ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮಿಲಿಟರಿಗೆ ಹೊರಡಲು ಸಜ್ಜಾದರು ಕರುನಾಡ ಚಕ್ರವರ್ತಿ ಶಿವಣ್ಣ, ಅಭಿಮಾನಿಗಳು ಫುಲ್ ಫಿದಾ. ವಿಷಯ ಏನು ಗೊತ್ತೇ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಎವರ್ಗ್ರೀನ್ ಸ್ಟಾರ್ ಎಂದಾಗ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಎಂದು. ಈಗಾಗಲೇ ಮೂರು ಜನರೇಷನ್ ನಿಂದಲೂ ಕೂಡ ಶಿವಣ್ಣನವರು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಮಿಂಚುತ್ತಿದ್ದಾರೆ. ಇನ್ನು ಶಿವಣ್ಣ ಈಗಾಗಲೇ 125 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದ ಮೇರು ನಟರ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ.

ಕನ್ನಡ ಚಿತ್ರರಂಗಕ್ಕೆ ಯಾರೇ ಹೊಸಬರು ಬಂದರು ಕೂಡ ಅವರಿಗೆ ಆದರದ ಸ್ವಾಗತವನ್ನು ಕೋರುವ ಬಂಗಾರದ ಮನಸ್ಸಿನ ಮನುಷ್ಯ ಶಿವಣ್ಣ ಎಂದು ಹೇಳಬಹುದಾಗಿದೆ. ಇನ್ನು ಶಿವಣ್ಣ ಈಗ ಮತ್ತೊಮ್ಮೆ ಮಿಲಿಟರಿ ಮ್ಯಾನ್ ಆಗಲು ಹೊರಟಿದ್ದಾರೆ. ಹೌದು ಸ್ನೇಹಿತರೆ ಕರುನಾಡ ಚಕ್ರವರ್ತಿ ಶಿವಣ್ಣ ಈ ಹಿಂದೆ ಲೀಡರ್ ಚಿತ್ರದಲ್ಲಿ ಈ ಪಾತ್ರವನ್ನು ನಿರ್ವಹಿಸಿದರು ಎಂಬುದು ನಿಮಗೆಲ್ಲಾ ಗೊತ್ತಿರುವ ವಿಷಯವಾಗಿದೆ. ಈಗ ಮತ್ತೊಮ್ಮೆ ಶಿವಣ್ಣ ಅದೇ ಮಾದರಿಯ ಪಾತ್ರದಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ನೀ ಸಿಗೋವರೆಗೂ ಚಿತ್ರದ ಮೂಲಕ ಮತ್ತೊಮ್ಮೆ ಶಿವಣ್ಣ ಆರ್ಮಿ ಮ್ಯಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಮೀರಾ ಪಿರ್ಜಾದ ಅವರು ಶಿವಣ್ಣನವರಿಗೆ ನಾಯಕಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಟಗರು ಚಿತ್ರದ ನಂತರ ಚರಣರಾಜ್ ಅವರು ಮತ್ತೊಮ್ಮೆ ಶಿವಣ್ಣನ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ನರಾಲ ಶ್ರೀನಿವಾಸ್ ರೆಡ್ಡಿ, ಶ್ರೀಕಾಂತ್ ಧುಲಿಪುಡಿ ಹಾಗೂ ಸ್ವಾತಿ ವನಪಲ್ಲಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಖ್ಯಾತ ಗಾಯಕ ಮಂಗ್ಲಿ ಅವರು ಕೂಡ ನಟಿಸಲಿದ್ದಾರೆ. ರಾಮ್ ಧೂಲಿಪುಡಿಯವರ ನಿರ್ದೇಶನದಲ್ಲಿ ಚಿತ್ರ ಮೂಡಿ ಬರಲಿದೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು ಎರಡನೇ ಹಂತದ ಚಿತ್ರೀಕರಣ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ಬೆಂಗಳೂರು, ಚಿಕ್ಕಮಗಳೂರು, ಜಮ್ಮು ಮತ್ತು ಕಾಶ್ಮೀರ ಹಾಗೂ ಅಮೆರಿಕ ಹೀಗೆ ಮುಂತಾದಕಡೆ ಚಿತ್ರದ ಚಿತ್ರೀಕರಣ ಸಾಗಲಿದೆ. ಚಿತ್ರ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಕೂಡ ಬಿಡುಗಡೆಯಾಗಲಿದೆ.

Get real time updates directly on you device, subscribe now.