ಒಬ್ಬರಲ್ಲ ಇಬ್ಬರಲ್ಲ ಮದುವೆಗೂ ಮುನ್ನ ಯುವರಾಜ್ ಪ್ರೀತಿಸಿದ್ದ 8 ಬಾಲಿವುಡ್ ನಟಿಯರು ಯಾರ್ಯಾರು ಗೊತ್ತೇ?? ಅಚ್ಚರಿಯ ಹೆಸರುಗಳು ಲಿಸ್ಟಿನಲ್ಲಿ.

ಒಬ್ಬರಲ್ಲ ಇಬ್ಬರಲ್ಲ ಮದುವೆಗೂ ಮುನ್ನ ಯುವರಾಜ್ ಪ್ರೀತಿಸಿದ್ದ 8 ಬಾಲಿವುಡ್ ನಟಿಯರು ಯಾರ್ಯಾರು ಗೊತ್ತೇ?? ಅಚ್ಚರಿಯ ಹೆಸರುಗಳು ಲಿಸ್ಟಿನಲ್ಲಿ.

ನಮಸ್ಕಾರ ಸ್ನೇಹಿತರೇ 2011 ಎಂದಾಗ ನಮಗೆ ನೆನಪಾಗುವುದು ಭಾರತ ಕ್ರಿಕೆಟ್ ತಂಡ ವರ್ಲ್ಡ್ ಕಪ್ ಗೆದ್ದಿರುವುದು. ಹೌದು ಸ್ನೇಹಿತರ 28 ವರ್ಷಗಳ ನಂತರ ಭಾರತ ಕ್ರಿಕೆಟ್ ತಂಡ ಏಕದಿನ ವಲ್ಡ್ ಕಪ್ಪನ್ನು ಮಹೇಂದ್ರ ಸಿಂಗ್ ಧೋನಿ ರವರ ನಾಯಕತ್ವದಲ್ಲಿ ಗೆಲ್ಲುತ್ತದೆ. ಆದರೆ ಈ ವರ್ಲ್ಡ್ ಕಪ್ ಅನ್ನು ಗೆಲ್ಲಲು ಪ್ರಮುಖ ಕಾರಣವಾಗಿದ್ದು ಯುವರಾಜ್ ಸಿಂಗ್ ಎಂದರೆ ತಪ್ಪಾಗಲಾರದು. ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಕೂಡ ಯುವರಾಜ್ ಸಿಂಗ್ ರವರು ತಮ್ಮ ದೇಶಕ್ಕಾಗಿ ವರ್ಲ್ಡ್ ಕಪ್ಪನ್ನು ಗೆಲ್ಲುತ್ತಾರೆ.

ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಅವರ ಕ್ರಿಕೆಟ್ ಸಾಧನೆ ಕುರಿತಂತೆ ಅಲ್ಲ ಬದಲಾಗಿ ಅವರು ಡೇಟ್ ಮಾಡಿರುವ ಹುಡುಗಿಯರ ಕುರಿತಂತೆ. ಯುವರಾಜ್ ಸಿಂಗ್ ರವರು ಮದುವೆಯಾಗುವುದಕ್ಕಿಂತ ಮುಂಚೆ 8 ಬಾಲಿವುಡ್ ನಟಿಯರನ್ನು ಡೇಟಿಂಗ್ ಮಾಡಿದ್ದಾರೆ. ಅದರಲ್ಲಿಯೂ ಒಬ್ಬರ ಜೊತೆ ನಾಲ್ಕು ವರ್ಷಗಳ ಕಾಲ ಜೊತೆಯಲ್ಲಿದ್ದರು. ಆದರೂ ಕೂಡ ಮದುವೆಯಾಗಿರಲಿಲ್ಲ. ಹಾಗಿದ್ದರೆ ಆ 8 ನಟಿಯರು ಯಾರು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ತಪ್ಪದೆ ಕೊನೆಯವರೆಗೂ ಓದಿ.

ನೇಹ ಧೂಪಿಯ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯಾಗಿರುವ ನೇಹ ಧೂಪಿಯ ಹಾಗೂ ಯುವರಾಜ್ ಸಿಂಗ್ 2014 ರ ಸಮಯದಲ್ಲಿ ಒಬ್ಬರನ್ನೊಬ್ಬರು ಪರಸ್ಪರ ಡೇಟ್ ಮಾಡುತ್ತಿದ್ದರು. ಆದರೆ ಈ ಕುರಿತಂತೆ ಸಂದರ್ಶನವೊಂದರಲ್ಲಿ ನೇಹಾ ದುಪಿಯಾ ರವರನ್ನು ಕೇಳಿದಾಗ ನಾವಿಬ್ಬರು ಡೇಟ್ ಮಾಡುತ್ತಿಲ್ಲ ಯಾಕೆ ಜನರು ನನ್ನ ಬಳಿ ಈ ಕುರಿತಂತೆ ಕೇಳುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ ಎಂಬುದಾಗಿ ಹೇಳಿದ್ದರು.

ಪ್ರೀತಿ ಜಾಂಗಿಯಾನಿ ಮೊಹಬ್ಬತ್ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ಸೌಂದರ್ಯದ ಮೂಲಕ ಎಲ್ಲರ ಮನ ಗೆದ್ದಂತಹ ನಟಿ ಪ್ರೀತಿ ಜಾಂಗಿಯಾನಿ ಕೂಡ ಯುವರಾಜ್ ಸಿಂಗ್ ರವರ ಜೊತೆಗೆ ಸುದ್ದಿಯಾಗಿದ್ದರು. ಆದರೆ ಇಬ್ಬರೂ ಕೂಡ ಇದನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ.

ಪ್ರೀತಿ ಜಿಂಟಾ ಬಾಲಿವುಡ್ ಚಿತ್ರರಂಗದ ಗುಳಿಕೆನ್ನೆಯ ಚೆಲುವೆಯಾಗಿದ್ದಂತಹ ಪ್ರೀತಿಜಿಂಟಾ ರವರು ಕೂಡ ಹಲವಾರು ಬಾರಿ ಯುವರಾಜ್ ಸಿಂಗ್ ರವರನ್ನು ತಬ್ಬಿಕೊಂಡಿರುವ ಹಾಗೂ ಮುತ್ತು ನೀಡುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಆದರೆ ಇವರಿಬ್ಬರು ತಮ್ಮ ಸಂಬಂಧ ಕುರಿತಂತೆ ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ.

ಕಿಮ್ ಶರ್ಮಾ ಕಿಮ್ ಶರ್ಮಾ ಜೊತೆ ಯುವರಾಜ್ ಸಿಂಗ್ ರವರು ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡಿ ಜೊತೆಯಲ್ಲಿದ್ದರು. ಆದರೆ ನಂತರ ಯುವರಾಜ್ ಸಿಂಗ್ ರವರ ತಾಯಿಗೆ ಕಿಮ್ ಶರ್ಮಾ ರವರು ಇಷ್ಟವಾಗದಿದ್ದ ಕಾರಣ ಅವರು ಯುವರಾಜ್ ಸಿಂಗ್ ಅವರಿಂದ ದೂರವಾಗುತ್ತಾರೆ.

ದೀಪಿಕಾ ಪಡುಕೋಣೆ ಬಾಲಿವುಡ್ ಚಿತ್ರರಂಗದ ದಿಗ್ಗಜ ನಟಿಯಾಗಿರುವ ದೀಪಿಕಾ ಪಡುಕೋಣೆ ಹಾಗೂ ಯುವರಾಜ್ ಸಿಂಗ್ ಅವರು ಹಲವಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡು ಸಾಕಷ್ಟು ಸುದ್ದಿಯನ್ನು ಮಾಡಿದ್ದರು. ಆದರೆ ಇಬ್ಬರೂ ಕೂಡ ಅಷ್ಟೇ ವೇಗದಲ್ಲಿ ಒಬ್ಬರಿಂದೊಬ್ಬರು ದೂರವಾಗುತ್ತಾರೆ.

ರಿಯಾ ಸೇನ್ ರಿಯಾ ಸೇನ್ ಹಾಗೂ ಯುವರಾಜ್ ಸಿಂಗ್ ಅವರು ಹಲವಾರು ಪಾರ್ಟಿ ಹಾಗೂ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕೈಹಿಡಿದುಕೊಂಡು ಕಾಣಿಸಿಕೊಂಡಿದ್ದರು. ಆದರೆ ಇಬ್ಬರೂ ಕೂಡ ಎಲ್ಲಿಯೂ ತಮ್ಮ ಪ್ರೇಮ ಸಂಬಂಧದ ಕುರಿತಂತೆ ಮಾತನಾಡಿಕೊಂಡಿಲ್ಲ.

ಆಂಚಲ್ ಕುಮಾರ್ ಇವರು ಯುವರಾಜ್ ಸಿಂಗ್ ರವರ ಬಾಲ್ಯದ ಗೆಳತಿ ಯಾಗಿದ್ದು ಐಪಿಎಲ್ನ ಹಲವಾರು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಕೊನೆವರೆಗೂ ಕೂಡ ತಾವಿಬ್ಬರು ಒಳ್ಳೆಯ ಸ್ನೇಹಿತರು ಎಂಬುದಾಗಿಯೇ ಹೇಳಿಕೊಂಡು ಬಂದಿದ್ದರು.

ಮಿನಿಶ ಲಾಂಬ ಮಿನಿಶ ಲಾಂಬಾ ಹಾಗೂ ಯುವರಾಜ್ ಸಿಂಗ್ ರವರ ಕುರಿತಂತೆ ಸುದ್ದಿ ಹರಡಿದ್ದು ಅವರಿಬ್ಬರು ಪರಸ್ಪರ ಮುತ್ತು ನೀಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾಗ. ಆದರೆ ಈ ಕುರಿತಂತೆ ನಟಿ ಇದು ನಾನಲ್ಲ ನನ್ನ ಹಾಗೆ ಇರುವ ಮಾಡಲ್ ಎಂಬುದಾಗಿ ಹೇಳಿದ್ದರು.

ಹೆಜಲ್ ಕೀಚ್ ಹೆಜಲ್ ಕೀಚ್ ಇಂಗ್ಲೀಷ್ ಮೂಲದ ಮಾಡಲ್ ಆಗಿದ್ದು ಯುವರಾಜ್ ಸಿಂಗ್ ರವರು ಇವರೊಂದಿಗೆ ಹಲವಾರು ವರ್ಷಗಳ ಡೇಟಿಂಗ್ ನಡೆಸಿದ ನಂತರ 2016 ರಲ್ಲಿ ಮದುವೆಯಾಗುತ್ತಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ಹಂಚಿಕೊಳ್ಳಿ.