ವಿಶ್ವದ ಟಾಪ್ 5 ಟಿ 20 ಆಯ್ಕೆಮಾಡಿದ ರಶೀದ್ ಖಾನ್, ಭಾರತೀಯರದ್ದೇ ಪಾರುಪತ್ಯ. ಆಯ್ಕೆಯಾದ ಐವರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇನ್ನೊಂದು ವಾರದಲ್ಲಿ ಟಿ 20 ವಿಶ್ವಕಪ್ ಆರಂಭವಾಗಲಿದೆ. ಆದರೇ ಅದನ್ನ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚೆಚ್ಚು ಚರ್ಚೆಯಲ್ಲಿರುವಂತೆ ಮಾಡಲು ಐಸಿಸಿ ಹೊಸ ಹೊಸ ಘೋಷಣೆಗಳನ್ನ ಜಾರಿಗೆ ತರುತ್ತಿದೆ. ಅದರಲ್ಲೊಂದು ವಿಶ್ವದ ಖ್ಯಾತ ಕ್ರಿಕೇಟಿಗರಿಂದ, ವಿಶ್ವದ ಟಾಪ್ 5 ಟಿ 20 ಕ್ರಿಕೇಟಿಗರು ಯಾರು ಎಂದು. ಆ ಸರಣಿಯಲ್ಲಿ ಮೊದಲು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದವರು ಅಫಘಾನಿಸ್ತಾನದ ಮ್ಯಾಜಿಕಲ್ ಸ್ಪಿನ್ನರ್ ರಶೀದ್ ಖಾನ್. ರಶೀದ್ ಖಾನ್ ರವರು ಆರಿಸಿದ ಟಾಪ್ 5 ಆಟಗಾರರಲ್ಲಿ ಇಬ್ಬರು ಭಾರತೀಯರು ಸಹ ಸ್ಥಾನ ಪಡೆದಿದ್ದಾರೆ. ಬನ್ನಿ ಅವರು ಯಾರು ಎಂದು ತಿಳಿಯೋಣ.

ಟಾಪ್ 5 : ಕೀರನ್ ಪೋಲಾರ್ಡ್ – ವೆಸ್ಟ್ ಇಂಡೀಸ್ ನ ಈ ಆಲ್ ರೌಂಡರ್ ಪಂದ್ಯದ ಯಾವುದೇ ಕ್ಷಣದಲ್ಲಾದರೂ ಗತಿಯನ್ನ ಬದಲಾಯಿಸುತ್ತಾರೆ. ಸ್ಲಾಗ್ ಓವರ್ ಗಳಲ್ಲಿ 70 ರಿಂದ 80 ರನ್ ಭಾರಿಸುತ್ತಾರೆ. ಜೊತೆಗೆ ಲಾಂಗ್ ಆಫ್ ಮತ್ತು ಲಾಂಗ್ ಆನ್ ನಲ್ಲಿ ಉತ್ತಮ ಫೀಲ್ಡಿಂಗ್ ಸಹ ಮಾಡುತ್ತಾರೆ ಎಂದು ಹೇಳಿದರು.

ಟಾಪ್ 4 : ಹಾರ್ದಿಕ್ ಪಾಂಡ್ಯ – ಭಾರತ ಈ ಆಲ್ ರೌಂಡರ್ ಗೆ ರಶೀದ್ ಖಾನ್ 4 ನೇ ಸ್ಥಾನ ನೀಡಿದ್ದಾರೆ‌. 16 ರಿಂದ 20 ನೇ ಓವರ್ ಗಳಲ್ಲಿ 80 ರಿಂದ 90 ರನ್ ಗಳಿಸುತ್ತಾರೆ. ಅದೇ ರೀತಿ ಬೌಲಿಂಗ್ ನಲ್ಲಿ ಸಹ ಉತ್ತಮ ಯಾರ್ಕರ್ ಗಳನ್ನ ಎಸೆಯುತ್ತಾರೆ. ಉತ್ತಮವಾದ ಫೀಲ್ಡರ್ ಸಹ.

ಟಾಪ್ 3 : ಎಬಿ ಡಿ ವಿಲಿಯರ್ಸ್ -ಮಿಸ್ಟರ್ 360 ಡಿಗ್ರಿ ಎಂದು ಕರೆಸಿಕೊಳ್ಳುವ ಎಬಿಡಿಗೆ ರಶೀದ್ ಮೂರನೇ ಸ್ಥಾನ ನೀಡಿದ್ದಾರೆ. ಸ್ಲಾಗ್ ಓವರ್ ನಲ್ಲಿ ಯಾವ ಶ್ರೇಷ್ಠ ಬೌಲರ್ ಗಳನ್ನು ನೋಡದೇ ಲೀಲಾಜಾಲವಾಗಿ ದಂಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಹಾಗಾಗಿ ಇವರಿಗೆ ಮೂರನೇ ಸ್ಥಾನವನ್ನು ನೀಡುತ್ತೇನೆಂದು ರಶೀದ್ ಹೇಳಿದ್ದಾರೆ‌.

ಟಾಪ್ 2 – ಕೇನ್ ವಿಲಿಯಮ್ಸನ್ : ನ್ಯೂಜಿಲೆಂಡ್ ತಂಡದ ನಾಯಕ ಕೇನ್ ಗೆ ಎರಡನೇ ಸ್ಥಾನ ನೀಡಿದ್ದಾರೆ ರಶೀದ್. ಟಿ 20 ಆಡುತ್ತಿದ್ದರೂ ಶಾಂತ ಮನೋಭಾವದಲ್ಲಿರುತ್ತಾರೆ. ಪಂದ್ಯದ ಕೊನೆಯ ಎಸೆತದ ತನಕ ಆಡಿ, ತಂಡವನ್ನ ಜಯಗಳಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಟಾಪ್ 1 : ವಿರಾಟ್ ಕೊಹ್ಲಿ – ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಗೆ ಟಾಪ್ 1 ಸ್ಥಾನ ನೀಡಿದ್ದಾರೆ ರಶೀದ್. ವಿರಾಟ್ ಎಂತಹ ಪಿಚ್ ಗಳೇ ಆಗಿರಲಿ, ಅಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸುತ್ತಾರೆ. ನಿಧಾನಗತಿಯ ಪಿಚ್ ಗಳೇ ಇರಲಿ, ಅಥವಾ ಬೌನ್ಸಿ ಪಿಚ್ ಗಳೇ ಇರಲಿ, ಅಲ್ಲಿ ತಮ್ಮ ವಿರಾಟ ರೂಪ ತೋರಿಸುತ್ತಾರೆ. ಹಾಗಾಗಿ ಅವರಿಗೆ ಟಾಪ್ 1 ಸ್ಥಾನ ನೀಡುತ್ತಿದ್ದೇನೆ ಎಂದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav