ಓವರ್ ಗೆ 20 ರನ್ ಬೇಕಿದ್ದರೇ, ಎಬಿಡಿ, ಧೋನಿ ಇಬ್ಬರಲ್ಲಿ ನಿಮ್ಮ ಆಯ್ಕೆ ಯಾರು ಎಂದಿದ್ದಕ್ಕೆ ಡುಪ್ಲೇಸಿಸ್ ಕೊಟ್ಟ ಉತ್ತರ ಏನು ಗೊತ್ತೇ??

ಓವರ್ ಗೆ 20 ರನ್ ಬೇಕಿದ್ದರೇ, ಎಬಿಡಿ, ಧೋನಿ ಇಬ್ಬರಲ್ಲಿ ನಿಮ್ಮ ಆಯ್ಕೆ ಯಾರು ಎಂದಿದ್ದಕ್ಕೆ ಡುಪ್ಲೇಸಿಸ್ ಕೊಟ್ಟ ಉತ್ತರ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪಂದ್ಯದ ಅಂತಿಮ ಓವರ್ ನಲ್ಲಿ ತಂಡಕ್ಕೆ ಗೆಲ್ಲಲು 20 ರನ್ ಅವಶ್ಯವಿರುತ್ತದೆ. ಅಂತಹ ಸಂದರ್ಭದಲ್ಲಿ ನೀವು ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿಯವರನ್ನ ಬ್ಯಾಟಿಂಗ್ ಗೆ ಕಳುಹಿಸುತ್ತಿರೋ ಅಥವಾ ಸೌತ್ ಆಫ್ರಿಕಾದ ಆಪತ್ಭಾಂದವ ಎಬಿ ಡಿ ವಿಲಿಯರ್ಸ್ ರವರನ್ನ ಬ್ಯಾಟಿಂಗ್ ಗೆ ಕಳುಹಿಸುತ್ತಿರೋ ಎಂಬ ಪ್ರಶ್ನೆ ನಿಮ್ಮ ಮುಂದಿಟ್ಟರೇ, ನೀವು ಹೇಳುವುದು ಏರಡು ಉತ್ತರ. ಒಂದು ಧೋನಿ ತಮ್ಮ ಹಳೇಯ ಫಾರ್ಮ್ ನಲ್ಲಿದ್ದರೇ, ಖಂಡಿತ ಅವರನ್ನೇ ಕಳುಹಿಸುತ್ತೇವೆಂದು, ಧೋನಿಯ ಈಗಿನ ಫಾರ್ಮ್ ಗಮನಿಸಿದರೇ, ಧೋನಿ ಬದಲು ಆಪತ್ಭಾಂದವ ಎಬಿ ಡಿ ವಿಲಿಯರ್ಸ್ ರವರನ್ನೇ ಕಳುಹಿಸುತ್ತೇವೆಂದು.

ಆದರೇ ಇದೇ ಪ್ರಶ್ನೆಯನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಒಬ್ಬ ಅನುಭವಿ ಆಟಗಾರನಿಗೆ ಕೇಳಲಾಯಿತು. ಆತ ಬೇರೆ ಯಾರೂ ಅಲ್ಲ, ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ದಕ್ಷಿಣ ಆಫ್ರಿಕಾದ ಮತ್ತೊಬ್ಬ ಆಟಗಾರ ಫ್ಲಾಪ್ ಡುಪ್ಲೇಸಿ. ಆದರೇ ಡುಪ್ಲೇಸಿ ಕೊಟ್ಟ ಉತ್ತರ ಮಾತ್ರ ಆಶ್ಚರ್ಯವಾಗಿತ್ತು.

ಭಾರತ ತಂಡದ ಮಹಿಳಾ ಕ್ರಿಕೇಟರ್ ಜೇಮಿಯಾ ರೋಡ್ರಿಗಸ್ ದಿಲ್ ಯಾ ದಿಮಾಗ್ ಎಂಬ ಹೆಸರಿನ ಒಂದು. ಗೇಮ್ ಶೋ ವನ್ನ ನಡೆಸುತ್ತಿದ್ದರು. ಆ ಶೋಗೆ ಅತಿಥಿಯಾಗಿ ಬಂದ ಡುಪ್ಲೇಸಿಸ್ ಗೆ ನಿರೂಪಕಿ ಜೇಮಿಯಾ ಇದೇ ಪ್ರಶ್ನೆಯನ್ನ ಕೇಳಿದರು. ಆದರೇ ಅದಕ್ಕೆ ಮುಲಾಜಿಲ್ಲದೇ ಉತ್ತರ ನೀಡಿದ ಡುಪ್ಲೇಸಿ ನಾನು ಅಂತಹ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿಯವರನ್ನೇ ಬ್ಯಾಟಿಂಗ್ ಗೆ ಕಳುಹಿಸುತ್ತೇನೆ. ಅವರು ಪಂದ್ಯವನ್ನ ಹೇಗೆ ಬೇಕಾದರೂ ಮುಗಿಸಬಲ್ಲ ಸಾಮರ್ಥ್ಯ ಹೊಂದಿದವರು. ಹಾಗಾಗಿ ಎಬಿ ಡಿ ವಿಲಿಯರ್ಸ್ ಬದಲು ಧೋನಿಯವರನ್ನೇ ಬ್ಯಾಟಿಂಗ್ ಗೆ ಕಳುಹಿಸುತ್ತೇನೆಂದು ಹೇಳಿದರು.

ದಕ್ಷಿಣ ಆಫ್ರಿಕಾ ತಂಡದ ಸಹಪಾಠಿ ಎಬಿ ಡಿ ವಿಲಿಯರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮತ್ತು ಸಹಪಾಠಿ ಮಹೇಂದ್ರ ಸಿಂಗ್ ಧೋನಿ, ಈ ಇಬ್ಬರನ್ನು ಸೇರಿಸಿ ಕೇಳಿದ ಪ್ರಶ್ನೆ ಡುಪ್ಲೇಸಿಗೆ ಸ್ವಲ್ಪ ತಲೆಗೆ ಹುಳ ಬಿಟ್ಟಿತ್ತು. ಆದರೇ ಇವೆರೆಡಕ್ಕೂ ಜಾಣ್ಮೆಯ ಉತ್ತರ ನೀಡಿದ ಡುಪ್ಲೇಸಿ ಎಲ್ಲಿಯೂ ವಿವಾವ ಸೃಷ್ಠಿ ಮಾಡಿಕೊಳ್ಳಲಿಲ್ಲ. ಐಪಿಎಲ್ ಮುಗಿದ ಬೆನ್ನಲ್ಲೇ ನಾಯಕ ಮಹೇಂದ್ರ ಸಿಂಗ್ ಧೋನಿ ಟಿ 20 ವಿಶ್ವಕಪ್ ಗೆ ಭಾರತ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಭಾರತ ಈ ಭಾರಿ ವಿಶ್ವಕಪ್ ಎತ್ತಿಹಿಡಿಯುವ ಸಾಧ್ಯತೆ ಬಹಳಷ್ಟಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ‌.