ಸದ್ಯದಲ್ಲಿಯೇ ಆರ್ಸಿಬಿಗೆ ಹೊಸ ನಾಯಕನ ಘೋಷಣೆ, ನಾಯಕತ್ವದ ಕುರಿತು ಮಹತ್ವದ ವಿಶೇಷ ಮಾಹಿತಿ ನೀಡಿದ ಕೊಹ್ಲಿ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಆರ್ಸಿಬಿ ತಂಡ 2021 ರ ಐಪಿಎಲ್ ಕೆಕೆಆರ್ ವಿರುದ್ದ ಹೀನಾಯವಾಗಿ ಸೋತು ಐಪಿಎಲ್ ನಿಂದ ಹೊರಬಿದ್ದಿದೆ. ಈ ಮೂಲಕ ವಿರಾಟ್ ಕೊಹ್ಲಿ ಆರ್ಸಿಬಿ ನಾಯಕತ್ವದಿಂದ ಬಹುತೇಖ ಕೆಳಗಿಳಿದಂತೆ. ಈ ಮುಂಚೆ ಘೋಷಿಸಿದಂತೆ ನಾಯಕ ವಿರಾಟ್ ಕೊಹ್ಲಿ ಈ ಸೀಸನ್ ನಂತರ ಐಪಿಎಲ್ ನಲ್ಲಿ ಆರ್ಸಿಬಿ ತಂಡದ ನಾಯಕತ್ವದಿಂದ ಕೆಳಗಿಳಿಯುತ್ತೇನೆ. ಆದರೇ ಆರ್ಸಿಬಿ ತಂಡದಲ್ಲಿ ಆಟಗಾರನಾಗಿ ಮಾತ್ರ ಮುಂದುವರಿಯಲು ಇಷ್ಟಪಡುತ್ತೇನೆ ಎಂದು ಘೋಷಿಸಿದ್ದರು.

ಇನ್ನು ಮೊನ್ನೆ ನಡೆದ ಏಲಿಮಿನೇಟರ್ ಸುತ್ತಿನಲ್ಲಿ ಕೆಕೆಆರ್ ಪಂದ್ಯದಲ್ಲಿ ಆರ್ಸಿಬಿ ತಂಡ ಸೋಲುವ ಮೂಲಕ ಐಪಿಎಲ್ ನಿಂದ ಹೊರಬಿದ್ದಿತು. ಈ ಭಾರಿಯಾದರೂ ಆರ್ಸಿಬಿ ಕಪ್ ಗೆಲ್ಲುತ್ತದೆ ಎಂಬ ಅಭಿಮಾನಿಗಳ ನೀರಿಕ್ಷೆ ನುಚ್ಚು ನೂರಾಯಿತು. ಆದರೇ ಪಂದ್ಯಕ್ಕೂ ಹಿಂದಿನ ಆರ್ಸಿಬಿಯ ಆಪತ್ಭಾಂದವ ಎಬಿ ಡಿ ವಿಲಿಯರ್ಸ್ ಜೊತೆ ಮಾತನಾಡಿದ ವಿರಾಟ್ ಕೊಹ್ಲಿ ಒಂದು ರಹಸ್ಯ ಮಾಹಿತಿಯನ್ನ ಹೊರಹಾಕಿದ್ದಾರೆ.

ವಿರಾಟ್ ಕೊಹ್ಲಿ ನಾಯಕನಾಗಿ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಆ ಕಾರಣಕ್ಕೆ ಫ್ರಾಂಚೈಸಿಗಳು ನಾಯಕ ವಿರಾಟ್ ರನ್ನ ನಾಯಕತ್ವದಿಂದ ಕೆಳಗಿಳಿಸುತ್ತಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೇ ಈ ಬಗ್ಗೆ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ ನಾನು ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದು ನನ್ನ ಸ್ವ ನಿರ್ಧಾರದಿಂದಲೇ ಹೊರತು ಯಾವುದೇ ಒತ್ತಡದಿಂದಲ್ಲ. ಪ್ರತಿಯೊಬ್ಬ ಆಟಗಾರ ಆಟದಲ್ಲಿ ತನ್ನ ಶೇಕಡಾ 120 % ಆಟ ಆಡಬೇಕು. ಆತ 100 % ತನ್ನ ಪರಿಶ್ರಮ ಧಾರೆ ಏರೆದರೂ ಅದು ಉತ್ತಮವಲ್ಲ.

ನಾನೀಗ ನಾಯಕತ್ವದ ಒತ್ತಡದಿಂದ ನನ್ನ ಸಂಪೂರ್ಣ ಪರಿಶ್ರಮವನ್ನ ಆಟದಲ್ಲಿ ವಿನಿಯೋಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾಯಕತ್ವ ಎಂಬ ಜವಾಬ್ದಾರಿಯಿಂದ ಹೊರಬಂದು ನನ್ನ ಆಟದ ಮೇಲೆ ಗಮನವಿರಿಸಿ ಶೇಕಡಾ 120 ರಷ್ಟನ್ನ ಆಟದಲ್ಲಿ ವಿನಿಯೋಗಿಸಲು ನಿರ್ಧರಿಸಿದ್ದೇನೆ. ಹಾಗಾಗಿ ಅನಿವಾರ್ಯ ಕಾರಣಗಳಿಂದ ನಾಯಕತ್ವ ತೊರೆಯಲು ಚಿಂತಿಸಿದ್ದೇನೆ ಎಂದರು, ಹಾಗೂ ಇನ್ನು ಕೆಲವೇ ಕೆಲವು ದಿನಗಳಲ್ಲಿ ಹೊಸ ನಾಯಕನ ಘೋಷಣೆಯನ್ನು ಖಚಿತ ಪಡಿಸಿದರು. ಅದಲ್ಲದೇ ನಾನು ಆರ್ಸಿಬಿ ತಂಡದ ಮೂಲಕ ಐಪಿಎಲ್ ಗೆ ಪದಾರ್ಪಣೆ ಮಾಡಿದ್ದು, ಹಾಗಾಗಿ ಅಂತ್ಯವನ್ನು ಕೂಡ ಆರ್ಸಿಬಿ ತಂಡದೊಂದಿಗೆ ಮುಗಿಸುತ್ತೇನೆ. ನಾಯಕನಾಗಿ ಅಲ್ಲದಿದ್ದರೂ, ಆಟಗಾರನಾಗಿ ಆರ್ಸಿಬಿ ತಂಡದಲ್ಲಿ ಮುಂದುವರೆಯುತ್ತೇನೆ ಎಂದು ಘೋಷಿಸಿದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav