ಐಪಿಎಲ್ ಪ್ರದರ್ಶದ ಆಧಾರದ ಮೇಲೆ ಟಿ 20 ವಿಶ್ವಕಪ್ ತಂಡದಿಂದ ಹೊರಗುಳಿಯುವ ನಾಲ್ಕು ಆಟಗಾರರು ಯಾರ್ಯರಂತೆ ಗೊತ್ತೇ??
ಐಪಿಎಲ್ ಪ್ರದರ್ಶದ ಆಧಾರದ ಮೇಲೆ ಟಿ 20 ವಿಶ್ವಕಪ್ ತಂಡದಿಂದ ಹೊರಗುಳಿಯುವ ನಾಲ್ಕು ಆಟಗಾರರು ಯಾರ್ಯರಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಟಿ 20 ವಿಶ್ವಕಪ್ ಇದೇ ಅಕ್ಟೋಬರ್ 24 ರಿಂದ ಯು.ಎ.ಇ.,ಅಬುಧಾಬಿ, ದುಬೈ ಮತ್ತು ಶಾರ್ಜಾದಲ್ಲಿ ನಡೆಯಲಿದೆ. ಈಗಾಗಲೇ ಎಲ್ಲಾ ದೇಶದ ತಂಡಗಳನ್ನು ಪ್ರಕಟಿಸಲಾಗಿದ್ದು, ತಂಡದಲ್ಲಿ ಬದಲಾವಣೆ ಮಾಡಲು ಐಸಿಸಿ ಅಕ್ಟೋಬರ್ 10ರ ವರೆಗೆ ಸಮಯ ನೀಡಿದೆ. ಇದೇ ವೇಳೆ ಸದ್ಯದ ಐಪಿಎಲ್ ನಡೆಯುತ್ತಿರುವುದು ಇದೇ ಪಿಚ್ ಗಳಲ್ಲಿ. ಆದರೇ ಭಾರತ ತಂಡದಲ್ಲಿ ಸ್ಥಾನ ಪಡೆದ ಕೆಲ ಆಟಗಾರರು ಸದ್ಯ ತಮ್ಮ ವೃತ್ತಿ ಜೀವನದ ಕೆಟ್ಟ ಫಾರ್ಮ್ ನ್ನು ಅನುಭವಿಸುತ್ತಿದ್ದಾರೆ. ಆದರೇ ಅವರೆಲ್ಲ ಭಾರತ ತಂಡದಲ್ಲಿ ಸ್ಥಾನ ಪಡೆದರೂ , ತಮ್ಮ ಐಪಿಎಲ್ ತಂಡದಲ್ಲಿ ಆಡುವ ಹನ್ನೊಂದರ ಬಳಗದಿಂದಲೇ ಸ್ಥಾನ ಕಳೆದುಕೊಳ್ಳುತ್ತಿದ್ದಾರೆ. ಇದು ಸದ್ಯ ಭಾರತ ತಂಡದ ಟೀಮ್ ಮ್ಯಾನೇಜ್ ಮೆಂಟ್ ಮತ್ತು ನಾಯಕ ವಿರಾಟ್ ಕೊಹ್ಲಿಗೆ ಚಿಂತೆಯಾಗಿದೆ.
ಈ ಬಗ್ಗೆ ತಮ್ಮ ಯೂ ಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿರುವ ಭಾರತ ತಂಡದ ಮಾಜಿ ಆಟಗಾರ, ಖ್ಯಾತ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ, ಸದ್ಯ ಪ್ರಕಟವಾಗಿರುವ ಭಾರತ ತಂಡದ ನಾಲ್ವರು ಸದಸ್ಯರನ್ನು ಕೈ ಬಿಟ್ಟು, ಅವರ ಬದಲು ಹೊಸ ನಾಲ್ಕು ಆಟಗಾರರನ್ನ ಸೇರಿಸಬೇಕು ಎಂದಿದ್ದಾರೆ. ಸದ್ಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವ ಇಶಾನ್ ಕಿಶನ್ ಮತ್ತು ರಾಹುಲ್ ಚಾಹರ್, ರನ್ ಗಳಿಸಲು ತಿಣುಕಾಡುತ್ತಿರುವ ಸೂರ್ಯ ಕುಮಾರ್ ಯಾದವ್ ಹಾಗೂ ವಿಕೇಟ್ ಗಳಿಸಲು ಪರದಾಡುತ್ತಿರುವ ವೇಗಿ ಭುಶನೇಶ್ವರ್ ಕುಮಾರ್, ಬೌಲಿಂಗ್ ಮಾಡದಿರುವ ಹಾರ್ದಿಕ್ ಪಾಂಡ್ಯ ಇವರನ್ನ ತಂಡದಿಂದ ಕೈ ಬಿಡುವುದು ಭಾರತ ತಂಡದ ವಿಶ್ವಕಪ್ ಗೆಲುವಿನ ಹಿತದೃಷ್ಠಿಯಿಂದ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇವರ ಬದಲು ಈಗ ಮೀಸಲು ಆಟಗಾರರಾಗಿ ಸ್ಥಾನ ಪಡೆದಿರುವ ಶ್ರೇಯಸ್ ಅಯ್ಯರ್ ಹಾಗೂ ಶಾರ್ದೂಲ್ ಠಾಕೂರ್ ರವರನ್ನ ಮುಖ್ಯ ತಂಡಕ್ಕೆ ಸೇರಿಸಬೇಕು. ಉತ್ತಮ ಫಾರ್ಮ್ ನಲ್ಲಿರುವ ಶಿಖರ್ ಧವನ್ ಮತ್ತು ಯುಜವೇಂದ್ರ ಚಾಹಲ್ ಹಾಗೂ ಪರ್ಪಲ್ ಕ್ಯಾಪ್ ಲಿಸ್ಟ್ ನಲ್ಲಿರುವ ಹರ್ಷಲ್ ಪಟೇಲ್ ರನ್ನ ತಂಡದಲ್ಲಿ ಸೇರಿಸಬೇಕು. ಆಗ ತಂಡದ ಸಂಯೋಜನೆ ಅತ್ಯುತ್ತಮವಾಗಿರುತ್ತದೆ ಎಂದು ಹೇಳಿದ್ದಾರೆ. ವಿಶ್ವಕಪ್ ನಂತಹ ಮಹತ್ವದ ಟೂರ್ನಿಗೆ ಹೋಗುವ ಮುನ್ನ ತಂಡದ ಮೀಸಲು ಆಟಗಾರರು ಸೇರಿ ಎಲ್ಲರೂ ಅದ್ಭುತ ಫಾರ್ಮ್ ನಲ್ಲಿರಬೇಕು. ಆಗ ಮಾತ್ರ ತಂಡ ವಿಶ್ವಕಪ್ ಜಯಿಸಬಹುದು ಎಂದು ಹೇಳಿದ್ದಾರೆ. ಹಾಗಾಗಿ ಭಾರತ ತಂಡದಲ್ಲಿ ಫಾರ್ಮ್ ನಲ್ಲಿ ಇಲ್ಲದ ಆಟಗಾರರನ್ನ ಕೈ ಬಿಡುವುದು ಒಳ್ಳೆಯದು ಎಂದು ಹೇಳಿದ್ದಾರೆ. ಆಕಾಶ್ ಚೋಪ್ರಾರವರ ಸಂಭವನೀಯ ತಂಡ ಇಂತಿದೆ. ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ರಿಷಭ್ ಪಂತ್, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್,ಮಹಮದ್ ಶಮಿ, ಜಸ್ಪ್ರಿತ್ ಬುಮ್ರಾ, ಯುಜವೇಂದ್ರ ಚಾಹಲ್,ವರುಣ್ ಚಕ್ರವರ್ತಿ. ಶ್ರೇಯಸ್ ಅಯ್ಯರ್,ಶಾರ್ದೂಲ್ ಠಾಕೂರ್, ದೀಪಕ್ ಚಾಹರ್,ಸಂಜು ಸ್ಯಾಮ್ಸನ್.