ಕನ್ನಡದ ಮತ್ತೊಂದು ಓಂ ಆಗಲಿದೆಯೇ ಸಲಗ?? ಮೊದಲ ದಿನ ಬಾಚಿದ್ದು ಎಷ್ಟು ಕೋಟಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ದುನಿಯಾ ವಿಜಯ್ ರವರ ಜೀವನದಲ್ಲಿ ಮಹತ್ವದ ತಿರುವನ್ನು ನೀಡುವಂತಹ ಚಿತ್ರ ಎನಿಸಿ ಕೊಂಡಿರುವ ಸಲಗ ಚಿತ್ರ ಕರ್ನಾಟಕದಾದ್ಯಂತ ಎಲ್ಲಾ ಥಿಯೇಟರ್ಗಳಲ್ಲಿ ಯಾವುದೇ ಸಮಸ್ಯೆ ಇಲ್ಲದಂತೆ ಬಿಡುಗಡೆಯಾಗಿದೆ. ವಿಜಯ್ ರವರು ಇದೇ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಹಾಗೂ ನಟನೆ ಮಾಡಿರುವಂತಹ ಚಿತ್ರದ ಮೇಲೆ ಎಂದಿನಂತೆ ಬಹಳ ನಿರೀಕ್ಷೆಗಳಿದ್ದವು. ಈ ಚಿತ್ರವು ನಿರೀಕ್ಷೆಯಂತೆ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಪಕ್ಕ ಮಾಸ್ ಪ್ರೇಕ್ಷಕರನ್ನು ಸೆಳೆಯುವುದು ಖಚಿತವಾಗಿದೆ.

ಸಿನಿಮಾದಲ್ಲಿ ಸೆಂಟಿಮೆಂಟ್ ಗೆ ಕೂಡ ಜಾಗ ನೀಡಿದ್ದು ಪ್ರೇಕ್ಷಕರು ಬಹಳ ಅತ್ಯುತ್ತಮವಾಗಿ ಸಿನಿಮಾವನ್ನು ಸ್ವೀಕರಣೆ ಮಾಡಿದ್ದಾರೆ ಎಂಬುದು ತಿಳಿದು ಬರುತ್ತಿದೆ. ಇನ್ನು ಕನ್ನಡದ ಪ್ರಖ್ಯಾತ ಮಾಧ್ಯಮ ಫಿಲಂ ಬಿಟ್ ವರದಿಯ ಪ್ರಕಾರ ಸಲಗ ಮೊದಲನೇ ದಿನದಲ್ಲಿಯೇ ಮೂರು ರೇಟಿಂಗ್ ಪಡೆದುಕೊಂಡು ಅದರಲ್ಲಿಯೂ ಮಾಸ್ ಪ್ರೇಕ್ಷಕರಿಗೆ ಪಕ್ಕ ಸಂಪೂರ್ಣ ಮನರಂಜನೆ ನೀಡುವುದು ಖಚಿತ ಎಂಬ ರಿವ್ಯೂ ಪಡೆದು ಕೊಂಡಿದೆ. ಇನ್ನು ದುನಿಯಾ ವಿಜಯ್ ರವರ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದು ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಓಂ ಚಿತ್ರ ಬಿಡುಗಡೆಯಾಗಿದೆ ಎಂದು ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ.

ಒಂದು ಕಡೆ ಕೋಟಿಗೊಬ್ಬ ಸಿನಿಮಾ ನೋಡಲು ತೆರಳಿದ್ದ ಪ್ರೇಕ್ಷಕರು ಕೂಡ ಸಲಗ ಚಿತ್ರದ ಕಡೆ ಹೋಗಿದ್ದು, ಕೋಟಿಗೊಬ್ಬ ಬಿಡುಗಡೆಯಾಗದೆ ಇದ್ದದ್ದು ಸಲಕ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆದಂತೆ ಕಾಣುತ್ತಿದೆ. ಇನ್ನು ಇಡೀ ಕರ್ನಾಟಕದ ಎಲ್ಲೆಡೆ ಬರೋಬ್ಬರಿ 350 ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆಯಾಗಿರುವ ಚಿತ್ರದ ಬಹುತೇಕ ಶೋ ಗಳು ಫುಲ್ ಆಗಿದ್ದು ನಾವು ಈ ಲೇಖನ ಬರೆಯುವ ಹೊತ್ತಿಗೆ ಗಾಂಧಿ ನಗರದ ಲೆಕ್ಕಾಚಾರದ ಪ್ರಕಾರ ಆನ್ಲೈನ್ ಬುಕಿಂಗ್ ಗಳು ಸೇರಿ ಸಲಗ ಚಿತ್ರ ಮೊದಲ ದಿನವೇ ಎಂಟರಿಂದ 10 ಕೋಟಿ ಬಾಚಿಕೊಂಡಿದೆ ಎಂದು ರಿಪೋರ್ಟ್ ತಿಳಿದು ಬಂದಿದೆ. ಈ ಮೂಲಕ ಸಲಗ ಭರ್ಜರಿಯಾಗಿ ಆರಂಭ ಪಡೆದು ಕೊಂಡಿದೆ. ಹೀಗೆ ಈ ಚಿತ್ರ ಮತ್ತಷ್ಟು ಯಶಸ್ಸು ಕಾಣಲಿ ಎಂದು ನಮ್ಮ ತಂಡದ ಪರವಾಗಿ ಆಶಿಸುತ್ತೇವೆ.

Post Author: Ravi Yadav