ಮುಂಜಾನೆ ಎದ್ದೇಳಲು ಯಾವುದು ಶುಭ ಸಮಯ ಗೊತ್ತಾ?? ಈ ಮುಹೂರ್ತ ದಲ್ಲಿ ಎದ್ದು ನೋಡಿ, ಅದೃಷ್ಟ ನಿಮ್ಮದಾಗುತ್ತದೆ.

ನಮಸ್ಕಾರ ಸ್ನೇಹಿತರೇ , ಹಿರಿಯರು ನಮ್ಮ ಜೀವನಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಮಾಡಿಟ್ಟಿದ್ದಾರೆ. ಇನ್ನು ಪುರಾಣಗಳಲ್ಲಿಯೂ ಕೂಡ ಇಂಥ ಹಲವು ನಿಯಮಗಳನ್ನು ನೋಡಬಹುದು. ಆದರೆ ನಾವು ಆಧುನಿಕತೆಯ ಹೆಸರಿನಲ್ಲಿ ಇದೆಲ್ಲವನ್ನೂ ತಿರಸ್ಕರಿಸುತ್ತಾ ಬಂದಿದ್ದೇವೆ. ಹಾಗಾಗಿಗಿಯೇ ನಮಗೆ ನಿತ್ಯದ ಖಾಯಿಲೆಗಳಿಂದ ಬಳಲುವಿಕೆಯೂ ತಪ್ಪಿದ್ದಲ್ಲ. ಹೌದು ಬ್ರಾಹ್ಮೀ ಮುಹೂರ್ತದಲ್ಲಿಯೇ ಏಳಬೇಕು ಎಂಬುದು ಒಂದು ಜೀವನೋಪದೇಷ ಎಂದೇ ಹೇಳಬಹುದು. ಆದರೆ ಇದನ್ನು ನಾವೆಷ್ಟು ಜನ ಪಾಲಿಸುತ್ತೇವೆ. ಇನ್ನು ಈ ಸಮಯದಲ್ಲಿ ಎದ್ದರೆ ನಮಗೆ ಆಗುವ ಪ್ರಯೋಜನ ಹಾಗೂ ದೊರೆಯುವ ಫಲಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.

ಸೂರ್ಯ ಹುಟ್ಟುವುದಕ್ಕಿಂದ ಒಂದುವರೆ ಗಂಟೆ ಮುಂಚಿನ ಅವಧಿಯನ್ನು ಬ್ರಾಹ್ಮಿ ಮುಹೂರ್ತ ಎನ್ನುತ್ತಾರೆ. ಸುರ್ಯೋದಯದ ಮೊದಲು ಎದ್ದರೆ ನಮ್ಮ ಜೀವಕ್ಕೆ, ಜೀವನಕ್ಕೆ ಸಾಕಷ್ಟು ಫಲಗಳು ಸಿಗುತ್ತವೆ. ಮೊದಲನೆಯದಾಗಿ ಮನಃಶಾಂತಿ. ಸೂರ್ಯ ಹುಟ್ಟುವುದಕ್ಕೂ ಮೊದಲು ಎದ್ದು ಕೈ ಮುಗಿದು ಸೂರ್ಯನನ್ನು ನೆನೆದು ಧ್ಯಾನ, ಪ್ರಾಣಾಯಾಮ, ವ್ಯಾಯಾಮಗಳನ್ನು ಮಾಡುವುದರಿಂದ ದೇಹ ಸದೃಢವಾಗುವುದು ಮಾತ್ರವಲ್ಲದೆ ಮನಸ್ಸಿಗೆ ಕೂಡ ಶಾಂತಿ ಲಭಿಸುತ್ತದೆ. ಇದರಿಂದ ಆ ದಿನ ಪೂರ್ತಿ ನೀವು ಉಲ್ಲಾಸದಿಂದ ಕೆಲಸಗಳನ್ನು ಮಾಡಬಹುದು.

ಇನ್ನು ಸುರ್ಯೋದಯದ ಮೊದಲು ಎದ್ದರೆ ಆರೋಗ್ಯ ಪ್ರಯೋಜನಗಳು ಹಲವು. ಈ ಸಮಯದಲ್ಲಿ ಎದ್ದು ಜಾಗಿಂಗ್, ವಾಕಿಂಗ್ ಹೋಗುವುದರಿಂದ ಪ್ರದೂಷಣ ಮುಕ್ತ ತಾಜಾ ಗಾಳಿ ದೇಹ ಸೇರುತ್ತದೆ. ಜೊತೆಗೆ ದೇಹಕ್ಕೆ ಬೇಕಾದ ಹೊಸ ಎನರ್ಜಿ ದೊರೆಯುತ್ತದೆ. ಜೊತೆಗೆ ಆಯಸ್ಸು ಕೂಡ ವೃದ್ಧಿಸುತ್ತದೆ. ಯಾವುದೇ ಕಾಯಿಲೆ ಖಸಾಲೆಗಳೂ ನಮ್ಮ ಬಳಿ ಸುಳಿಯುವುದಿಲ್ಲ. ಇನ್ನು ಧಾರ್ಮಿಕವಾಗಿಯೂ ಕೂಡ ಸುರ್ಯೋದಯದ ಮೊದಲು ಏಳುವುದು, ಮನೆ ಸ್ವಚ್ಛಗೊಳಿಸುವುದು, ಸ್ನಾನ, ದೇವರ ಪೂಜೆ ಇವೆಲ್ಲವೂ ನಮ್ಮ ದೇಹದಲ್ಲಿ ಸಕಾರಾತ್ಮಕತೆಯನ್ನು ಹುಟ್ಟುಹಾಕುತ್ತದೆ. ಇದು ದಿನವಿಡಿ ಸಂತೋಷವಾಗಿರುವುದಕ್ಕೆ ಸಹಾಯವಾಗುತ್ತದೆ. ಇಷ್ಟೇಲ್ಲ ಫಲಗಳು ಕೇಲವ ಸೂರ್ಯೋದಯದ ಮೊದಲು ಏಳುವುದರಿಂದ ಸಿಗುವುದಾದರೆ ಆ ಪ್ರಯೋಜನವನ್ನು ನಾವೂ ಯಾಕೆ ಪಡೆದುಕೊಳ್ಳಬಾರದು ಸ್ನೇಹಿತರೆ!

Post Author: Ravi Yadav