ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಎಲ್ಲಾ ಸವಾಲುಗಳನ್ನು ಗೆದ್ದು ರಿಲೀಸ್ ಆದ ಕೋಟಿಗೊಬ್ಬ ಗೆ ಬಿಡುಗಡೆಯಾದ ಕೆಲವೇ ಗಂಟೆಯಲ್ಲಿಯೇ ಬಿಗ್ ಶಾಕ್. ಏನು ಗೊತ್ತೇ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಒಂದು ವರ್ಷಗಳ ಕಾಲ ಯಾವುದೇ ಮನರಂಜನೆ ಇಲ್ಲದೆ ಹಾಗೂ ಚಿತ್ರದ ಬಿಡುಗಡೆ ಇಲ್ಲದೆ ಬೇಸತ್ತಿದ್ದ ಕನ್ನಡ ಪ್ರೇಕ್ಷಕರಿಗೆ ಕೋಟಿಗೊಬ್ಬ3 ಚಿತ್ರ ಮನರಂಜನೆಯ ಮಹಾಪೂರವನ್ನೇ ಹರಿಸಿದೆ ಎಂದು ಹೇಳಬಹುದು. ಹೌದು ಸ್ನೇಹಿತರೆ ಸಾಕಷ್ಟು ಅಡಚಣೆಗಳ ನಂತರವೂ ಕೂಡ ಕೋಟಿಗೊಬ್ಬ 3 ಚಿತ್ರ ಒಂದು ದಿನ ತಡವಾಗಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿತ್ತು.

ಕೋಟಿಗೊಬ್ಬ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ರವರ ನಟಿಸಿದ್ದ ಕೋಟಿಗೊಬ್ಬ2 ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಡಬಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಅದಾದ ನಂತರ ಈಗ ಬಿಡುಗಡೆಯಾಗಿರುವ ಕೋಟಿಗೊಬ್ಬ3 ಚಿತ್ರದಲ್ಲಿ ಕೂಡ ಸುದೀಪ್ ರವರು ವಿಭಿನ್ನವಾದ ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಯಶಸ್ಸನ್ನು ಕಂಡಿರುವ ಚಿತ್ರವಾಗಿ ಕೋಟಿಗೊಬ್ಬ3 ಚಿತ್ರ ಎದ್ದುನಿಂತಿದೆ. ಬಾಕ್ಸಾಫೀಸ್ ನಲ್ಲಿ ಈಗಾಗಲೇ ದಾಖಲೆಯ ಗಳಿಕೆಯನ್ನು ಕಾಣುತ್ತಿದೆ ಕೋಟಿಗೊಬ್ಬ 3 ಚಿತ್ರ. ಆದರೆ ಇದೀಗ ಇದರ ನಡುವೆಯೇ ಕೋಟಿಗೊಬ್ಬ3 ಚಿತ್ರಕ್ಕೆ ಇನ್ನೊಂದು ವಿಘ್ನ ಎದುರಾಗಿದೆ.

ಹೌದು ಕೋಟಿಗೊಬ್ಬ3 ಚಿತ್ರವನ್ನು ಕಾಪಿ ಮಾಡಿ ಬಿಡುಗಡೆ ಮಾಡಲು ಹಲವಾರು ಕಾಣದ ಕೈಗಳು ಯಶಸ್ವಿಯಾಗಿದೆ. ಈಗಾಗಲೇ ಅಂತರ್ಜಾಲದಲ್ಲಿ ಕೋಟಿಗೊಬ್ಬ3 ಚಿತ್ರದ ಫುಲ್ ವಿಡಿಯೋಗಳು ಹಲವಾರು ಬಿಡುಗಡೆಯಾಗಿವೆ ಎಂದು ಹೇಳಬಹುದಾಗಿದೆ. ಈ ಹಿಂದೆ ಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಚಿತ್ರ ಕೂಡಾ ಈ ಸಮಸ್ಯೆ ದೊಡ್ಡದಾಗಿ ಕಂಡುಕೊಂಡಿತ್ತು. ಆದರೆ ಈಗ ಮತ್ತೆ ಕೋಟಿಗೊಬ್ಬ3 ಚಿತ್ರಗಳು ಕೂಡ ಇದನ್ನು ಎದುರಿಸುತ್ತಿರುವುದು ವಿಪರ್ಯಾಸವೇ ಸರಿ ಎಂದು ಹೇಳಬಹುದು. ಒಂದೊಳ್ಳೆ ಕನ್ನಡ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಬೇಕಾದರೆ ಈ ತರಹದ ಕೆಲಸಗಳನ್ನು ಮಾಡಿರುವುದು ಒಳ್ಳೆಯ ಕೆಲಸವಲ್ಲ ಎಂದು ಹೇಳಬಹುದು, ಹಾಗೂ ಇದೆ ಸಮಯದಲ್ಲ ಪ್ರೇಕ್ಷಕರು ದಯವಿಟ್ಟು ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿ ಎಂದು ಮನವಿ ಮಾಡಿಕೊಳ್ಳುತ್ತೇವೆ.. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.