ಬಿಗ್ ನ್ಯೂಸ್: ಅಕ್ಷರ ಪಟೇಲ್ ಬದಲಿಗೆ ಬದಲಿ ಆಟಗಾರರನ್ನು ಆಯ್ಕೆ ಮಾಡಿದ ಭಾರತ. ಆಯ್ಕೆಯಾದ ಬೌಲರ್ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರತಿಯೊಬ್ಬ ಆಟಗಾರರಿಗೂ ಕೂಡ ವಿಶ್ವಕಪ್ ಕ್ರಿಕೆಟ್ ತಂಡದಲ್ಲಿ ಆಟವಾಡಬೇಕು ಎಂಬ ಕನಸು ಇದ್ದೇ ಇರುತ್ತದೆ. ಅದೇ ಕಾರಣಕ್ಕಾಗಿ ಪ್ರತಿಯೊಬ್ಬ ಆಟಗಾರರು ಕೂಡ ವಿಶ್ವಕಪ್ಪನ್ನು ಗಮನದಲ್ಲಿಟ್ಟು ಕೊಂಡು ಈ ಬಾರಿಯ ಐಪಿಎಲ್ ನಲ್ಲಿ ಸಾಕಷ್ಟು ಉತ್ತಮ ಪ್ರದರ್ಶನ ನೀಡಿದ್ದಾರೆ, ಅದರಲ್ಲಿಯೂ ಯುವ ಆಟಗಾರರು ಬಹಳ ಮಿಂಚುತ್ತಿದ್ದ ಯಾವ್ಯಾವ ಆಟಗಾರರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಿದೆ ಎಂಬುದರ ಚರ್ಚೆ ಬಹಳ ಜೋರಾಗಿ ನಡೆದಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಬಿಸಿಸಿಐ ತಂಡದಲ್ಲಿ ಯಾವುದೇ ಬದಲಾವಣೆಗಳು ಇಲ್ಲ ಎಂದು ಹೇಳಿಕೆ ನೀಡಿತು.

ಆದರೆ ಇದೀಗ ತನ್ನ ನಿರ್ಧಾರವನ್ನು ಬದಲಿಸಿರುವ ಬಿಸಿಸಿಐ ಮತ್ತೊಬ್ಬ ಬೌಲರನ್ನು ತಂಡಕ್ಕೆ ಆಯ್ಕೆ ಮಾಡಿ ಒಬ್ಬ ಆಲ್-ರೌಂಡರ್ ಅನ್ನು ತಂಡದಿಂದ ಹೊರಗಡೆ ಕಳುಹಿಸಿ ಘೋಷಣೆ ಮಾಡಿದೆ. ಹೀಗೆ ಹೊರ ಬಂದಿರುವುದು ಮತ್ಯಾರು ಅಲ್ಲ ಅವರೇ ಅಕ್ಷರ ಪಟೇಲ್. ಹೌದು ಸ್ನೇಹಿತರೆ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡದೆ ಇದ್ದರೂ ಕೂಡ ತಂಡದಲ್ಲಿ ಸ್ಥಾನ ಉಳಿಸಿ ಕೊಳ್ಳುವ ಎಲ್ಲಾ ಸಾಧ್ಯತೆ ಕಾಣಿಸುತ್ತಿತ್ತು, ಆದರೆ ಸದ್ಯದ ಮಟ್ಟಿಗೆ ಮೂಲಗಳ ಪ್ರಕಾರ ಅಕ್ಷರ ಪಟೇಲ್ ರವರು ಇಂಜುರಿ ಸಮಸ್ಯೆಯಿಂದ ಹೊರ ಬಂದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಬಿಸಿಸಿಐ ಕೇವಲ ಬದಲಿ ಆಟಗಾರರನ್ನು ಮಾತ್ರ ಘೋಷಣೆ ಮಾಡಿತು ಕಾರಣ ತಿಳಿಸಿಲ್ಲ.

ಇದೀಗ ಅಕ್ಷರ ಪಟೇಲ್ ಅವರ ಸ್ಥಾನಕ್ಕೆ ಆಯ್ಕೆಯಾಗಿರುವ ಯುವ ಆಟಗಾರ ಯಾರೆಂದರೇ ತಂಡ ಸಂಕಷ್ಟದಲ್ಲಿ ಇರುವ ಸಂದರ್ಭದಲ್ಲಿ ಅದರಲ್ಲಿಯೂ ಸಾಕಷ್ಟು ಬಾರಿ ಇದೆ ಐಪಿಎಲ್ ನಲ್ಲಿ ತಂಡ ಸಂಕಷ್ಟದಲ್ಲಿರುವಾಗ ಒಂದೇ ಓವರ್ ನಲ್ಲಿ ಎರಡೆರಡು ವಿಕೆಟ್ ಪಡೆಯುವ ನಿಸ್ಸಿಮ ಆಟಗಾರ ಶಾರ್ದುಲ್ ಠಾಕೂರ್ ಅವರನ್ನು ಅಕ್ಷರ ಪಟೇಲ್ರವರ ಬದಲಿ ಆಟಗಾರನಾಗಿ ಘೋಷಣೆ ಮಾಡಿದೆ. ಈ ಮೊದಲು ಮೀಸಲು ಆಟಗಾರನಾಗಿದ್ದ ಶಾರ್ದುಲ್ ಠಾಕೂರ್ ಈಗ ಭಾರತೀಯ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಒಟ್ಟಿನಲ್ಲಿ ಅದೇನೇ ಆಗಲಿ ಯಾರದು ಆಯ್ಕೆಯಾಗಿರಲಿ ವಿಶ್ವಕಪ್ ಗೆದ್ದು ಭಾರತದ ಕೀರ್ತಿಪತಾಕೆ ಹರಿಸಲಿ ಎಂಬುದೇ ನಮ್ಮೆಲ್ಲರ ಆಶಯ.

Post Author: Ravi Yadav