ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರಿಗೆ ಸ್ಪಷ್ಟ ಸಂದೇಶ ನೀಡಿದ ಗಡ್ಕರಿ, ಚೀನಾಗೆ ಕಾದಿದೆಯೇ ಮತ್ತೊಂದು ಶಾಕ್??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ವಿಶ್ವದ ಬಹುತೇಕ ರಾಷ್ಟ್ರಗಳ ಉದ್ಯಮಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಚೀನಾ ದೇಶದಲ್ಲಿ ಸ್ಥಾಪಿಸಿದ್ದಾರೆ. ಅಲ್ಲಿರುವ ಜನ ಸಂಪನ್ಮೂಲದ ಬಳಕೆ ಹಾಗೂ ಕಡಿಮೆ ದರಕ್ಕೆ ಕೆಲಸಗಾರರು ಸಿಗುವ ಕಾರಣ ಹಾಗೂ ಚೀನಾ ದೇಶ ಉತ್ಪಾದನಾ ಘಟಕಗಳಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸುವ ಕಾರಣ ಇಷ್ಟು ದಿವಸ ಚೀನಾ ದೇಶಕ್ಕೆ ಹಲವಾರು ಉತ್ಪಾದನಾ ಘಟಕಗಳು ವಲಸೆ ಹೋಗಿದ್ದನ್ನು ನೀವು ನೋಡಿರಬಹುದು ಆದರೆ ಇದೆಲ್ಲ ಇದೀಗ ಹಳೆಯ ಕಥೆಯಾಗಿದೆ, ಯಾಕೆಂದರೆ ವಿಶ್ವದ ವಿವಿಧ ದೇಶಗಳ ಉದ್ಯಮಿಗಳು ಭಾರತದ ಮಾರುಕಟ್ಟೆ ಮೇಲೆ ಹಾಗೂ ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಆಸಕ್ತಿ ತೋರುತ್ತಿದ್ದಾರೆ.

ಇಷ್ಟು ದಿವಸ ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಸಾಕು ಎಂಬ ಉದ್ದಿಮೆಗಳ ಆಲೋಚನೆ ಇದೀಗ ಬದಲಾಗುತ್ತಿದ್ದು ಉತ್ಪಾದನಾ ಘಟಕಗಳು ಕೂಡ ಭಾರತದಲ್ಲಿ ಸ್ಥಾಪಿತವಾಗುತ್ತಿವೆ. ಇದರಿಂದ ಉದ್ಯೋಗ ಹಾಗೂ ಭಾರತದ ಆರ್ಥಿಕತೆ ಮತ್ತಷ್ಟು ಬಲಗೊಳ್ಳಲಿದೆ. ಆದರೆ ಇದೇ ಸಮಯದಲ್ಲಿ ಇದಕ್ಕೆ ಪೂರಕವಾದ ವಾತಾವರಣ ಕೂಡ ನಿರ್ಮಾಣ ಮಾಡಲು ಭಾರತ ಮತ್ತಷ್ಟು ಕೆಲಸ ಮಾಡ ಬೇಕಾಗಿರುವುದು ಸುಳ್ಳಲ್ಲ. ಇಷ್ಟೇ ಅಲ್ಲದೆ ಇದೀಗ ಭಾರತ ತನ್ನ ನಿಲುವುಗಳನ್ನು ಹಲವಾರು ವಿಚಾರಗಳಲ್ಲಿ ಸ್ಪಷ್ಟ ಪಡಿಸುತ್ತಿದ್ದು, ಚೀನಾ ದೇಶಕ್ಕೆ ಮತ್ತೊಂದು ಶಾಕ್ ನೀಡಲು ಭಾರತ ಮುಂದಾಗಿದೆ ಎಂದರೆ ತಪ್ಪಾಗಲಾರದು.

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯ ಕಣ್ಣು ಭಾರತದ ಮಾರುಕಟ್ಟೆಯ ಮೇಲೆ ಬಿದ್ದಿದ್ದು, ಭಾರತದಲ್ಲಿ ಕಾರುಗಳನ್ನು ಮಾರಾಟ ಮಾಡುವ ಆಲೋಚನೆ ನಡೆಸುತ್ತಿದೆ. ಈ ಕುರಿತು ಚರ್ಚೆ ನಡೆಯುವಾಗ ನಿತಿನ್ ಗಡ್ಕರಿ ರವರು ಮಾತನಾಡಿದ್ದು ಒಂದು ವೇಳೆ ಟೆಸ್ಲಾ ಕಂಪನಿ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಬೇಕು ಎಂದುಕೊಂಡರೆ ಭಾರತದಲ್ಲಿ ಮಾರಾಟವಾಗುವ ಪ್ರತಿ ಕಾರನ್ನು ಭಾರತದಲ್ಲಿಯೇ ತಯಾರು ಮಾಡಬೇಕು ಅದಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನಾವು ಒದಗಿಸುತ್ತೇವೆ, ಚೀನಾ ದೇಶದಿಂದ ಆಮದು ಮಾಡಿಕೊಂಡು ಇಲ್ಲಿ ಮಾರಾಟ ಮಾಡಲು ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಭಾರತದ ಬೃಹತ್ ಮಾರುಕಟ್ಟೆಗೆ ಎಂಟ್ರಿ ಕೊಡಲು ಎಲಾನ್ ಮಸ್ಕ್ ಅವರು ಭಾರತದಲ್ಲಿ ಉತ್ಪಾದನಾ ಘಟಕ ತೆರೆಯಬೇಕಾದ ಪರಿಸ್ಥಿತಿ ಎದುರಾಗಿದೆ.