ಪ್ರತಿ ಬಾರಿ ಕುಂಭಮೇಳದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕಾಣಿಸುತ್ತಾರೆ ನಾಗಾಸಾಧುಗಳು, ಆದರೆ ಅಂತ್ಯವಾದ ತಕ್ಷಣ ಕಣ್ಮರೆಯಾಗುತ್ತಾರೆ, ಇವರ ಹಿಂದಿನ ರಹಸ್ಯವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನೀವು ಭಾರತೀಯ ಸಂಸ್ಕೃತಿಯನ್ನು ಭಾರತ ದೇಶದ ಉದ್ದಗಲಕ್ಕೂ ಕೂಡ ನೋಡಿದರೆ ಅದರಲ್ಲಿ ಕುಂಭಮೇಳದ ಪ್ರಸ್ತಾಪನೆ ಬರುವುದಂತೂ ಖಂಡಿತ. ಹೌದು ಸ್ನೇಹಿತರೆ ಹಲವಾರು ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳದಲ್ಲಿ ನಾಗಸಾಧುಗಳು ಒಮ್ಮೆಲೆ ಬಂದು ಲಕ್ಷಾಂತರ ಸಂಖ್ಯೆಯಲ್ಲಿ ಸೇರಿ ಕೊಳ್ಳುತ್ತಾರೆ. ಹೌದು ಸ್ನೇಹಿತರೆ ನಾಗಸಾಧುಗಳು ಎಂದರೆ ನಿಮಗೆ ಖಂಡಿತವಾಗಿ ನೀವು ಒಮ್ಮೆಯಾದರೂ ನಿಮ್ಮ ಜೀವನದಲ್ಲಿ ನೋಡಿರುತ್ತೀರಿ.

ಹೌದು ಸ್ನೇಹಿತರೆ ಶಿವಣ್ಣ ಆರಾಧಕರಾಗಿ ಇರುವ ನಾಗಸಾಧುಗಳು ಪ್ರಯಾಗರಾಜ ದಲ್ಲಿ ನಡೆಯುವ ಕುಂಭ ಮೇಳದಲ್ಲಿ ಎಲ್ಲರೂ ಕೂಡ ಬಂದು ಸೇರುತ್ತಾರೆ. ಮುಖತುಂಬಾ ಮೈತುಂಬಾ ಬೂದಿಯನ್ನು ಬಳಸಿಕೊಂಡಿರುವ ಹಾಗೂ ತಲೆಯ ಜಟೆಯನ್ನು ಶಿವನಂತೆ ಸುತ್ತಿಕೊಂಡಿರುವ ರೂಪದವರು ಆಗಿರುವ ನಾಗಸಾಧುಗಳು ಕುಂಭಮೇಳ ಮುಗಿಯುತ್ತಿದ್ದಂತೆ ಎಲ್ಲಿಗೆ ಹೋಗುತ್ತಾರೆ ಎಂಬ ಕುರಿತಂತೆ ಯಾರಿಗೂ ಕೂಡ ತಿಳಿದಿರುವುದಿಲ್ಲ. ಇಂದಿನ ವಿಚಾರದಲ್ಲಿ ನಾವು ನಿಮಗೆ ನಾಗಸಾಧುಗಳು ಆಗುವುದು ಹೇಗೆ ಹಾಗೂ ಕುಂಭಮೇಳ ಮುಗಿದ ನಂತರ ಅವರು ಎಲ್ಲಿಗೆ ಹೋಗುತ್ತಾರೆ ಎಲ್ಲಿಂದ ಬರುತ್ತಾರೆ ಎಂಬುದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳಲಿದ್ದೇವೆ ತಪ್ಪದೆ ಕೊನೆಯವರೆಗೂ ಓದಿ.

ಸ್ನೇಹಿತರೇ ಮೊದಲಿಗೆ ನಾಗಸಾಧು ಹೇಗೆ ಆಗುತ್ತಾರೆ ಎಂಬುದರ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ ನಾಗಸಾಧು ಆಗಲು ಮೊದಲಿಗೆ ಹಲವಾರು ಪರೀಕ್ಷೆಗಳಿಗೆ ಒಡ್ಡಬೇಕಾಗುತ್ತದೆ ಸ್ನೇಹಿತರೆ. ಹೌದು ಸ್ನೇಹಿತರೆ ನಾಗಸಾಧು ಆಗುವವರ ಹಿನ್ನಲೆ ಏನೆಂಬುದನ್ನು ಮೊದಲಿಗೆ ಪರೀಕ್ಷಿಸಲಾಗುತ್ತದೆ. ನಂತರ ಅವರಿಗೆ ಬ್ರಹ್ಮಚರ್ಯದ ಪರೀಕ್ಷೆಯನ್ನು ಕೂಡ ಮಾಡಲಾಗುತ್ತದೆ. ಇದೇ ಸಮಯದಲ್ಲಿ ನಾಗಸಾಧು ಆಗಬೇಕೆಂಬ ವ್ಯಕ್ತಿಗೆ ಬ್ರಹ್ಮಚರ್ಯ ಸನ್ಯಾಸ ವೈರಾಗ್ಯ ತಪಸ್ಸು ಧ್ಯಾನ ಧರ್ಮ ಎಂಬ ದೀಕ್ಷೆಗಳು ನೀಡಲಾಗುತ್ತದೆ. ಹೌದು ಸ್ನೇಹಿತರೆ ಅಕಾಡದಲ್ಲಿ ಈ ಸಮಯದಲ್ಲಿ ಒಂದರಿಂದ ಹನ್ನೆರಡು ವರ್ಷಗಳ ಕಾಲ ಈ ಪ್ರಕ್ರಿಯೆಯಿಂದ ಆತ ಯಶಸ್ವಿ ಆಗಬೇಕಾಗುತ್ತದೆ.

ಒಂದು ವೇಳೆ ಆತ ಈ ಪ್ರಕ್ರಿಯೆಯಲ್ಲಿ ಯಶಸ್ವಿಯಾದರೆ ಮುಂದಿನ ಕ್ರಮಕ್ಕೆ ಹೋಗಬೇಕಾಗುತ್ತದೆ. ಹೌದು ಸ್ನೇಹಿತರೆ ಮುಂದಿನ ಕ್ರಮ ವೇನೆಂದರೆ ಆತ ಪಿಂಡಪ್ರದಾನ ಮಾಡಬೇಕಾಗುತ್ತದೆ. ಹೌದು ಸ್ನೇಹಿತರೆ ಪಿಂಡಪ್ರದಾನ ಮಾಡಿದ ಮೇಲೆ ಆತನಿಗೆ ಆತನ ಸಂಸಾರದಿಂದ ಹಾಗೂ ಸಮಾಜದಿಂದ ಯಾವುದೇ ಸಂಬಂಧಗಳು ಇರುವುದಿಲ್ಲ. ಈ ಪಿಂಡಪ್ರದಾನ ಅರ್ಥವೆಂದರೆ ಆತ ತನ್ನನ್ನು ತಾನೇ ಇಹಲೋಕ ತ್ಯಜಿಸಿದ್ದಾನೆ ಎಂದು ಭಾವಿಸಿ ಕೊಳ್ಳುವುದು. ಇದಾದ ನಂತರ ಪ್ರಪಂಚದಲ್ಲಿ ಯಾವುದೇ ಸಂಸಾರದ ಬಾಂಧವ್ಯಗಳು ಆತನಿಗೆ ಇರುವುದಿಲ್ಲ ಆತ ಕೇವಲ ಸಮಾಜದ ಕಾರ್ಯಗಳಿಗಾಗಿ ಮಾತ್ರ ಸೀಮಿತವಾಗಿರುತ್ತಾನೆ. ಇದಾದ ನಂತರ ಆತನ ಗುರುಗಳು ಆತನಿಗೆ ಹೊಸ ಹೆಸರು ಹಾಗೂ ಹೊಸ ಪರಿಚಯವನ್ನು ನೀಡುತ್ತಾರೆ.

ದೀಕ್ಷೆಯನ್ನು ಪಡೆದ ನಂತರ ಆತ ತನ್ನ ಮೈಮೇಲೆ ಚಿತೆಯಲ್ಲಿ ಬಸ್ಮ ವಾದಂತಹ ಬೂದಿಯನ್ನು ಶುದ್ಧೀಕರಿಸಿ ಮೈತುಂಬ ಬರೆದುಕೊಳ್ಳುತ್ತಾನೆ. ಇದು ಆತನ ದೀಕ್ಷೆ ಪಡೆದ ನಂತರ ಮಾಡಬೇಕಾದಂತಹ ಪ್ರಮುಖ ಕಾರ್ಯಗಳಲ್ಲಿ ಒಂದು. ಇನ್ನು ನಾಗಸಾಧು ಬಿಕ್ಷುಗಳು ಏನು ತಿನ್ನುತ್ತಾರೆ ಎಂಬ ನಿಮ್ಮ ಕುತೂಹಲಕ್ಕೆ ನಾವು ಉತ್ತರ ನೀಡಲು ಹೊರಟಿದ್ದೇವೆ ಸ್ನೇಹಿತರೇ. ಹೌದು ಸ್ನೇಹಿತರೆ ನಾಗಸಾಧುಗಳು ದಿನಕ್ಕೆ ಒಮ್ಮೆ ಮಾತ್ರ ತಿನ್ನಲು ಅವಕಾಶ ಸಿಗುತ್ತದೆ. ಹೌದು ಸ್ನೇಹಿತರ ಅವರಿಗೆ ಹೇಳು ಮನೆಗಳಿಂದ ಭಿಕ್ಷೆಯತ್ತಿ ಆಹಾರವನ್ನು ಪಡೆಯಲು ಅಧಿಕಾರ ನೀಡಲಾಗುತ್ತದೆ. ಒಂದು ವೇಳೆ 7 ಮನೆಗಳಿಂದ ಒಂದು ಮನೆಯಲ್ಲಿ ಕೂಡ ಆಹಾರ ಸಿಗದಿದ್ದರೆ ಅವರು ಅಂದು ಉಪವಾಸ ಇರಬೇಕಾದಂತಹ ಪರಿಸ್ಥಿತಿ ಒದಗಿ ಬರುತ್ತದೆ.

ಇನ್ನು ನಾಗಸಾಧುಗಳು ಎಲ್ಲಿರುತ್ತಾರೆ ಎಂಬ ನಿಮ್ಮ ಅತ್ಯಂತ ದೊಡ್ಡ ಕುತೂಹಲಕ್ಕೆ ಉತ್ತರಿಸಲು ಹೊರಟಿದ್ದೇವೆ. ಎಲ್ಲರೂ ನಂಬಿರುವ ಪ್ರಕಾರ ನಾಗಸಾಧುಗಳು ಹಿಮಾಲಯ ಕಾಶಿ ಗುಜರಾತ್ ಹಾಗೂ ಉತ್ತರಾಖಂಡ ಪರ್ವತಪ್ರದೇಶಗಳಲ್ಲಿ ಗುಹೆಗಳಲ್ಲಿ ವಾಸಿಸುತ್ತಾರೆ ಎಂಬುದಾಗಿ ಕೇಳಿ ಬರುತ್ತದೆ. ಇನ್ನು ಇವರು ಕೇವಲ ಒಂದೇ ಗುಹೆಗಳಲ್ಲಿ ವಾಸಿಸುವುದಿಲ್ಲ ಬದಲಾಗಿ ಗುಹೆಗಳನ್ನು ಬದಲಾಯಿಸುತ್ತಲೇ ಇರುತ್ತಾರೆ. ಇನ್ನು ಕೆಲವು ಸಾಧುಗಳು ಕಾಡಿನಲ್ಲಿ ತಮ್ಮ ಸಮಯಗಳನ್ನು ಕಳೆಯುತ್ತಾ ತಪಸ್ಸು ಮಾಡುತ್ತ ಇರುತ್ತಾರಂತೆ. ಇನ್ನು ಇವರು ಕೇವಲ ಕುಂಭಮೇಳಕ್ಕೆ ಮಾತ್ರ ನಾಗರಿಕ ಸಮಾಜದ ಮುಂದೆ ಬರುತ್ತಾರಂತೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ

Post Author: Ravi Yadav