ಕಿಚ್ಚನ ಬಹು ನಿರೀಕ್ಷಿತ ಸಿನೆಮಾ ಕೋಟಿಗೊಬ್ಬ 3 ಗೆ ಶಾಕ್, ಶೋ ಗಳ ಶೋ ಮೇಲೆ ರದ್ದು. ತೆರೆ ಹಿಂದೆ ನಡೆಯುತ್ತಿರುವುದಾದರೂ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಳೆದ ಎರಡು ವರ್ಷಗಳಿಂದ ಯಾವುದೇ ಚಿತ್ರ ಪ್ರದರ್ಶನ ಕಾಣದೇ ಪ್ರೇಕ್ಷಕರು ತುಂಬಾನೇ ಬೇಸರದಲ್ಲಿದ್ರು. ಇನ್ನು ಚಿತ್ರರಂಗವೂ ಕೂಡ ಸರಿಯಾಗಿ ಚಿತ್ರೀಕರಣ ನಡೆಸಲು ಸಾಧ್ಯವಾಗದೇ ಸಂಕಟವನ್ನು ಅನುಭವಿಸಿದ್ರು. ಆದರೆ ಇಂದು ಆ ಸಮಸ್ಯೆಗಳೆಲ್ಲ ಕೊಚ ಕಡಿಮೆಯಾಗಿ ಥಿಯೇಟರ್ ಬಾಗಿಲು ಪ್ರೇಕ್ಷಕನಿಗಾ ತೆರೆಯಲಾಗಿದೆ. ಇನ್ನು ಅಭಿಮಾನಿಗಳ ನೆಚ್ಚಿನ ಹಿರೋ ಹಿರೋಯಿನ್ ಗಳ ಚಿತ್ರ ಕೂಡ ಒಂದಾದ ಮೇಲೆ ಒಂದರಂತೆ ತೆರೆ ಕಾಣ್ತಾ ಇದೆ.

ಶಿವಣ್ಣ ಅವರ ಭಜರಂಗಿ ೨ ಯಶಸ್ವಿ ಪ್ರದರ್ಶನದ ನಂತರ ಇವರ್ರು ಕೋಟಿಗೊಬ್ಬ ೩ ಪ್ರೇಕ್ಷಕನ ಎದುರು ತೆರೆಗೆ ಸಿದ್ದವಾಗಿತ್ತು. ಚಿತ್ರಮಂದಿರದ ಎದುರು ಕಿಚ್ಚ ಸುದೀಪ ಅವರ ಫೋಟೊಗೆ ಹಾಲಿನ ಅಭಿಷೇಕ, ಹಾರಗಳನ್ನು ಹಾಕಿ ಅಭಿಮಾನಿಗಳು ಚಿತ್ರ ನೋಡುವುದಕ್ಕೆ ಕಾಯ್ತಾ ಇದ್ರು. ಇನ್ನು ಆನ್ ಲನ್ ಮೂಲಕ ಕೂಡ ಮೊದಲೇ ಟಿಕೇಟ್ ಕಾದಿರಿಸಿದ್ರು. ಆದರೆ ಕೋಟಿಗೊಬ್ಬ ೩ ಚಿತ್ರದ ಮೊದಲ ಪ್ರದರ್ಶನ ಕಾಣಬೇಕಾಗಿದ್ದ ಪ್ರಶಾಂತಿ ಚಿತ್ರಮಂದಿರದಲಿ ಬೆಳಗಿನ 7 ಹಾಗೂ 10 ಗಂಟೆಯ ಆಟ ಪ್ರದರ್ಶನ ಕಾಣಲೇ ಇಲ್ಲ.

ಬೆಳ್ಳಂಬೆಳಗ್ಗೆ ತಮ್ಮ ಇಷ್ಟದ ನಟನ ಚಿತ್ರವನ್ನು ನೋಡಲು ತರಾತುರಿಯಲ್ಲಿ ಬಂದಿದ್ದ ಅಭಿಮಾನಿಗಳಿಗೆ ಪ್ರದರ್ಶನ ಇಲ್ಲ ಎಂದಿದ್ದು ಆಕ್ರೋಶಕ್ಕೆ ಕಾರಣವಾಯ್ತು. ಇನ್ನು ರಾಜ್ಯದ ಯಾವ ಚಿತ್ರಮಂದಿರಗಳಲ್ಲಿಯೂ ಬೆಳಗಿನ ಫಸ್ಟ್ ಶೋ ಪ್ರದರ್ಶನ ಕಂಡಿಲ್ಲ ಎಂದೇ ಹೇಳಲಾಗುತ್ತದೆಬೆಳಗಿನ ಪ್ರದರ್ಶನವಿಲ್ಲ ನಿಮ್ಮ ಆನ್ ಲೈನ್ ಬುಕ್ಕಿಗ್ ಹಣವನ್ನು ಹಿಂತಿರುಗಿಸಲಾಗುವುದು ಎನ್ನುವ ಬೋರ್ಡ್ ನೋಡಿ ಇನ್ನೂ ನಿಟ್ಟಾದ ಪ್ರೇಕ್ಷಕರು ಚಿತ್ರಮಂದಿರದ ಓನರ್ ನ್ನು ಪ್ರಶ್ನಿಸಲು ಶುರು ಮಾಡಿದ್ರು. ನಂತರ ಪೋಲೀಸರು ಕೂಡ ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಜೊತೆಗೆ ಸಂಬಂಧಪಟ್ಟವರೂ ಕೂಡ ತಾಂತ್ರಿಕ ಕಾರಣದಿಂದಾಗಿ ಪ್ರದರ್ಶನ ಮಾಡಲಾಗುತ್ತಿಲ್ಲ ಎಂದು ಹೇಳಿದ್ದಾರೆ, ಆದರೆ ಎಲ್ಲೊ ಒಂದು ಕಡೆ ಕಿಚ್ಚನ ಮೂವಿ ಗೆ ಆರ್ಥಿಕ ಸಂಕಷ್ಟ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಇನ್ನು ಕಿಚ್ಚಾ ಸುದಿಪ್ ಕೂಡ ತಾಂತ್ರಿಕ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ಬೇಗ ಪ್ರದರ್ಶನವನ್ನು ಮಾಡುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದಿದ್ದಾರೆ. ಆದರೆ ಫಸ್ಟ್ ಶೋ ನೋಡಬೇಕು ಎಂದು ಕಾದಿದ್ದ ಪ್ರೇಕ್ಷಕ ಮಾತ್ರ ನಿರಾಸೆಗೊಂಡಿದ್ದು ಸುಳ್ಳಲ್ಲ.

Post Author: Ravi Yadav