ಬಹುನಿರೀಕ್ಷಿತ ಚಿತ್ರಗಳಾದ ಕೋಟಿಗೊಬ್ಬ3 ಹಾಗೂ ಸಲಗ ಚಿತ್ರಕ್ಕೆ ಶಾಕ್ ನೀಡಿದ ಕರೋನಾ ಏನದು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಂತ ನೀರಿನಂತಿದ್ದ ಕನ್ನಡ ಚಿತ್ರರಂಗ ಈಗ ಹಬ್ಬದ ದಿನದಂದು ಎರಡು ದೊಡ್ಡ ಚಿತ್ರಗಳ ಬಿಡುಗಡೆ ಎಂದಿಗೆ ಮತ್ತೆ ಮೈಕೊಡವಿ ನಿಲ್ಲುವ ಎಲ್ಲ ಸಾಧ್ಯತೆಗಳನ್ನು ತೋರಿಸಿಕೊಟ್ಟಿದೆ. ಹೌದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ3 ಹಾಗೂ ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಸಲಗ ಚಿತ್ರ ಎರಡು ಚಿತ್ರಗಳು ಕೂಡ ನಾಳೆ ಬಿಡುಗಡೆಯಾಗಲಿವೆ. ಇನ್ನು ಈಗಾಗಲೇ ಎರಡು ಚಿತ್ರಗಳು ಕೂಡ ಮುನ್ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದ್ದು ಹಬ್ಬದ ದಿನದಂದು ಕನ್ನಡ ಸಿನಿಪ್ರೇಕ್ಷಕರಿಗೆ ಹಬ್ಬದೂಟವನ್ನು ನೀಡಲು ಚಿತ್ರಗಳು ಕೂಡ ಸಿದ್ಧವಾಗಿ ನಿಂತಿವೆ.

ಇನ್ನು ಈಗಾಗಲೇ ಈ ಎರಡು ಚಿತ್ರಗಳು ಕೂಡ ಒಂದೇ ದಿನದಂದು ಬಿಡುಗಡೆ ಆಗುವುದರಿಂದಾಗಿ ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ಸ್ವಲ್ಪಮಟ್ಟಿಗೆ ಕಲೆಕ್ಷನ್ ಭಾಗವಾಗುವ ಸಮಸ್ಯೆ ಎರಡು ಚಿತ್ರಗಳು ಈಗಾಗಲೇ ಎದುರಿಸುತ್ತಿವೆ. ಇಷ್ಟು ಮಾತ್ರವಲ್ಲದೆ ಈಗ ಮತ್ತೆರಡು ಸಮಸ್ಯೆಯನ್ನು ಕೂಡ ಈ ಎರಡು ಚಿತ್ರಗಳು ಎದುರಿಸುತ್ತಿದ್ದಾವೆ. ಅದೇನೆಂದರೆ ಚಿತ್ರಮಂದಿರಗಳ ಸಮಸ್ಯೆಯಿಂದಾಗಿ ಎರಡು ಚಿತ್ರಗಳ ಮುಖ್ಯ ಚಿತ್ರಮಂದಿರಗಳ ವರ್ಗಾವಣೆ. ಇಷ್ಟೆಲ್ಲಾ ನಡೆಯುವುದರ ಜೊತೆಗೆ ಹೊಸ ಸಮಸ್ಯೆ ಒಂದು ನಾಳೆ ಬಿಡುಗಡೆಯಾಗಲಿರುವ ಚಿತ್ರಗಳಿಗೆ ಈಗ ಹೊಸದಾಗಿ ಬಂದಿದೆ.

ಹೌದು ಸ್ನೇಹಿತರೆ ಹೊಸ ಸಮಸ್ಯೆ ಸಲಗ ಹಾಗೂ ಕೋಟಿಗೊಬ್ಬ3 ಚಿತ್ರಕ್ಕೆ ಅಡ್ಡಗಾಲು ಹಾಕಿವೆ. ಅದೇನೆಂದರೆ ಈ ಮಹಾಮಾರಿಯ ಕಾರಣದಿಂದಾಗಿ ಸರ್ಕಾರ ರಾತ್ರಿ ಎಂಟು ಗಂಟೆ ಒಳಗಡೆ ಗಾಗಿ ಸಿನಿಮಾ ಪ್ರದರ್ಶನಕ್ಕೆ ಮಾತ್ರ ಅನುಮತಿ ನೀಡಿದೆ. ಹೀಗಾಗಿ ಇದರ ಜೊತೆಗೆ ಮಳೆ ಕೂಡ ಇರುವುದರಿಂದಾಗಿ ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ವ್ಯತ್ಯಯ ಉಂಟಾಗುವುದನ್ನು ಕಂಡಿತ. ಆದರೂ ಕೂಡ ಎರಡು ಕನ್ನಡ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಗೆದ್ದು ಬರಲಿ ಎಂಬುದಾಗಿ ಹಾರೈಸೋಣ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸಲ್ಲಿ ಹಂಚಿಕೊಳ್ಳಿ.

Post Author: Ravi Yadav