ಕೋರೋನಾದಿಂದ ಆರ್ಥಿಕ ಬಿಕ್ಕಟ್ಟೆ?? ಕಡಿಮೆ ಬಂಡವಾಳದೊಂದಿಗೆ ಲಾಭ ತರುವ ಬಿಸಿನೆಸ್ ಗಳು ಯಾವುವು ಗೊತ್ತಾ??

ಕೋರೋನಾದಿಂದ ಆರ್ಥಿಕ ಬಿಕ್ಕಟ್ಟೆ?? ಕಡಿಮೆ ಬಂಡವಾಳದೊಂದಿಗೆ ಲಾಭ ತರುವ ಬಿಸಿನೆಸ್ ಗಳು ಯಾವುವು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕೋರೋನಾ ಜಗತ್ತಿನ ಆರ್ಥಿಕ ಚಟುವಟಿಕೆಗೆ ದೊಡ್ಡ ಹೊಡೆತ ನೀಡಿದೆ. ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ತಭ್ದಗೊಂಡು ಎಲ್ಲೆಡೆ ನಿರುದ್ಯೋಗ ತಾಂಡವವಾಡುತ್ತಿದೆ. ಆದರೇ ಉದ್ಯೋಗ ನಷ್ಟವಾಗಿದೆ ಎಂದು ಚಿಂತಿಸುವ ಬದಲು, ಅತ್ಯಂತ ಕಡಿಮೆ ಬಂಡವಾಳದಲ್ಲಿ ಶುರು ಮಾಡುವ ಹಾಗೂ ಹೆಚ್ಚು ಲಾಭಗಳಿಸುವ ಬಿಸಿನೆಸ್ ಗಳು ಈ ಕೆಳಗಿನಂತಿವೆ. ಕೇವಲ ಹತ್ತು ಸಾವಿರ ರೂಪಾಯಿಯ ಬಂಡವಾಳದಿಂದ ಶುರು ಮಾಡಬಹುದಾದ ಬಿಸಿನೆಸ್ ಗಳು ಈ ಕೆಳಗಿನಂತಿವೆ.

ಮೊದಲನೆಯದಾಗಿ ಫೋಟೋಗ್ರಫಿ – ನಿಮ್ಮಲ್ಲೊಂದು ಉತ್ತಮ ಹೆಚ್ ಡಿ ಗುಣಮಟ್ಟದ ಕ್ಯಾಮೆರಾ ಇದ್ದರೇ , ಅದರ ಮೂಲಕ ಒಳ್ಳೇಯ ಫೋಟೋ ತೆಗೆದು , ಅದರಿಂದ ಉತ್ತಮ ಸಾಫ್ಟವೇರ್ ಬಳಸಿ, ಒಳ್ಳೆಯ ದುಡ್ಡು ಮಾಡಬಹುದು. ಎರಡನೆಯದಾಗಿ ಈವೇಂಟ್ ಮ್ಯಾನೇಜ್ಮೆಂಟ್ – ಒಂದು ಒಳ್ಳೆಯ ಕಾರ್ಯಕ್ರಮಗಳಿಗೆ ಹಲವಾರು ಸಿದ್ದತೆಗಳನ್ನ ನಡೆಸಿಕೊಳ್ಳಬೇಕಾಗಿರುತ್ತದೆ. ಅಂತಹ ಸಿದ್ದತೆಗಳನ್ನ ಮಾಡಿಕೊಡಲು ನೆರವಾಗುವಂತಹ ಇವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆ ಆರಂಭಿಸಬಹುದು.

ಇನ್ನು ಆನ್ಲೈನ್ ಬೇಕರಿ – ಈಗ ಆನ್ಲೈನ್ ಮುಖಾಂತರ ಆಹಾರ ತರಿಸಿಕೊಳ್ಳುವ ಟ್ರೆಂಡ್ ಹೆಚ್ಚು ನಡೆಯುತ್ತಿದೆ. ನೀವು ಪಾಕ ಪ್ರವೀಣರಾದರೇ, ಆನ್ಲೈನ್ ಮುಖಾಂತರ ನಿಮ್ಮ ಆಹಾರಪದಾರ್ಥಗಳನ್ನು ಮಾರ್ಕೇಟಿಂಗ್ ಮಾಡಿ ಮಾರಬಹುದು. ಇನ್ನು ಅಷ್ಟೇ ಅಲ್ಲದೆ ಜ್ಯೂಸ್ ಅಂಗಡಿ – ವಾತಾವರಣದಲ್ಲಿ ಧಗೆ ಶುರುವಾಗಿದೆ. ದೇಹವನ್ನ ತಂಪು ಮಾಡಲು ಎಲ್ಲರೂ ಜ್ಯೂಸ್ ಗಳಿಗೆ ಮೊರೆ ಹೋಗುತ್ತಾರೆ. ಹಾಗಾಗಿ ಜ್ಯೂಸ್ ಅಂಗಡಿ ತೆರೆಯುವುದು ಉತ್ತಮ.

ಇದು ಕೂಡ ಒಂದು ಉತ್ತಮ ಆಯ್ಕೆಯಾಗಿದೆ, ಅದುವೇ ಟ್ರಾವೆಲ್ ಏಜೆನ್ಸಿ – ಕೋರೋನಾ ಮುಗಿದ ಕಾರಣ ಪ್ರವಾಸೋದ್ಯಮ ಚಿಗುರುತ್ತಿದೆ. ಹಾಗಾಗಿ ಟ್ರಾವೆಲ್ ಏಜೆನ್ಸಿ ತೆರೆಯಲು ಇದು ಸೂಕ್ತ ಸಮಯ. ಇನ್ನು ನೀವು ಡಿಗ್ರಿ ಪದವಿ ಪಡೆದುಕೊಂಡಿದ್ದರೇ ಟ್ಯೂಷನ್ ಸೆಂಟರ್ – ಆನಲೈನ್ ಎಜುಕೇಷನ್ ನಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿಲ್ಲ ಎಂಬ ಮನಸ್ಥಿತಿ ಪೋಷಕರಿಗಿದೆ. ಹಾಗಾಗಿ ಟ್ಯೂಷನ್ ಸೆಂಟರ್ ತೆರೆಯುವುದು ಉತ್ತಮ ಬಿಸಿನೆಸ್. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.