ಆರ್ಸಿಬಿ ಈ ಮೂರು ಆಟಗಾರರನ್ನು ಉಳಿಸಿಕೊಳ್ಳಬೇಕು ಎಂದ ಬ್ರಿಯನ್ ಲಾರ?? ಎಬಿಡಿ ಬೇಡ ಎಂದು ಆಯ್ಕೆ ಮಾಡಿದ್ದು ಯಾರನ್ನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಈ ಬಾರಿಯೂ ಕೂಡ ನಮ್ಮೆಲ್ಲರ ನೆಚ್ಚಿನ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲುವಲ್ಲಿ ಕೈ ಸೋತಿದೆ ಎಂದು ಹೇಳಬಹುದಾಗಿದೆ. ಇನ್ನು ಈ ಬಾರಿ ವಿರಾಟ್ ಕೊಹ್ಲಿ ಅವರು ಕೂಡ ಕೊನೆಯ ಬಾರಿಗೆ ಕಪ್ತಾನನಾಗಿ ರಾಯಲ್ ಚಾಲೆಂಜರ್ಸ್ ತಂಡವನ್ನು ಮುನ್ನಡೆಸಿದ್ದರು ಎಂಬುದನ್ನು ನೀವೆಲ್ಲರೂ ತಿಳಿದಿದ್ದೀರ. ಈ ಬಾರಿಯಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಬಹುದೆಂಬ ನಿರೀಕ್ಷೆ ಬಲವಾಗಿ ಇತ್ತು. ಆದರೆ ಕ್ವಾಲಿಫೈಯರ್ ಹಂತದಲ್ಲಿ ಬೆಂಗಳೂರು ತಂಡ ಎಡವಿದೆ ಎಂದು ಹೇಳಬಹುದಾಗಿದೆ.

ಇನ್ನು ಮುಂದಿನ ವರ್ಷ ಅಂದರೆ ಐಪಿಎಲ್ 2022 ರ ಹೊತ್ತಿಗೆ ಎಲ್ಲಾ ಆಟಗಾರರನ್ನು ಎಲ್ಲಾ ತಂಡಗಳು ಬಿಡುಗಡೆ ಮಾಡಬೇಕಾದ ಪ್ರಸಂಗ ಒದಗಿ ಬರುತ್ತದೆ. ಈ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ನ ದಂತಕಥೆಯಿಂದ ಖ್ಯಾತರಾಗಿರುವ ಕ್ರಿಕೆಟಿಗ ಬ್ರಯಾನ್ ಲಾರಾ ರವರು ರಾಯಲ್ ಚಾಲೆಂಜರ್ಸ್ ತಂಡ ಈ ಮೂರು ಆಟಗಾರರನ್ನು ಮತ್ತೆ ಪಡೆದುಕೊಳ್ಳಬೇಕು ಎಂಬುದಾಗಿ ಹೇಳಿದ್ದಾರೆ. ಹಾಗಿದ್ದರೆ ಆ ಮೂರು ಆಟಗಾರರು ಯಾರು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇನೆ.

ಹೌದು ಸ್ನೇಹಿತರೆ ಬ್ರಯಾನ್ ಲಾರಾ ರವರ ಪ್ರಕಾರ ರಾಯಲ್ ಚಾಲೆಂಜರ್ಸ್ ತಂಡ 2022 ರ ಐಪಿಎಲ್ ಗಾಗಿ ಇದೇ ಡಿಸೆಂಬರ್ ನಲ್ಲಿ ನಡೆಯುವ ಆಕ್ಷನ್ ನಲ್ಲಿ ವಿರಾಟ್ ಕೊಹ್ಲಿ ದೇವದಾಸ್ ಪಡಿಕಲ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ರವರನ್ನು ಉಳಿಸಿಕೊಳ್ಳಬೇಕು ಎಂಬುದಾಗಿ ಸಲಹೆ ನೀಡಿದ್ದಾರೆ. ಈ ಬಾರಿ ಗ್ಲೆನ್ ಮ್ಯಾಕ್ಸ್ವೆಲ್ ರವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋಬ್ಬರಿ 14 ಕೋಟಿಗೂ ಅಧಿಕ ಹಣವನ್ನು ನೀಡಿ ಖರೀದಿಸಿತ್ತು. ಅವರು ಹಣಕ್ಕೆ ತಕ್ಕಂತೆ ಆಟವನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ನು ಇತ್ತ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕಲ್ ರವರ ಅಗತ್ಯ ಖಂಡಿತವಾಗಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇದೆ ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಎಬಿಡಿ ವಿಲಿಯರ್ಸ್ ರವರನ್ನು ಖರೀದಿಸುವುದು ಬೇಡ ಎಂಬುದಾಗಿ ಕೂಡ ಬ್ರಯಾನ್ ಲಾರಾ ರವರು ಈ ಸಮಯದಲ್ಲಿ ಹೇಳಿಕೊಂಡಿದ್ದಾರೆ. ಯಾಕೆಂದರೆ ಅವರು ಆಡುವುದೇ ಕೇವಲ ಐಪಿಎಲ್ ನಲ್ಲಿ ಮಾತ್ರ ಹೀಗಾಗಿ ಅವರಿಗೆ ರನ್ ಗಳಿಸಲು ಕೂಡ ಇತ್ತೀಚಿನ ದಿನಗಳಲ್ಲಿ ಸಾಧ್ಯವಾಗುತ್ತಿಲ್ಲ ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ಆಕ್ಷನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾವ ಆಟಗಾರರನ್ನು ಖರೀದಿಸಬಹುದು ಎಂಬ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav