ಸಮರ್ಥವಾಗಿ ಜವಾಬ್ದಾರಿಯಿಂದ ನಡೆಸುತ್ತಿದ್ದರು. ಇಷ್ಟು ಮಾತ್ರವಲ್ಲದೆ ಅವರ ಬೌಲಿಂಗ್ ಕೂಡ ತಂಡವನ್ನು ಸಂಕಷ್ಟದ ಸಮಯದಲ್ಲಿ ಕಾಪಾಡುತ್ತಿತ್ತು. ಇನ್ನು ಈಗ ಇವರ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಅಂತಹ ಯುವ ಆಟಗಾರನೊಬ್ಬನ ಹೆಸರು ಕೇಳಿ ಬರುತ್ತಿದೆ.

ಹೌದು ಸ್ನೇಹಿತರೆ ಅವರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಭರವಸೆಯ ಆಟಗಾರ ವೆಂಕಟೇಶ್ ಅಯ್ಯರ್. ಒಂದು ಲೆಕ್ಕದಲ್ಲಿ ಹೇಳುವುದಾದರೆ ವೆಂಕಟೇಶ್ ಅಯ್ಯರ್ ರವರ ಪರ್ಫಾರ್ಮೆನ್ಸ್ ನಿಂದಾಗಿ ಕೊಲ್ಕತ್ತಾ ತಂಡ ಫೈನಲ್ ವರೆಗೂ ಬಂದಿತ್ತು ಎಂದು ಹೇಳಬಹುದಾಗಿದೆ. ಇನ್ನು ಈ ಬಾರಿಯ ಐಪಿಎಲ್ ನಲ್ಲಿ ಹತ್ತು ಪಂದ್ಯಗಳಿಂದ 370 ರನ್ನುಗಳನ್ನು ಬಾರಿಸಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ ರವರಂತೆ ಮಧ್ಯಮ ವೇಗದ ಬೌಲಿಂಗ್ ನಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಒಂದು ವೇಳೆ ಹಾರ್ದಿಕ್ ಪಾಂಡ್ಯ ರವರು ಅಲಭ್ಯವಾದರೆ ಭಾರತೀಯ ಕ್ರಿಕೆಟ್ ತಂಡಕ್ಕೆ ವಿಶ್ವಕಪ್ನಲ್ಲಿ ವೆಂಕಟೇಶ್ ಅಯ್ಯರ್ ಒಂದೊಳ್ಳೆ ಆಯ್ಕೆ ಎಂದು ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.