ಸುಬ್ರಹ್ಮಣ್ಯಸ್ವಾಮಿ ನಾಗಗಳ ದೇವಾ ಆಗಿದ್ದೆಗೆ ಗೊತ್ತೇ?? ಇದು ನೀವರಿಯದ ಕುಕ್ಕೆ ಕ್ಷೇತ್ರದ ಮಹಾರಹಸ್ಯ.

ನಮಸ್ಕಾರ ಸ್ನೇಹಿತರೇ ಕರ್ನಾಟಕದಲ್ಲಿರುವ ಹಲವಾರು ಪುಣ್ಯ ಕ್ಷೇತ್ರಗಳು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಪ್ರಸಿದ್ಧಿಯನ್ನು ಗಳಿಸಿವೆ. ಕೆಲವು ದೇವಾಲಯಗಳಿಗೆ ದೇಶದ ಮೂಲೆ ಮೂಲೆಯಿಂದ ಜನರು ಬಂದು ಹೋಗುತ್ತಾರೆ. ಅಂಥ ಒಂದು ಪುಣ್ಯ ಕ್ಷೇತ್ರ ದಕ್ಷಿಣ ಕನ್ನಡದ ಕುಕ್ಕೇ ಸುಬ್ರಹ್ಮಣ್ಯ! ಹೌದು ಸ್ನೇಹಿತರೆ, ಕುಕ್ಕೇ ಸುಬ್ರಹ್ಮಣ್ಯ ನಾಗ ದೋಷಗಳನ್ನು ನಿವಾರಣೆ ಮಾಡಬಲ್ಲಂಥ ಒಂದು ದೈವಿಕ ಕ್ಷೇತ್ರ. ಇಲ್ಲಿ ಸರ್ಪದೋಷ ಶಾಂತಿ ಮೊದಲಾದ ಪೂಜೆಗಳನ್ನು ಮಾಡಿಸಲು ಜನರ ಮಹಾಪೂರವೇ ಹರಿದುಬರುತ್ತದೆ.

ಇಂಥ ಪುಣ್ಯ ಕ್ಷೇತ್ರದಲ್ಲಿ ಸುಬ್ರಹ್ಮಣ್ಯನೇ ಆರಾಧ್ಯ ದೈವ. ಹಾಗಾದರೆ ಸುಬ್ರಹ್ಮಣ್ಯ ದೇವರಿಗೂ ನಾಗಗಳಿಗೂ ಏನು ಸಂಬಂಧ? ಕೆಲವು ಪೂಜಾ ವಿಧಾನಗಳನ್ನು ಮಾಡಿಸಿದರೆ ನಾಗ ದೋಷ ಪರಿಹಾರ ಆಗುವುದಾದರೂ ಹೇಗೆ? ಏನೀ ಕ್ಷೇತ್ರದ ಮಹಿಮೆ ಇದರ ಹಿನ್ನೆಲೆ ಏನು ಎಂಬ ಕುತೂಹಲ ಸಾಕಷ್ಟು ಜನರಿಗೆ ಇದ್ದೇ ಇದೆ. ಇದಕ್ಕೆಲ್ಲ ಉತ್ತರ ಇಲ್ಲಿದೆ ಮುಂದೆ ಓದಿ..

ಕುಕ್ಕೇ ಸುಬ್ರಹ್ಮಣ್ಯ ದೇವಾಲಯಕ್ಕೆ ಷಣ್ಮುಖನ ಮೊರೆ ಹೋಗಿ ಸಚಿನ್ ತೆಂಡೂಲ್ಕರ್, ರವಿ ಶಾಸ್ತ್ರಿ, ಹೇಮಾ ಮಾಲಿನಿಯಂಥ ಸೆಲಿಬ್ರೆಟಿಗಳೇ ಭೇಟಿ ನೀಡಿ ನಾಗ ದೇವರ ದರ್ಶನ ಪಡೆಯುತ್ತಾರೆ ಎಂದ ಮೇಲೆ ಇಲ್ಲಿನ ಮಹತ್ವ ನಿಮಗೇ ಅರ್ಥವಾಗಿರಬಹುದು. ನಾಗ ದೋಷ ಎನ್ನುವುದು ಶೇಕಡಾ 90ರಷ್ಟು ಜನರನ್ನು ಕಾಡಬಹುದು ಎನ್ನುತ್ತೆ ಜ್ಯೋತಿಶ್ಯಾಸ್ತ್ರ. ಈ ನಾಗ ದೋಷ ಕೇವಲ ನಾಗರ ಹಾವನ್ನು ಕೊಂದಿದ್ದಕ್ಕೆ ಮಾತ್ರವಲ್ಲ, ಪೂರ್ವಜನ್ಮದ ದೋಷವೂ ಕೂಡ ನಮ್ಮನ್ನು ಕಾಡಬಹುದು. ನಾಗ ದೋಷ ಬಂದರೆ ಉಂಟಾಗುವ ಸಮಸ್ಯೆ ಅಷ್ಟಿಷ್ಟಲ್ಲ. ಆದರೆ ಇದನ್ನು ಪರಿಹಾರ ಮಾಡಲು ಷಣ್ಮುಖನೇ ನಮ್ಮ ಕರ್ನಾಟಕದಲ್ಲಿ ನೆಲೆಸಿದ್ದಾನೆ ಎಂಬುದೇ ನಮ್ಮ ಪುಣ್ಯ!

ಇನ್ನು ಕುಕ್ಕೇ ಸುಬ್ರಹ್ಮಣ್ಯ ನಿಗೂ ನಾಗ ದೇವತೆಗಳಿಗೂ ಏನು ಸಂಬಂಧ ಎಂಬ ಪ್ರಶ್ನೆಗೆ ಉತ್ತರ ಇಲ್ಲಿನ ಆದಿ ಸುಬ್ರಹ್ಮಣ್ಯ. ಇಲ್ಲಿನ ಎಲ್ಲಾ ಪವಾಡಗಳಿಗೂ ಆದಿ ಸುಬ್ರಹ್ಮಣ್ಯನೇ ಕಾರಣ. ಇದರ ಹಿಂದೆ ಒಂದು ಪೌರಾಣಿಕ ಕಥೆ ಇದೆ. ಗರುಡ ಪುರಾಣದಲ್ಲಿ ಬರುವ ಕಥೆ. ಗರುಡ ದೇವನ ತಾಯಿ ವಿನತ ಹಾಗೂ ಸರ್ಪಗಳ ತಾಯಿ ಕುದ್ರು ನಡುವಿನ ಜಗಳದಿಂದಾಗಿ, ತನ್ನ ತಾಯಿಗೆ ಅನ್ಯಾಯವಾಗಿದ್ದಕ್ಕೆ ಗರುಡ ದೇವ ಸರ್ಪ ಕುಲವನ್ನು ನಾಶ ಮಾಡುವ ಪಣ ತೊಡುತ್ತಾನೆ.

ಹೀಗೆ ಸರ್ಪಗಳನ್ನು ಕೊಲ್ಲುತ್ತಾ ಕೊಲ್ಲುತ್ತಾ ಗರುಡ ದೇವ ವಾಸುಕಿ ಸರ್ಪದ ಮೇಲೆ ದಾಳಿ ಮಾಡುತ್ತಾನೆ. ವಾಸುಕಿಯನ್ನು ಕಚ್ಚಿ ಸಾಕಷ್ಟು ನೋವನ್ನು ನೀಡಿ ಇನ್ನೇನು ವಾಸುಕಿಯನ್ನು ನಾಶಮಾಡಿಯೇ ಬಿಡುತ್ತಾನೆ ಎನ್ನುವಾಗ ಇಬ್ಬರಿಗೂ ತಂದೆಯಾದ ಕಶ್ಯಪ ಮುನಿಗಳು ಮಧ್ಯ ಪ್ರವೇಶಿಸಿ ಗರುಡ ದೇವನನ್ನು ಸಮಾಧಾನ ಮಾದಿ ಹಿಂದಿರುಗಿಸುತ್ತಾರೆ. ಆದರೆ ಆ ಕ್ಷಣಕ್ಕೆ ಗರುಡನ ಕೋಪ ತಣ್ಣಗಾದರೂ ಮತ್ತೆ ದಾಳಿ ಮಾಡಲು ಬಂದರೆ ಏನು ಮಾಡಲಿ ಎಂದು ವಾಸುಕಿ ಕಶ್ಯಪರಲ್ಲಿ ಕೇಳುತ್ತಾನೆ. ಅದಿಕ್ಕೆ ಕಶ್ಯಪ ಮುನಿಗಳು ಸೂಚಿಸಿದ್ದು ಶಿವಧ್ಯಾನ!

ತನಗೆ ಆದ ಗಾಯದ ನಡುವೆಯೂ ಶಿವನನ್ನು ಧ್ಯಾನ ಮಾಡಿ ಒಲಿಸಿಕೊಳ್ಳುತ್ತಾನೆ ವಾಸುಕಿ. ಶಿವನು ವಾಸುಕಿಯ ದೇಹದ ಮೇಲಾದ ಗಾಯವನ್ನು ವಾಸಿಮಾಡಿಕೊಳ್ಳಲು ಮಹಿ ನದಿಯಲ್ಲಿ ಭಕ್ತಿಯಿಂದ ಸ್ನಾನ ಮಾಡಲು ಶಿವ ಸೂಚಿಸುತ್ತಾನೆ. ಆಗ ವಾಸುಕಿಗೆ ಸಂತೋಷವಾಗುತ್ತದೆ ಜೊತೆಗೆ ಭಯವೂ ಕಾಡುತ್ತದೆ. ಯಾಕೆಂದರೆ, ವಾಸುಕಿ ಗರುಡ ತನ್ನನ್ನು ಮತ್ತೆ ಕಾಡಿದರೆ ಏನು ಮಾಡಬೇಕು ಎಂದು. ಆಗ ಮಹಾದೇವನು ಸುಬ್ರಹ್ಮಣ್ಯ ಸ್ವಾಮಿಯ ಬಗ್ಗೆ ಹೇಳುತ್ತಾನೆ. ’ವಾಸುಕಿ ನೀನು ಮಹಿ ನದಿಯಲ್ಲಿ ಸ್ನಾನ ಮಾಡಿ ಅಲ್ಲಿಯೇ ಷಣ್ಮುಖನ ಧ್ಯಾನ ಮಾಡು ಮುಂದೊಂದು ದಿನ ಅಲ್ಲಿಗೆ ಬರುವ ಸುಬ್ರಹ್ಮಣ್ಯ ನಿನ್ನ ಭಕ್ತಿಗೆ ಮೆಚ್ಚಿ ನಿನಗೆ ಅಭಯ ನೀಡುತ್ತಾನೆ. ಅವನ ಸೇವೆಯನ್ನು ಮಾಡಿ ಮೆಚ್ಚಿಸಿ, ನಿನ್ನ ಮೇಲೆ ಅವನು ನೆಲೆಸುವಂತೆ ಕೇಳಿಕೋ. ಇದರಿಂದ ನಿನ್ನ ಸಮಸ್ಯೆ ಬಗೆಹರಿಯುತ್ತದೆ’ ಎಂಬ ಸೂಚನೆಯನ್ನು ಕೊಡುತ್ತಾನೆ ಈಶ್ವರ.

ಈಶ್ವರನ ಮಾತು ನಿಜವಾಗುತ್ತೆ. ಒಂದು ಸೂಕ್ತ ಕಾರಣಕ್ಕೆ ವಾಸುಕಿ ಧ್ಯಾನ ಮಾಡುತ್ತಿರುವ ಈ ಸ್ಥಳಕ್ಕೆ ಬರುತ್ತಾನೆ ಕಾರ್ತೀಕೇಯ. ಅದುವೇ ತಾರಕಾಸುರನ ವಧೆ. ಲೋಕ ಕಂಟಕನಾಗಿದ್ದ ತಾರಕಾಸುರನನ್ನು ವಧಿಸಲೆಂದೇ ಹುಟ್ಟಿದ್ದು ಷಣ್ಮುಖ. ತಾರಕಾಸುರನನ್ನು ವಧಿಸಿದ ನಂತರ ಷಣ್ಮುಖನ ಆಯುಧಕ್ಕೆ ತಾರಕಾಸುರನ ರಕ್ತ ಅಂಟಿಕೊಳ್ಳತ್ತೆ. ಅದನ್ನು ಎಲ್ಲಿ ತೊಳಿದರೂ ಹೋಗದಿದ್ದ ಕಾರಣ, ಶಿವನನ್ನು ಪರಿಹಾರ ಕೇಳುತ್ತಾನೆ ಕಾರ್ತೀಕೇಯ. ಹಾಗಾಗಿ ಶಿವ ಮಹಿ ನದಿಯಲ್ಲಿ ಅದನ್ನು ತೊಳೆಯುವಂತೆ ಸೂಚಿಸುತ್ತಾನೆ. ಹಾಗಾಗಿ ಷಣ್ಮುಖ ವಾಸುಕಿ ಇರುವ ಸ್ಥಳಕ್ಕೆ ಬರಬೇಕಾಯಿತು.

ಷಣ್ಮುಖನ ಶಕ್ತಿ ಆಯುಧಕ್ಕೆ ಅಂಟಿದ ರಕ್ತವನ್ನು ತೊಳೆದ ಮಹಿ ನದಿ ಮತ್ಯಾವುದೂ ಅಲ್ಲ, ಅದುವೇ ಇಂದಿನ ಕುಮಾರಧಾರಾ ನದಿ ಸ್ನೇಹಿತರೆ. ಕುಮಾರ ಸ್ವಾಮಿ ಆಯುಧ ತೊಳೆದ ಸ್ಥಳವೇ ಕುಮಾರ ಧಾರಾ. ಸುಬ್ರಹ್ಮಣ್ಯ ಮೊಟ್ತ ಮೊದಲು ಕಾಲಿಟ್ಟ ಜಾಗವೇ ಆದಿ ಸುಬ್ರಹ್ಮಣ್ಯವಾಯಿತು. ಈ ಸ್ಥಳದಲ್ಲಿ ತನ್ನ ಧ್ಯಾನ ಮಾಡುತ್ತಿದ್ದ ವಾಸುಕಿಯನ್ನು ನೋಡಿ ಅವನ ಇಚ್ಛೆಯಂತೆ ಸುಬ್ರಹ್ಮಣ್ಯ ವಾಸುಕಿಯ ಮೇಲೆ ನೆಲೆಸುತ್ತಾನೆ. ಹಾಗೆಯೇ ಈ ಕ್ಷೇತ್ರಕ್ಕೆ ಬರುವ ಜನರ ನಾಗ ದೋಷವನ್ನು ನೀನು ನಿವಾರಿಸಬೇಕು ಎಂಡು ವಾಸುಕಿಗೆ ಸೂಚಿಸುತ್ತಾನೆ. ಹಾಗಾಗಿ ಇಂದಿಗೂ ಶಿವನ ಆಭರಣ, ಜನರ ಮಹಾನ್ ದೈವ ನಾಗನು ಇಲ್ಲಿಯೇ ನೆಲೆಸಿ ನಾಗ ದೋಷ ಪರಿಹಾರ ಮಾಡುತ್ತಿದ್ದಾನೆ ಎನ್ನುವ ಪ್ರತೀತಿಯಿದೆ. ಹಾಗಾಗಿ ಈ ಸ್ಥಳಕ್ಕೆ ಬಂದ ಲಕ್ಷಾಂತರ ಜನ ನಾಗ ದೋಷ ನಿವಾರಣೆ ಮಾಡಿಸಿಕೊಂಡು ಹೋಗುತ್ತಾರೆ.

Post Author: Ravi Yadav